ಬಾಲಿವುಡ್‌ನಲ್ಲಿ ತೆರೆ ಮೇಲೆ ಅಲ್ಲದೆ, ತೆರೆ ಹಿಂದೆ ಕೂಡ ಅಸಂಬಂದ್ಧ ಮಾತನಾಡುತ್ತ ಮನರಂಜನೆ ಕೊಡುವ ರಾಖಿ ಸಾವಂತ್ ಅವರು ಈ ಹಿಂದೆ ಮೈಸೂರಿನ ಆದಿಲ್ ಖಾನ್ ಅವರನ್ನು ಮದುವೆಯಾಗಿ, ಆಮೇಲೆ ಡಿವೋರ್ಸ್ ಡ್ರಾಮಾ ಮಾಡಿದ್ದರು. ಈಗ ಮುಕೇಶ್ ಅಂಬಾನಿ ಅವರನ್ನು ಮದುವೆ ಆಗುತ್ತೆನೆ ಎಂದು ಮಧುವಣಗಿತ್ತಿಯಂತೆ ರೆಡಿಯಾಗಿದ್ದಾರೆ. ಕಂಪ್ಲೀಟ್ ಆಗಿ ವಧು ರೀತಿ ಡ್ರೆಸ್ ಮಾಡಿಕೊಂಡಿರುವ ರಾಖಿ ಸಾವಂತ್ ಅವರು ಫೋಟೋಗ್ರಾಫರ್‌ಗಳ ಮುಂದೆ ಬಂದು ಮದುವೆ ಆಗುವ ಹುಡುಗ ಹೇಗಿದ್ದಾನೆ ಎಂದು ಹೇಳಿದ್ದರೆ, ರಾಖಿ ಸಾವಂತ್ ಅವರು ಮುಕೇಶ್ ಅಂಬಾನಿ ಮೇಲಿನ ಲವ್ ಬಗ್ಗೆ ಮಾತನಾಡಿದ್ದಾರೆ. ನನಗೆ ಒಂಟಿಯಾಗಿದ್ದು ಸಾಕಾಗಿದೆ ಕೊನೆಗೂ ನಾನು ರಿಯಲ್ ಆಗಿ ಮದುವೆ ಆಗು ಆಗುತ್ತಿದ್ದೇನೆ ಎಂದು ಹೇಳಿದ್ದರೆ. ಮುಕೇಶ್ ಅಂಬಾನಿ ಅವರನ್ನು ನಾನು ಮದುವೆ ಆದರೆ, ಚೆನ್ನಾಗಿ ನೋಡಿಕೊಳ್ತೀನಿ. ನೀತು ಅಂಬಾನಿ ಅವರಿಗೆ ನಾನು ಸೌತಿ ಆಗ್ತೀನಿ. ಬೇರೆಯವರಿಗೆ ಮೂರು ನಾಲ್ಕು ಮದುವೆ ಮಾಡಿಸುವ ಮುಕೇಶ್ ಯಾಕೆ ಒಂದು ಮದುವೆ ಆಗಿದ್ದಾರೆ? ನಾನು ಅವರನ್ನು ಮದುವೆ ಆಗೋಕೆ ರೆಡಿಯಿದ್ದೇನೆ. ಅಷ್ಟೆಲ್ಲ ಆಸ್ತಿಯಿರುವ ಮುಕೇಶ್ ನನಗೆ ಬಂಗಾರ, ವಜ್ರ, ಮನೆ, ಮಗು ಕೊಟ್ಟರೆ ಸಾಕು. ಮುಕೇಶ್ ಅವರನ್ನು ನಾನು ಸಣ್ಣ ಮಾಡಿಸ್ತೀನಿ. ಸರಿಯಾಗಿ ಜಾತಕ ಮ್ಯಾಚ್ ಆಗುವವರನ್ನು ನಾನು ಮದುವೆ ಆಗೋದು ಮುಕೇಶ್ ಅವರು ನನ್ನ ಜಾತಕ ನೋಡಿದರೆ ನಾನು ಎಷ್ಟು ಚೆನ್ನಾಗಿ ನೋಡಿಕೊಳ್ತೀನಿ ಎಂದು ಗೊತ್ತಾಗುತ್ತೆ ಎಂದಿದ್ದರೆ.