2026-06-08 04:06:52

IPL 2026: New rule in IPL | IPL 2026: ಐಪಿಎಲ್‌ನಲ್ಲಿ ಹೊಸ ನಿಯಮ | Speed news kannada

IPL 2026: New rule in IPL | IPL 2026: ಐಪಿಎಲ್‌ನಲ್ಲಿ ಹೊಸ ನಿಯಮ | Speed news kannada

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 19ನೇ ಆವೃತ್ತಿ ಇಂದು ಶುರುವಾಗಲಿದ್ದು, ಮೊದಲ ಉದ್ಘಾಟನಾ ಪಂದ್ಯಕ್ಕೆ ಆರ್‌ಸಿಬಿ ಮತ್ತು ಹೈದರಾಬಾದ್‌ ತಂಡ ಕಣಕ್ಕಿಳಯಲಿದೆ. ಈ ಬಾರಿಯ ಐಪಿಎಲ್‌ ಪಂದ್ಯವಳಿಯಲ್ಲಿ ಹೊಸ ನಿಯಮಗಳನ್ನು ಬಿಸಿಸಿಐ ಜಾರಿಗೆ ತಂದಿದೆ. ಇವುಗಳಲ್ಲಿ ಆಟಗಾರರ ಶಿಸ್ತು ಮತ್ತು ಮೈದಾನದ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಮೂಲಕ ಶಿಸ್ತು ಬದ್ಧ ಐಪಿಎಲ್ ಟೂರ್ನಿ ಆಯೋಜಿಸಲು ಪ್ಲ್ಯಾನ್ ರೂಪಿಸಿದೆ. ಇದಕ್ಕಾಗಿ ಜಾರಿ ಮಾಡಲಾಗಿರುವ ಹೊಸ ನಿಯಮಗಳ ಪಟ್ಟಿ ಈ ಕೆಳಗಿನಂತಿದೆ

  • ಪಂದ್ಯ ನಡೆಯುವ ದಿನದಂದು ಮೈದಾನದಲ್ಲಿ ಯಾವುದೇ ರೀತಿಯ ಅಭ್ಯಾಸ ಅಥವಾ ವಾರ್ಮ್-ಅಪ್ ಮಾಡಲು ಅವಕಾಶವಿಲ್ಲ.
  • ತಂಡಗಳಿಗೆ ತಲಾ ಎರಡು ನೆಟ್ಸ್ ಮಾತ್ರ ನೀಡಲಾಗುತ್ತದೆ. ಒಂದು ತಂಡದ ಅಭ್ಯಾಸ ಮುಗಿದರೂ ಇನ್ನೊಂದು ತಂಡ ಅದನ್ನು ಬಳಸುವಂತಿಲ್ಲ.
  • ಹೋಮ್ ಗ್ರೌಂಡ್‌ನಲ್ಲಿ ಮೊದಲ ಪಂದ್ಯಕ್ಕೆ ನಾಲ್ಕು ದಿನ ಮೊದಲು ಮುಖ್ಯ ಮೈದಾನದಲ್ಲಿ ಅಭ್ಯಾಸ ನಡೆಸುವಂತಿಲ್ಲ.
  • ಅಭ್ಯಾಸದ ದಿನಗಳಲ್ಲಿ ಆಟಗಾರರು ಕಡ್ಡಾಯವಾಗಿ ತಂಡದ ಬಸ್ಸಿನಲ್ಲೇ ಪ್ರಯಾಣಿಸಬೇಕು. ಖಾಸಗಿ ವಾಹನಗಳ ಬಳಕೆಗೆ ನಿಷೇಧವಿದೆ.
  • ಆಟಗಾರರ ಕುಟುಂಬದವರು ಅಥವಾ ಸ್ನೇಹಿತರು ತಂಡದ ಬಸ್ಸಿನಲ್ಲಿ ಪ್ರಯಾಣಿಸುವಂತಿಲ್ಲ ಮತ್ತು ಅಭ್ಯಾಸದ ವೇಳೆ ಮೈದಾನ ಪ್ರವೇಶಿಸುವಂತಿಲ್ಲ.
  • ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಲೀವ್‌ಲೆಸ್ ಜೆರ್ಸಿ ಮತ್ತು ಫ್ಲಾಪಿ ಹ್ಯಾಟ್  ಧರಿಸುವುದನ್ನು ನಿಷೇಧಿಸಲಾಗಿದೆ.
  • ಟೀಕೆಗಳ ನಡುವೆಯೂ ಈ ನಿಯಮವು 2027 ರವರೆಗೆ ಮುಂದುವರಿಯಲಿದೆ.
  • ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿಯ ಪ್ರಭಾವ ತಡೆಯಲು 10 ಓವರ್‌ಗಳ ನಂತರ ಚೆಂಡನ್ನು ಬದಲಾಯಿಸಲು ಬೌಲಿಂಗ್ ತಂಡ ಮನವಿ ಮಾಡಬಹುದು.
  • ಈ ಕ್ಯಾಪ್ ಹೊಂದಿರುವ ಆಟಗಾರರು ಪಂದ್ಯದ ಸಮಯದಲ್ಲಿ ಕಡ್ಡಾಯವಾಗಿ ಅದನ್ನು ಧರಿಸಬೇಕು.
  • ಒಂದು ಓವರ್‌ನಲ್ಲಿ ಬೌಲರ್‌ಗಳು ಎರಡು ಬೌನ್ಸರ್‌ಗಳನ್ನು ಎಸೆಯುವ ನಿಯಮವು ಈ ಸೀಸನ್‌ನಲ್ಲೂ ಮುಂದುವರಿಯಲಿದೆ, ಇದು ಬ್ಯಾಟರ್ ಮತ್ತು ಬೌಲರ್ ನಡುವೆ ಸಮಾನ ಸ್ಪರ್ಧೆಯನ್ನು ನೀಡುತ್ತದೆ.
  • ತೀರ್ಪುಗಳಲ್ಲಿ ನಿಖರತೆ ತರಲು ಟಿವಿ ಅಂಪೈರ್ ಈಗ ಎಂಟು ಹೈ-ಸ್ಪೀಡ್ ಕ್ಯಾಮೆರಾಗಳ ನೇರ ದೃಶ್ಯಗಳನ್ನು ಪಡೆಯಲಿದ್ದಾರೆ. ಇದರಿಂದ ಸ್ಟಂಪಿಂಗ್, ರನ್ ಔಟ್ ಮತ್ತು ಕ್ಯಾಚ್‌ಗಳ ತೀರ್ಪು ಅತಿ ವೇಗವಾಗಿ ಸಿಗಲಿದೆ.
  • ಆಟಗಾರನು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ನಂತರವೇ ಸಂಭ್ರಮಾಚರಣೆ ಮಾಡಬೇಕು, ಇಲ್ಲದಿದ್ದರೆ ಅದು ಕ್ಯಾಚ್ ಎಂದು ಪರಿಗಣಿಸಲ್ಪಡುವುದಿಲ್ಲ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.