2026-03-07 06:28:38

I should stay away from Malayalam cinema | ಸಡನ್ ಆಗಿ ಮಲಯಾಳಂ ಸಿನಿಮಾದಿಂದ ದೂರ ಇರಬೇಕು ಅನಿಸ್ತು ಅದಕ್ಕೆ ಕನ್ನಡ ಸಿನಿಮಾ ಮಾಡ್ಡೆ ಜಾಕಿ ಭಾವನಾ | Speed News Kannada

I should stay away from Malayalam cinema | ಸಡನ್ ಆಗಿ ಮಲಯಾಳಂ ಸಿನಿಮಾದಿಂದ ದೂರ ಇರಬೇಕು ಅನಿಸ್ತು ಅದಕ್ಕೆ ಕನ್ನಡ ಸಿನಿಮಾ ಮಾಡ್ಡೆ ಜಾಕಿ ಭಾವನಾ | Speed News Kannada

ಮಲಯಾಳಂ ನಟಿ ಭಾವನಾ ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿಯೂ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜೀವನದಲ್ಲಿ ಕಹಿ ಘಟನೆ ನಡೆದ ಬಳಿಕ ಅವರು ಮಲಯಾಳಂ ಚಿತ್ರರಂಗದಿಂದ ದೂರವಿದ್ದರು. ಮಲಯಾಳಂ ಚಿತ್ರರಂಗದಿಂದಲೇ ಬಂದಿದ್ದರೂ ಅಲ್ಲಿ ಸಿನಿಮಾ ಮಾಡುವುದೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಹಾಗಿದ್ದರೂ ಅವರಿಗೆ ಸಾಕಷ್ಟು ಆಫ‌ರ್ಗಳು ಬರುತ್ತಲೇ ಇದ್ದವು.
ಮಲಯಾಳಂ ಚಿತ್ರರಂಗದ ಬಿಗ್ ಪ್ರೊಡಕ್ಷನ್ ಹೌಸ್‌ಗಳು ಸಿನಿಮಾ ಮಾಡುವುದಕ್ಕೆ ಮುಂದೆ. ಬಂದಿದ್ದರು. ಆದರೂ, ಭಾವನಾ ಮಲಯಾಳಂ ಸಿನಿಮ ಬೇಡವೇ ಬೇಡ ಅಂತ ನಿರ್ಧರಿಸಿದ್ದರು. ಕೇವಲ ಕನ್ನಡ ಸಿನಿಮಾ ಮಾಡುವುದರಲ್ಲಿ ಖುಷಿಯಾಗಿದ್ದರು. ಅವರು ಕೂಡ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಅದರಲ್ಲೂ ಮದುವೆ ನಂತರ ಸಿನಿಮಾ ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಂದ ಹಿಡಿದು ಇಂದಿನ ಸ್ಟಾರ್‌ಗಳವರೆಗೂ ನಟಿಸಿದ್ದಾರೆ. ಹೀಗಾಗಿ ಮಲಯಾಳಂ ಸಿನಿಮಾಗಳಿಗಿಂತ ಕನ್ನಡದಲ್ಲಿಯೇ ಅವರಿಗೆ ಹೆಚ್ಚು ಸಕ್ಸಸ್ ಸಿಕ್ಕಿದೆ. ಇತ್ತೀಚೆಗೆ ಗಲಾಟ ಪ್ಲಸ್ ಕ್ಲಿಪ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಳೆಯ ಸಂದರ್ಶನದ ತುಣುಕನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಮಲಯಾಳಂ ಸಿನಿಮಾ ಯಾಕೆ ಮಾಡಲಿಲ್ಲ. ಕನ್ನಡ ಸಿನಿಮಾಗಳನ್ನೇ ಮಾಡಿದ್ದು ಯಾಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಇವರನ್ನು ಜಾಕಿ ಭಾವನಾ ಅಂತಲೇ ಫೇಮಸ್. ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ 'ಜಾಕಿ' ಸಿನಿಮಾದಿಂದ ಕನ್ನಡಿಗರ ಫೇವರಿಟ್ ನಟಿಯಾಗಿ ಬಿಟ್ಟರು. ಇಲ್ಲಿಂದ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಆಗೊಂದು ಈಗೊಂದು ಮಲಯಾಳಂ ಸಿನಿಮಾಗಳಲ್ಲಿಲ ಕಾಣಿಸಿಕೊಂಡಿದ್ದು ಬಿಟ್ಟರೆ, ಕನ್ನಡದಲ್ಲಿ ನಟಿಸಿದ್ದೇ ಹೆಚ್ಚು. ಅದ್ಯಾಕೆ ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
"ಇತ್ತೀಚೆಗೆ ನಾನು ಏನೂ ಪ್ಲಾನ್ ಮಾಡುತ್ತಿಲ್ಲ. ಆಡಮ್ ಜಾನ್ (2017) ಬಗ್ಗೆನೂ ನಾನು ಪ್ಲಾನ್ ಮಾಡಿಲ್ಲ. ಅದು ಹೀಗೆ ನಡೆದು ಹೋಯ್ತು. ಸಡನ್ ಆಗಿ ನನಗೆ ಮಲಯಾಳಂ ಸಿನಿಮಾದಿಂದ ದೂರ ಉಳಿಯಬೇಕು ಅಂತ ಅನಿಸಿತ್ತು. ಆ ಸಮಯದಲ್ಲಿ ಹಾಗೆ ಯಾಕೆ ಅನಿಸಿತೇನೋ.. ಆದರೆ, ನನಗೆ ಕಂಫರ್ಟೆಬಲ್ ಆಗಿತ್ತು. ಅಡಮ್ ಜಾನ್ ಮಾಡುವಾಗ ನಾನು ಮದುವೆ ಆಗಿದ್ದೆ. ಬೆಂಗಳೂರಿಗೆ ಫ್ಯಾಮಿಲಿ ಶಿಫ್ಟ್ ಮಾಡಿದ್ದೆ. ಈ ಸಮಯದಲ್ಲಿ ನನಗೆ ಏನು ಅನಿಸುತ್ತಿತ್ತು ಅಂದರೆ, ನಾನು ಅಲ್ಲಿ ಇಲ್ಲ. ನನ್ನ ಸುತ್ತಾ ಏನೂ ನಡೆಯುತ್ತಿಲ್ಲ ಅನಿಸಿತ್ತು." ಎಂದು ಜಾಕಿ ಭಾವನಾ ಹೇಳಿಕೊಂಡಿದ್ದರು.ಭಾವನಾ ಮಲಯಾಳಂ ಚಿತ್ರರಂಗವೇ ಬೇಡ ಅಂತ ನಿರ್ಧರಿಸಿದಾಗ ಅಲ್ಲಿ ಫಿಲ್ಡ್ ಮೇಕರ್ಸ್ ಕಾಲ್ ಮಾಡುತ್ತಲೇ ಇದ್ದರು. ಆಫರ್‌ಗಳ ಮೇಲೆ ಆಫರ್ ಬರುತ್ತಲೇ ಇತ್ತು. ಆದರೂ ಭಾವನಾ ಒಪ್ಪಿಕೊಂಡಿಲ್ಲ. "ಮಲಯಾಳಂ ಚಿತ್ರರಂಗದಿಂದ ನಿರಂತರವಾಗಿ ಕಾಲ್ ಮಾಡುತ್ತಲೇ ಇದ್ದರೆ. ಸಿನಿಮಾ ಮಾಡು. ಇಲ್ಲಾ ಅಂದ್ರೆ ಸ್ಕ್ರಿಪ್ಟ್ ಕೇಳು ಅಂತಿದ್ರು. ಪೃಥ್ವಿರಾಜ್, ಜಯಸೂರ್ಯ, ಮಮ್ಮುಕಾ ಸಿನಿಮಾ ಕೂಡ ಬಂದಿತ್ತು. ನಾನು ಮಾಡುವುದಿಲ್ಲ ಎಂದು ಹೇಳಿದೆ. ನಾನು ಯಾಕೆ ಸಿನಿಮಾ ಮಾಡೋದಿಲ್ಲ ಅಂದೆ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಆ ಸಮಯದಲ್ಲಿ ನನಗೆ ಓಕೆ ಅನಿಸಿತ್ತು. ಬೇಡ ಮಲಯಾಳಂ ಸಿನಿಮಾ ಮಾಡೋದು ಬೇಡ ಅಂತ ಅನಿಸಿತ್ತು. ನಾನು ಇಲ್ಲಿ ಆರಾಮಾಗಿದ್ದೀನಿ ಅಂತ ಅನಿಸಿತ್ತು."
ಹಾಗೇ "ನನಗೆ ಮಲಯಾಳಂ ಸಿನಿಮಾ ಮಾಡುವ ಯಾವುದೇ ಪ್ಲಾನ್ ಇರಲಿಲ್ಲ. ಕನ್ನಡ ಸಿನಿಮಾ ಮಾಡುತ್ತಿದ್ದ. ಮನೆಗೆ ಬರುತ್ತಿದೆ. ಟಿವಿ ನೋಡುತ್ತಿದ್ದೆ. ನಾನು ಕಂಫರ್ಟ್ ಜೋನ್‌ನಲ್ಲಿ ಇರುತ್ತಿದ್ದೆ.." ಎಂದು ಅಂದು ತೆಗೆದುಕೊಂಡ ನಿರ್ಧಾರದ ಬಗ್ಗೆ ರಿವೀಲ್ ಮಾಡಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.