2026-06-08 01:23:42

Jana Nayagan | ವಿಜಯ್‌ ನಟನೆಯ ಜನ ನಾಯಗನ್ ಸಿನಿಮಾ ವಿಳಂಬದಿಂದ ಚಿತ್ರಮಂದಿರಗಳಿಗೆ 100 ಕೋಟಿ ನಷ್ಟ | Speed News Kannada

Jana Nayagan | ವಿಜಯ್‌ ನಟನೆಯ ಜನ ನಾಯಗನ್ ಸಿನಿಮಾ ವಿಳಂಬದಿಂದ ಚಿತ್ರಮಂದಿರಗಳಿಗೆ  100 ಕೋಟಿ ನಷ್ಟ | Speed News Kannada

ಚೆನ್ನೈ: ರಾಜಕಾರಣ ಪ್ರವೇಶಿಸಿರುವ ತಮಿಳು ನಟ ವಿಜಯ್‌ ನಟನೆಯ ಕೊನೆಯ ಚಿತ್ರ  ‘ಜನ ನಾಯಗನ್’ ಜನವರಿ 10ಕ್ಕೆ ತೆರೆ ಕಾಣಬೇಕಿತ್ತು ಆದರೆ ಸಿಬಿಎಫ್‌ ಸಿ, ಪ್ರಮಾಣ ಪತ್ರ ನೀಡಲು ವಿಳಂಬ ಮಾಡುತ್ತಿದ್ದು, ರಾಜಕೀಯ ಕಾರಣಗಳಿಗೆ ಈ ವರೆಗೆ ಬಿಡುಗಡೆ ಆಗಿಲ್ಲ. 
 ‘ಜನ ನಾಯಗನ್’ ಸಿನಿಮಾ ಪ್ರಕರಣ ನ್ಯಾಯಾಲಯದಲ್ಲಿದ್ದು, ಬಿಡುಗಡೆ ಇನ್ನಷ್ಟು ತಡವಾಗುವ ಸಾಧ್ಯತೆಗಳಿವೆ. ಇದರಿಂದ ಚಿತ್ರಮಂದಿರಗಳಿಗೂ ಸಹ ಸುಮಾರು 100 ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ. 
ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಅಭಿಪ್ರಾಯವೂ ರಾಜಕೀಯ ವಲಯಗಳಲ್ಲಿ  ಕೇಳೀ ಬರುತ್ತಿದೆ. ಸಿನಿಮಾ ಬಿಡುಗಡೆ ತಡವಾಗಿರುವುದರಿಂದ ನಿರ್ಮಾಪಕ ಕೆವಿಎನ್ ಭಾರಿ ನಷ್ಟ ಅನುಭವಿಸುತ್ತಿದ್ದಾರೆ. 
ಬೆಂಗಳೂರು ಸೇರಿದಂತೆ ದೇಶಾದ್ಯಂತ ಸಾವಿರಾರು ಮಂದಿ ಸಿನಿಮಾ ವೀಕ್ಷಿಸಲು ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿಕೊಂಡಿದ್ದರು. ಆದರೆ ಹಠಾತ್ತನೇ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ಇದರಿಂದ ಚಿತ್ರಮಂದಿರಗಳಿಗೆ ಭಾರಿ ಹೊಡೆತ ಬಿದ್ದಿದೆ ಮತ್ತು ನಷ್ಟ ಅನುಭವಿಸುವಂತಾಗಿದೆ.
ವಿಜಯ್ ಸಿನಿಮಾಗಳು ಇತ್ತೀಚೆಗಿನ ವರ್ಷಗಳಲ್ಲಿ ಚಿತ್ರಮಂದಿರಗಳಿಗೆ ಬಂಪರ್ ಲಾಭವನ್ನೇ ತಂದುಕೊಟ್ಟಿವೆ. ಅದರಲ್ಲೂ ‘ಜನ ನಾಯಗನ್’ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಭಾರಿ ಜನ ಪ್ರವಾಹವವನ್ನೇ ಚಿತ್ರಮಂದಿರಗಳು ಎದುರು ನೋಡುತ್ತಿದ್ದವು. 
 ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್‌ ಸಿ ಪ್ರಮಾಣ ಪತ್ರ ನಿರಾಕರಿಸಿರುವ ಪ್ರಕರಣವನ್ನು ಇದೀಗ ಹೈಕೋರ್ಟ್‌ ಏಕಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆ. ಆದರೆ ಅಲ್ಲಿ ಪ್ರಕರಣ ಮತ್ತಷ್ಟು ವಿಳಂಬವಾಗಲಿದೆ. ಇದೇ ಕಾರಣಕ್ಕೆ ನಿರ್ಮಾಪಕರು, ತಾವು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲಿದ್ದು, ಸಿನಿಮಾವನ್ನು ಸಿಬಿಎಫ್‌ ಸಿ ಮೊದಲು ನಿರ್ಣಯಿಸಿದಂತೆ ರಿವ್ಯೂ ಕಮಿಟಿಗೆ ಕಳಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ
ಸಿನಿಮಾವನ್ನು ಮತ್ತೆ ರಿವ್ಯೂ ಕಮಿಟಿಗೆ ಕಳಿಸಿದಲ್ಲಿ, ಸಿಬಿಎಫ್‌ ಸಿ ಹೇಳಿದ ಎಲ್ಲ ಕಟ್ ಮತ್ತು ಮ್ಯೂಟ್‌ ಗಳನ್ನು ಚಿತ್ರತಂಡ ಒಪ್ಪಿಕೊಳ್ಳಬೇಕಿದೆ. ಆದರೆ ಇದರಿಂದ ಆಗುವ ಲಾಭವೆಂದರೆ ರಿವ್ಯೂ ಕಮಿಟಿಗೆ ಹೋದ ಸಿನಿಮಾಗಳಿಗೆ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಪ್ರಮಾಣ ಪತ್ರ ನೀಡಬೇಕಿರುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆ, ಆದೇಶಗಳು ವಿಳಂಬ ಆಗುವ ಭೀತಿ ಇರುವ ಕಾರಣಕ್ಕೆ ಇದೀಗ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸುವ ನಿರ್ಧಾರವನ್ನು ಚಿತ್ರತಂಡ ಮಾಡಿದೆ ಎನ್ನಲಾಗುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.