2026-03-07 05:06:50

India seizes Iranian tankers sanctioned by US | ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಇರಾನ್ ಟ್ಯಾಂಕರ್ ಹಡಗುಗಳನ್ನು ವಶಪಡಿಸಿಕೊಂಡ ಭಾರತ | Speed News Kannada

India seizes Iranian tankers sanctioned by US | ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಇರಾನ್ ಟ್ಯಾಂಕರ್ ಹಡಗುಗಳನ್ನು ವಶಪಡಿಸಿಕೊಂಡ ಭಾರತ | Speed News Kannada

ನವದೆಹಲಿ: ಅಮೆರಿಕದಿಂದ ನಿರ್ಬಂಧಕ್ಕೊಳಗಾಗಿರುವ ಇರಾನ್‌ನ ಟ್ಯಾಂಕರ್ ಹಡಗುಗಳನ್ನು ಭಾರತದ ಕಡಲ ವಲಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಭಾರತ ಮತ್ತು ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ನಂತರ, ಭಾರತದ ಕಡಲ ವಲಯದಲ್ಲಿ ಅಕ್ರಮ ವ್ಯಾಪಾರವನ್ನು ತಡೆಯಲು ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಭಾರತೀಯ ಕಡಲ ರಕ್ಷಣಾ ಪಡೆಯು 55 ಹಡಗು, 10 ರಿಂದ 12 ವಿಮಾನಗಳನ್ನು ಕಣ್ಣಾವಲಿಗೆ ಬಳಸುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಇತ್ತೀಚೆಗೆ ಅಮೆರಿಕವು ಭಾರತದಿಂದ ರಫ್ತಾಗುವ ವಸ್ತುಗಳ ಮೇಲಿನ ಸುಂಕವನ್ನು ಶೇ.50ರಿಂದ ಶೇ.18ಕ್ಕೆ ಇಳಿಸಿತ್ತು.
'ಮುಂಬೈನಿಂದ ನೂರು ನಾಟಿಕಲ್ ಮೈಲಿ ದೂರದಲ್ಲಿ ಭಾರತದ ಕಡಲ ವಲಯದೊಳಗೆ ಅನುಮಾನಸ್ಪದ ಘಟನೆಯ ಹಿನ್ನಲೆಯಲ್ಲಿ ಟ್ಯಾಂಕರ್ ಹಡಗುಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಫೆ.6ರಂದು ಭಾರತೀಯ ಅಧಿಕಾರಿಗಳು ಪೋಸ್ಟ್ ಮಾಡಿದ್ದರು. ಆದರೆ, ನಂತರ ಅದನ್ನು ಡಿಲೀಟ್ ಮಾಡಲಾಗಿತ್ತು. ಹೆಚ್ಚಿನ ತನಿಖೆಗಾಗಿ ಆ ಟ್ಯಾಂಕರ್ ಹಡಗುಗಳನ್ನು ವಶಪಡಿಸಿಕೊಂಡು, ಮುಂಬೈಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಟ್ಯಾಂಕ‌ರ್ ಹಡಗುಗಳನ್ನು ಸ್ಟೈಲ್ಲರ್ ರೂಬಿ, ಆಸ್ಟಾಲ್ಟ್ ಸ್ಟಾರ್ ಹಾಗೂ ಅಲ್ ಜಾಫಿಯಾ ಎಂದು ಗುರುತಿಸಲಾಗಿದೆ. ಈ ಹಡಗುಗಳು ತಮ್ಮ ಗುರುತನ್ನು ಮರೆಮಾಚಿಕೊಂಡು, ಕಾನೂನುಗಳನ್ನು ಉಲ್ಲಂಘಿಸಿ ಕಡಲನ್ನು ಅಕ್ರಮ ಪ್ರವೇಶ ಮಾಡುವ ಪ್ರಯತ್ನ ಮಾಡುತ್ತಿದ್ದವು ಎಂದು ತಿಳಿದುಬಂದಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.