2026-05-23 01:43:12

NEET ಬದಲಿಗೆ CET ಪರೀಕ್ಷೆ ನಡೆಯಲಿ: ದಿನೇಶ್ ಗುಂಡೂರಾವ್ ಅಭಿಪ್ರಾಯ| Speed News Kannada

NEET ಬದಲಿಗೆ CET ಪರೀಕ್ಷೆ ನಡೆಯಲಿ: ದಿನೇಶ್ ಗುಂಡೂರಾವ್ ಅಭಿಪ್ರಾಯ| Speed News Kannada

ಮಂಗಳೂರು: ರಾಷ್ಟ್ರ ಮಟ್ಟದ ನೀಟ್‌ ಯುಜಿ ಪರೀಕ್ಷೆಯಲ್ಲಿಹಲವಾರು ಭಾರಿ ಬಾರಿ ಹಗರಣಗಳು ನಡೆದಿವೆ. ಆದರೆ ರಾಜ್ಯದಲ್ಲಿ ಸಿಇಟಿ ಪರೀಕ್ಷಾ ಪದ್ದತಿ ಇದ್ದಾಗ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ವಿದ್ಯಾರ್ಥಿಗಳಿಗೆ  ತೊಂದರೆ ಆಗಿರಲಿಲ್ಲ. ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನೀಟ್ ಬದಲಾಗಿ ಮೊದಲಿನಂತೆ ಸಿಇಟಿ ಪರೀಕ್ಷೆ ನಡೆಯಲಿ, ಆ ಪರೀಕ್ಷೆ ನಡೆಸುವ ಜವಬ್ದಾರಿಯನ್ನು ರಾಜ್ಯಗಳಿಗೆ ಬಿಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಮಕ್ಕಳ ಹಿತರಕ್ಷಣೆ ಕಾಯುವ ಶಕ್ತಿ ನಮ್ಮ ರಾಜ್ಯಕ್ಕೆ ಇದೆ. ಎಲ್ಲವನ್ನೂ ಏಕೆ ಕೇಂದ್ರೀಕೃತ ಮಾಡಬೇಕು ? ಪ್ರತಿಯೊಂದಕ್ಕೂ ದೆಹಲಿ ನಿಯಂತ್ರಣ ಏಕೆ ಬೇಕು ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗ ದುರುಪಯೋಗ:

ಚುನಾವಣೆ ಗೆಲ್ಲಲು ಬಿಜೆಪಿ ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧೆಡೆ ನಡೆದ ಚುನಾವಣೆ ವೇಳೆ ಚುನಾವಣಾ ಆಯೋಗ ನಡೆದುಕೊಂಡ ರೀತಿ ಅನುಮಾನ ಹುಟ್ಟು ಹಾಕುತ್ತದೆ. ಪ್ರತಿಪಕ್ಷಗಳಿಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲವಾಗಿದೆ. ನಿಷ್ಪಕ್ಷಪಾತವಾಗಿ ಚುನಾವನೆಗಳನ್ನು ನಿರ್ವಹಣೆ ಮಾಡುವ ಚುನಾವಣಾ ಆಯೋಗದ ಮೇಲೆ ಸಂಶಯ ಇರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಚುನಾವಣೆ ಗೆಲ್ಲಲು ಏನು ಮಾಡಬೇಕೋ ಅದನ್ನು ಬಿಜೆಪಿ ಚುನಾವಣಾ ಆಯೋಗದ ಮೂಲಕ ಮಾಡಿಸುತ್ತಿದೆ ಎಂದು ಆರೋಪಿಸಿದರು.

ಎಸ್ಐಆರ್‌ನಲ್ಲಿ ವಿರೋಧಿಸಿ ಹೋರಾಟ ನಡೆಸುವ ಸಂಬಂಧ ಸರ್ಕಾರ ಚರ್ಚೆ ಮಾಡುತ್ತಿದೆ. ಈ ಹಿಂದೆ ಎಸ್ ಐಆರ್ ನಡೆದ ರಾಜ್ಯಗಳಲ್ಲಿ ಮತದಾರರ ಪಟ್ಟಿಯಲ್ಲಿದ್ದ ಲಕ್ಷಾಂತರ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಆದ್ದರಿಂದ ಕಾನೂನಾತ್ಮಕವಾಗಿ ಈ ಬಗ್ಗೆ ಹೋರಾಟ ಮಾಡಬೇಕಾಗಿದೆ. ಪಶ್ಚಿಮ ಬಂಗಾಳದಲ್ಲಿ ಎಐ ಬಳಕೆ ಮಾಡಿ ಯಾರ ಹೆಸರು ತೆಗೆಯಬೇಕೋ ಅವರ ಹೆಸರುಗಳನ್ನು ತೆಗೆಯಲಾಗಿತ್ತು. ಕರ್ನಾಟಕದಲ್ಲಿ ಆ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.

ರಾಜ್ಯದ  ಬಿಜೆಪಿ ಮುಖಂಡರು ಸಾಕಷ್ಟು ಭ್ರಷ್ಟರಾಗಿದ್ದದ್ದಾರೆ. ಆದರೆ ಇಡಿ, ಐಟಿ ಅವರ ಗೋಜಿಗೆ ಹೋಗುವುದಿಲ್ಲ. ಚುನಾವಣೆ ಗೆಲ್ಲುವುದೆ ಇವರಿಗೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.