2026-06-08 03:55:11

Iranian navy attacks Indian ships | ಭಾರತದ ಹಡಗುಗಳ ಮೇಲೆ ಇರಾನ್‌ ನೌಕಾಸೇನೆ ದಾಳಿ | Speed news kannada

Iranian navy attacks Indian ships | ಭಾರತದ ಹಡಗುಗಳ ಮೇಲೆ ಇರಾನ್‌ ನೌಕಾಸೇನೆ ದಾಳಿ | Speed news kannada

ಹೊರ್ಮುಜ್‌ ದಾಟುತ್ತಿದ್ದ  ಭಾರತೀಯ ಹಡಗುಗಳ ಮೇಲೆ ಇರಾನ್‌ ದಾಳಿ ನಡೆಸಿದೆ. ಭಾರತದ ಹಡಗುಗಳ ಮೇಲೆ ಇರಾನ್‌ ನೌಕಾಸೇನೆ ಗುಂಡಿನ ದಾಳಿಯನ್ನು ನಡೆಸಿದೆ. ಹೊರ್ಮುಜ್‌ ಜಲಸಂಧಿಯನ್ನು ಮತ್ತೆ ಮುಚ್ಚಲಾಗಿದೆ. ಅದನ್ನು ಸಮೀಸುವ ಯಾವುದೇ ಹಡಗನ್ನು ಟಾರ್ಗೆಟ್‌ ಮಾಡಿ ಹೊಡೆಯಲಾಗುವುದು ಎಂದು ಇರಾನ್‌ ಎಚ್ಚರಿಕೆಯನ್ನು ನೀಡಿದೆ. ಹೊರ್ಮುಜ್‌ ಜಲಸಂಧಿ ಮೂಲಕ ಬರುತ್ತಿದ್ದ 2 ಹಡಗುಗಳ ಮೇಲೆ ಇರಾನ್‌ ನೌಕಸೇನೆ ಗನ್‌ಬೋಟ್‌ಗಳಿಂದ ಗುಂಡಿನ ಸುರಿಮಳೆ ಸಿಡಿಸಿದೆ. ದಾಳಿಯಲ್ಲಿ ಸದ್ಯ  ಯಾರಿಗೂ ಗಾಯಗಲಾಗಿಲ್ಲ ಎಂದು ಮಾಹಿತಿ ತಿಳಿದುಬಂದಿದ್ದು, ಭಾರತೀಯ ಹಡಗುಗಳ ಮೇಲೆ ದಾಳಿ ಮಾಡುವುದು ಅಲ್ಲದೇ ಭಾರತ ತೆರಳುತ್ತಿದ್ದ 14 ಹಡಗುಗಳನ್ನು ಇರಾನ್‌ ತಡೆಹಿಡಿದಿದೆ. ಇದರಿಂದಾಗಿ ಭಾರತೀಯ ವಿದೇಶಾಂಗ ಇಲಾಖೆಯು ಇರಾನ್‌ ರಾಯಭಾರಿಗೆ ಬುಲಾವ್‌ ನೀಡಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.