2026-03-07 08:38:43

Jailed Rajpal Yadav granted temporary release | ಜೈಲು ಸೇರಿದ ರಾಜ್‌ಪಾಲ್ ಯಾದವ್‌ಗೆ ತಾತ್ಕಾಲಿಕ ಬಿಡುಗಡೆ ಕಾರಣವೇನು | Speed News Kannada

Jailed Rajpal Yadav granted temporary release | ಜೈಲು ಸೇರಿದ ರಾಜ್‌ಪಾಲ್ ಯಾದವ್‌ಗೆ ತಾತ್ಕಾಲಿಕ ಬಿಡುಗಡೆ ಕಾರಣವೇನು | Speed News Kannada

ಬಾಲಿವುಡ್ನ ಖ್ಯಾತ ನಟ ರಾಜ್‌ಪಾಲ್ ಯಾದವ್ 9 ಕೋಟಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು ಈಗಾಗಲೇ ಅವರು ಜೈಲು ಪಾಲಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಸೋನು ಸೂದ್ ಸೇರಿದಂತೆ ಇನ್ನೂ ಕೆಲವರು ರಾಜ್‌ಪಾಲ್ ಯಾದವ್ ಅವರ ನೆರವಿಗೆ ಧಾವಿಸಿದ್ದು, ರಾಜ್‌ ಪಾಲ್ ಯಾದವ್ ಅವರ ಸಾಲದ ಹಣ ನೀಡಿ ಅವರನ್ನು ಬಿಡಿಸಿಕೊಳ್ಳಲು ಮುಂದಾಗಿದ್ದಾರೆ.
ಇವುಗಳ ನಡುವೆ ರಾಜ್‌ಪಾಲ್ ಯಾದವ್ ಅವರಿಗೆ ನ್ಯಾಯಾಲಯದಿಂದಲೇ ತಾತ್ಕಾಲಿಕ ಬಿಡುಗಡೆ ದೊರಕಿದೆ.ರಾಜ್‌ಪಾಲ್ ಯಾದವ್ ಅವರ ಸಹೋದರನ ಪುತ್ರಿಯ ಮದುವೆ ಇದ್ದು, ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್‌ಪಾಲ್ ಯಾದವ್ ಅವರು ತಾತ್ಕಾಲಿಕ ಬಿಡುಗಡೆಯನ್ನು ಕೋರಿದ್ದರು. ಅದರಂತೆ ಇದೀಗ ನ್ಯಾಯಾಲಯವು ರಾಜ್‌ಪಾಲ್ ಯಾದವ್ ಅವರಿಗೆ ತಾತ್ಕಾಲಿಕ ಬಿಡುಗಡೆ ಮಂಜೂರು ಮಾಡಿದ್ದು, ಮಾರ್ಚ್ 18 ರ ವರೆಗೆ ಅವರು ಜೈಲಿನಿಂದ ಹೊರಗೆ ಇರಲಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಮತ್ತೆ ತಿಹಾರ್ ಜೈಲು ಸೇರಿಕೊಳ್ಳಬೇಕಿದೆ. ರಾಜ್‌ಪಾಲ್ ಯಾದವ್ ಅವರಿಗೆ ಹಲವು ಷರತ್ತುಗಳ ಮೇಲೆ ಈ ಮಧ್ಯಂತರ ಜಾಮೀನು ನೀಡಲಾಗಿದೆ.
ಜೈಲಿಂದ ಹೊರಬಂದ ಬಳಿಕ ಮಾಧ್ಯಮಗಳ ಬಳಿ ಮಾತನಾಡಿರುವ ರಾಜ್‌ಪಾಲ್ ಯಾದವ್, 'ನನಗೆ ಬೆಂಬಲವಾಗಿ ನಿಂತಿರುವ ಎಲ್ಲರಿಗೂ ಧನ್ಯವಾದ, ನನ್ನ ದೇಶದ ಜನ ಮತ್ತು ಬಾಲಿವುಡ್ ಮಂದಿ ನನ್ನನ್ನು ಪ್ರೀತಿಸಿದ್ದಾರೆ. ಅವರ ಪ್ರೀತಿಯಿಂದಲೇ ನಾನು ಧೈರ್ಯವಾಗಿದ್ದೇನೆ. ಕಳೆದ ಹತ್ತು ವರ್ಷಗಳಿಂದಲೂ ನಾನು ನ್ಯಾಯಾಲಯವನ್ನು ಗೌರವಿಸುತ್ತಾ ಬಂದಿದ್ದೇನೆ. ಎಲ್ಲೆಲ್ಲಿ ನ್ಯಾಯಾಲಯ ಆದೇಶಿಸಿದೆಯೋ ಅಲ್ಲೆಲ್ಲ ನಾನು ಹಾಜರಿ ಹಾಕಿದ್ದೇನೆ. ಈಗ ನನ್ನ ಮನವಿಯನ್ನು ಪುರಸ್ಕರಿಸಿ ನನಗೆ ಅವಕಾಶವಿತ್ತ ಹೈಕೋರ್ಟ್‌ಗೆ ಧನ್ಯವಾದ' ಎಂದಿದ್ದಾರೆ ರಾಜ್ ಪಾಲ್ ಯಾದವ್.
2010 ರಲ್ಲಿ ರಾಜ್‌ಪಾಲ್ ಯಾದವ್ ಅವರು ಸಿನಿಮಾ ನಿರ್ಮಾಣಕ್ಕಾಗಿ ದೆಹಲಿ ಮುರಳಿ ಪ್ರಾಜೆಕ್ಟ್ ಲಿಮಟೆಡ್ ವತಿಯಿಂದ ಐದು ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. ಆದರೆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು, ಭಾರಿ ಮೊತ್ತದ ಹಣ ನಷ್ಟವಾಯ್ತು. ರಾಜ್‌ಪಾಲ್ ಯಾದವ್ ಸಾಲ ಮರುಪಾವತಿ ಮಾಡಲಾಗಲಿಲ್ಲ. ಅವರು ಫೈನ್ಯಾನ್ಸಿಯರ್‌ಗೆ ಕೊಟ್ಟಿದ್ದ ಚೆಕ್‌ಗಳು ಬೌನ್ಸ್ ಆದವು. ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 9 ಕೋಟಿ ರೂಪಾಯಿ ಹಣ ಮರುಪಾವತಿಸಬೇಕು ಅಥವಾ ಜೈಲು ಶಿಕ್ಷೆ ಅನುಭವಿಸಬೇಕು ಎಂದಾಯ್ತು. ಆದರೆ ತಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದ ರಾಜ್‌ಪಾಲ್ ಯಾದವ್ ಜೈಲು ಸೇರಿದ್ದರು. ಈಗ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ತಿಂಗಳು ಮಧ್ಯಂತರ ಜಾಮೀನು ಸಿಗಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.