ನಟಿ ಗೀತಾ ಭಾರತಿ ಇದೀಗ, ಜೋಡಿ ನಂ 1 ಶೋ ವೇದಿಕೆ ಮೇಲೆ ಹೇಳಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಗೀತಾ ಭಾರತಿ ಅಂದರೆ ಹೆಚ್ಚು ಜನಕ್ಕೆ ಗೊತ್ತಾಗೋದ್ದಿಲ್ಲ. ಆದರೆ ಬ್ರಹ್ಮಗಂಟು ಗೀತಾ ಅಂದರೆ ಸಾಕು ಜನ ರಪ್ಪನೆ ಕಂಡು ಹಿಡಿಯುತ್ತಾರೆ. ಯಾಕೆಂದರೆ ಆ ಒಂದು ಸೀರಿಯಲ್ ಮೂಲಕ ಗೀತಾ ಭಾರತಿ ಕಿರುತೆರೆಯಲ್ಲಿ ಒಂದು ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದ್ದರು. ಗೀತಾ ಕೇವಲ ನಟಿ ಮಾತ್ರವಲ್ಲ, ಒಳ್ಳೆಯ ಸಿಂಗರ್ ಕೂಡ ಹೌದು. ಸೀರಿಯಲ್‌ನಲ್ಲಿ ನಟಿಸಿದ ಬಳಿಕ ನಟಿ ಗೀತಾಗೆ ಸಿನಿಮಾ ಅವಕಾಶ ಕೂಡ ಹರಿದುಬಂದಿತ್ತು. ಇನ್ನು ಇತ್ತೀಚೆಗೆ ನಟಿ ಗೀತಾ ಭಾರತಿ ಭಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಬ್ರಹ್ಮಗಂಟು ಸೀರಿಯಲ್ ಬಳಿಕ ನಟಿ ಗೀತಾ, ಲವ್ ಮಾಕ್ಟೇಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಜೋಡಿ ನಂ. 1 ಶೋ ಸೀಸನ್ 3ರಲ್ಲಿ ಜೋಡಿಯಾಗಿ ಸ್ಪರ್ಧಿಸುತ್ತಿದ್ದಾರೆ.
ತಮ್ಮ ಪತಿ ರಾಜಾರಾಮ್ ಭಟ್ ಜೊತೆಗೆ ಜೋಡಿಯಾಗಿ ಹೋಗಿರುವ ನಟಿ ಗೀತಾ ಭಾರತಿ ಇದೀಗ ವೇದಿಕೆ ಮೇಲೆ ಹೇಳಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನು ಅಂದರೆ, ಜೋಡಿ ನಂ. 1 ವೇದಿಕೆ ಮೇಲೆ ನಿರೂಪಕಿ ಶ್ವೇತಾ ಅವರು ನೀವು ನಿಮಗೆ ಬರುವ ನೆಗೆಟಿವ್ ಮಾತುಗಳನ್ನು ಹೇಗೆ ನಿಭಾಯಿಸುತ್ತೀರಾ ಎಂದು ಪ್ರಶ್ನೆಯನ್ನು ಕೇಳುತ್ತಾರೆ. ಈ ಸಮಯದಲ್ಲಿ ನಟಿ ಗೀತಾ ಈ ಬಗ್ಗೆ ಮಾತನಾಡುತ್ತಾ, ಬೊಟ್ಟು ಸರಿ ಇಲ್ಲ, ಪಿನ್ ಹಾಕಿಲ್ಲ ಅಂದರೆ ಹೇಳಿ, ಸರಿ ಮಾಡಿಕೊಳ್ಳುತ್ತೇವೆ, ಅದಕ್ಕೆ ಕೇವಲ ಎರಡು ನಿಮಿಷ ಸಾಕು. ಆದರೆ ಎರಡು ನಿಮಿಷದಲ್ಲಿ ಮಾಡೋಕೆ ಆಗದೇ ಇರುವುದನ್ನ ಪ್ರತಿ ಸಾರಿ ಒತ್ತಿ ಒತ್ತಿ ಅದನ್ನೇ ಕೇಳೋದು ಎಷ್ಟು ಸರಿ? ಇನ್ನು ಇದೇ ಸಮಯದಲ್ಲಿ ಮಾತನಾಡಿದ ಪತಿ ರಾಜಾರಾಮ್ ಭಟ್ ನಾನು ಸದಾ ಗಂಡನಾಗಿ ಅವಳ ಜೊತೆ ಬೆನ್ನೆಲುಬಾಗಿ ಇರೋದು ನನ್ನ ಕರ್ತವ್ಯ. ಅದನ್ನು ನಾನು ನಿಭಾಯಿಸ್ತಿದ್ದೀನಿ, ಈಗ ಈ ವೇದಿಕೆ ಸಿಕ್ಕಿದ್ದು, ಅದನ್ನು ಉಳಿಸಿಕೊಳ್ತೀನಿ ಎಂದು ಹೇಳಿದ್ದಾರೆ. ಇನ್ನು ಈ ಸಮಯದಲ್ಲಿ ಪತಿ ಮಾತು ಕೇಳಿ ನಟಿ ಗೀತಾ ಭಾರತಿ ಭಟ್ ಭಾವುಕರಾಗಿದ್ದಾರೆ.