ಬೆಂಗಳೂರು: ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗೋವಿಂದರಾಜು ಐದು ಲಕ್ಷ ಡಿಮ್ಯಾಂಡ್ ಪ್ರಕರಣದಲ್ಲಿ ಸ್ವೀಕಾರ ಮಾಡುವ ವೇಳೆ ಕರ್ನಾಟಕ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ನೇತೃತ್ವದಲ್ಲಿ ಟ್ರ್ಯಾಪ್ ಆಗಿ ಬಲೆಗೆ ಬಿದ್ದಿದ್ದಾರೆ. ಚೀಟಿ ವ್ಯವಹಾರದ ವಂಚನೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದ ವ್ಯಕ್ತಿಯನ್ನು ಪ್ರಕರಣದಿಂದ ಕೈಬಿಡಲು ಹಣಕ್ಕೆ ಬೇಡಿಕೆ ಇಟ್ಟ ಆರೋಪ ಗೋವಿಂದರಾಜು ಅವರ ಮೇಲೆ ಕೇಳಿ ಬಂದಿದೆ.
ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿಲ್ಡರ್ ಮೊಹಮ್ಮದ್ ಎಂಬವರ ಬಳಿ ಕೇಸ್ ನಿಂದ ಕೈ ಬಿಡಲು ಹಣಕ್ಕೆ ಇನ್ಸ್ ಪೆಕ್ಟರ್ ಬೇಡಿಕೆ ಇಟ್ಟಿದ್ದರಂತೆ. ಇದರಂತೆ ಐದು ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿ, ಮೊದಲು 1 ಲಕ್ಷ ರೂಪಾಯಿ ಅಡ್ವಾನ್ಸ್ ಆಗಿ ಪಡೆದಕೊಂಡಿದ್ದರಂತೆ. ಉಳಿದ ಹಣ ಅಂದರೆ 4 ಲಕ್ಷ ರೂಪಾಯಿ ಪಡೆಯಲು ಮೈಸೂರು ರಸ್ತೆಯ ಸಿರಸಿ ಸರ್ಕಲ್ ಬಳಿಯ ಸಿಎಆರ್ ಗ್ರೌಂಡ್‌ಗೆ ಬಂದ ಸಂದರ್ಭದಲ್ಲಿ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದುಕೊಂಡಿದ್ದರು.
ADVERTISEMENT
ಇದರಂತೆ ಆರೋಪಿಗಳಿಂದ ಹಣ ಪಡೆದುಕೊಳ್ಳಲು ಹೋಗಾದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರೆ, ಇನ್ಸ್ ಪೆಕ್ಟರ್ ಅವನರನ್ನು ಅವಕಾಶಕ್ಕೆ ಪಡೆದುಕೊಂಡಿದ್ದಾರೆ. ಇದರ ನಡುವೆ ಘಟನೆ ನಡೆದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬೀಳುತ್ತಿದ್ದಂತೆ ಸ್ಥಳದಲ್ಲಿ ಇನ್ಸ್ ಪೆಕ್ಟರ್ ಹೈಡ್ರಾಮಾ ಮಾಡಿದ್ದರೆ.