2026-04-23 09:09:52

IPL 2026 | ಚೆನ್ನೈ ವಿರುದ್ಧದ ಪಂದ್ಯದಲ್ಲಿ ಭಾವುಕರಾದ ರವೀಂದ್ರ ಜಡೇಜ | Speed News Kannada

IPL 2026 | ಚೆನ್ನೈ ವಿರುದ್ಧದ ಪಂದ್ಯದಲ್ಲಿ ಭಾವುಕರಾದ ರವೀಂದ್ರ ಜಡೇಜ | Speed News Kannada

ರಾಜಸ್ಥಾನ ರಾಯಲ್ಸ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಚೆನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಭಾವುಕರಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಗುವಾಹಟಿಯಲ್ಲಿ ನಡೆದ ಐಪಿಎಲ್‌ ನ 3ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡ 127 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡವು ವೈಭವ್ ಸೂರ್ಯವಂಶಿಯ ನೆರವಿನಿಂದ ಭರ್ಜರಿ ಗೆಲುವು ಸಾಧಿಸಿದೆ. ರವೀಂದ್ರ ಜಡೇಜಾ ಅವರು ಕಳೆದ ಆವೃತ್ತಿಯ ವರೆಗೂ ಚೆನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದರು. 2012ರಲ್ಲಿ ಚೆನೈ ತಂಡವು ಜಡೇಜಾ ಅವರನ್ನು ಖರೀದಿಸಿತ್ತು. ಆಗಿನಿಂದ ಕಳೆದ ಆವೃತಿಯ ವರೆಗೂ ಜಡೇಜಾ ಚೆನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ. ಇವರು ಚೆನ್ನೈ ತಂಡದ ಪರ 12 ಆವೃತಿಗಳನ್ನು ಆಡಿದ್ದಾರೆ. ಹಾಗಾಗಿ ಮಾಜಿ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರು ಭಾವುಕರಾಗಿದ್ದಾರೆ.
ಪಂದ್ಯದ 8ನೇ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಜಡೇಜಾ ಅವರ ಕೈಗೆ ಚೆಂಡನ್ನು ನೀಡುತ್ತಾರೆ. ಜಡೇಜಾ ಅವರು 2ನೇ ಎಸೆತದಲ್ಲಿ ಸರ್ಫರಾಜ್ ಖಾನ್ ಅವರನ್ನು ಎಲ್‌ಬಿಡಬ್ಲ್ಯು ಮಾಡುತ್ತಾರೆ. ಬಳಿಕ ಕ್ರೀಸ್‌ಗೆ ಬಂದ ಶಿವಂ ದುಬೆ ಅವರ ವಿಕೆಟ್ ಪಡೆಯುವ ಮೂಲಕ ಒಂದೇ ಓವರ್‌ನಲ್ಲಿ 2 ಪ್ರಮುಖ ವಿಕೆಟ್‌ಗಳನ್ನು ಪಡೆಯುತ್ತಾರೆ. ಪಂದ್ಯದ ವಿರಾಮದ ವೇಳೆ ಪ್ರಸಾರಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಡೇಜಾ ಅವರು 'ನನಗೆ ಗುಲಾಬಿ ಬಣ್ಣ ಚೆನ್ನಾಗಿ ಕಾಣುತ್ತದೆ. ನಾನು ಎದುರಾಳಿ ತಂಡಕ್ಕೆ ಈ ಹಿಂದೆ ನೆಟ್ಸ್‌ ನಲ್ಲಿ ಬೌಲಿಂಗ್ ಮಾಡಿದ್ದೇನೆ. ಆದ್ದರಿಂದ ಸ್ಪೇನ್ ವಿರುದ್ಧ ಅವರು ಸುಲಭವಾಗಿ ಆಡಬಲ್ಲರು. ಆಗಾಗಿ ನಾನು ಉತ್ತಮವಾಗಿ ಬೌಲಿಂಗ್ ಮಾಡಲು ಸಿದ್ದವಾಗಿದ್ದೇನೆ' ಎಂದು ಹೇಳಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.