2026-03-07 05:27:21

Iranian embassy urges all countries to condemn Khameneis assassination | ಖಮೇನಿ ಹತ್ಯೆ ಖಂಡಿಸುವಂತೆ ಎಲ್ಲಾ ದೇಶಗಳನ್ನು ಒತ್ತಾಯಿಸಿದ ಇರಾನ್ ರಾಯಭಾರಿ ಕಚೇರಿ | Speed News Kannada

Iranian embassy urges all countries to condemn Khameneis assassination | ಖಮೇನಿ ಹತ್ಯೆ ಖಂಡಿಸುವಂತೆ ಎಲ್ಲಾ ದೇಶಗಳನ್ನು ಒತ್ತಾಯಿಸಿದ ಇರಾನ್ ರಾಯಭಾರಿ ಕಚೇರಿ | Speed News Kannada

ನವದೆಹಲಿ: ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಇದನ್ನು ಬಲವಾಗಿ ಖಂಡಿಸುವಂತೆ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ವಿಶ್ವದ ಎಲ್ಲಾ ದೇಶಗಳನ್ನು ಒತ್ತಾಯಿಸಿದೆ. ಖಮೇನಿ ಹತ್ಯೆಗೆ ಇರಾನಿನ ಗಾರ್ಡ್ ಕಾರ್ಪ್ಸ್ ಪಡೆಯು ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.
ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಈಗಾಗಲೇ ಪ್ರತೀಕಾರದ ದಾಳಿಗಳನ್ನು ನಡೆಸಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಖಮೇನಿ ಹತ್ಯೆಗೆ ಖಂಡನೆ: ಪಾಕ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಧ್ವಂಸ, 8 ಮಂದಿ ಸಾವು ಖಮೇನಿ ಹತ್ಯೆ ಬಳಿಕವೂ ಇಸ್ರೇಲ್, ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ 'ಪ್ರಪಂಚದಾದ್ಯಂತ ಸ್ವಾತಂತ್ರ್ಯವನ್ನು ಬಯಸುವ ಸರ್ಕಾರಗಳು ಈ ಅಪರಾಧವನ್ನು ಬಲವಾಗಿ ಖಂಡಿಸಬೇಕು. ಕಾನೂನುಬಾಹಿರ ಹಾಗೂ ಆಕ್ರಮಣಕಾರಿ ಧೋರಣೆಗಳ ಮುಂದೆ ಮೌನವಾಗಿರಬಾರದು' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
'ಕ್ಷಮಿಸಲಾಗದ ಅಪರಾಧಕ್ಕೆ ಅಮೆರಿಕ ಮತ್ತು ಇಸ್ರೇಲ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹುತಾತ್ಮರ ತ್ಯಾಗವು ಇರಾನಿನ ಜನರ ಸ್ವಾತಂತ್ರ್ಯ, ಘನತೆ ಮತ್ತು ಉನ್ನತ ಆದರ್ಶಗಳನ್ನು ರಕ್ಷಿಸುವ ಸಂಕಲ್ಪವನ್ನು ಬಲಪಡಿಸುತ್ತದೆ' ಎಂದು ರಾಯಭಾರ ಕಚೇರಿ ಹೇಳಿದೆ.
ಇಸ್ರೇಲ್-ಅಮೆರಿಕದ ದಾಳಿಯಲ್ಲಿ ಖಮೇನಿ ಹತ್ಯೆಯಾಗಿದ್ದಾರೆ ಎಂದು ಇರಾನ್ ಸರ್ಕಾರಿ ದೂರದರ್ಶನ ದೃಢಪಡಿಸಿದೆ. ನಾಗುರ ಕಾರ್ಖಾನೆಯಲ್ಲಿ ಸ್ಫೋಟ: 17 ಮಂದಿ ಸಾವು, 18ಕ್ಕೂ ಹೆಚ್ಚು ಜನರಿಗೆ ಗಾಯ Iran-Israel War: ದುಬೈನಲ್ಲಿ ಸಿಲುಕಿದ ಸಿಂಧನೂರಿನ ಡಾ.ಕೆ.ಶಿವರಾಜ ದಂಪತಿ

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.