2026-03-07 07:25:48

huge cash in mining dept officer in odisha Speed News Kannada

huge cash in mining dept officer in odisha  Speed News Kannada

ಭುವನೇಶ್ವರ: ಈತ ಗಣಿ ಇಲಾಖೆ ಅಧಿಕಾರಿ. ಈತನ ಮನೆಯಲ್ಲಿ ಹಣದ ಗಣಿಯೇ ಪತ್ತೆಯಾಗಿದೆ. ಲಂಚ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಒಡಿಶಾ ಗಣಿ ಇಲಾಖೆ ಅಧಿಕಾರಿಯ ಮನೆಯಲ್ಲಿ ಬರೋಬ್ಬರಿ ರೂ. 4.27 ಕೋಟಿ ನಗದು ಪತ್ತೆಯಾಗಿದೆ.

ಒಡಿಶಾ  ರಾಜ್ಯದಲ್ಲಿ ಈವರೆಗೆ ವಶಪಡಿಸಿಕೊಂಡ ಅತಿಹೆಚ್ಚು ಪ್ರಮಾಣದ ನಗದು ಎಂದು ಜಾಗೃತ ದಳದ ನಿರ್ದೇಶಕ ಯಶ್ವಂತ್‌ ಜೇತ್ವಾ ಅವರು ತಿಳಿಸಿದ್ದಾರೆ. ನೋಟಿನ ಕಂತೆಗಳನ್ನು ಟ್ರಾಲಿ ಬ್ಯಾಗ್‌ಗಳಲ್ಲಿ ತುಂಬಿಸಿಡಲಾಗಿತ್ತು.

ಮೊಹಾಂತಿ 2009ರಲ್ಲೂ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಯೂರ್‌ಭಂಜ್‌ ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭಟ್ಕ ಚರಣ್‌ ದಾಸ್ ಡಬಲ್‌ ಎಂಜಿನ್‌ ಸರ್ಕಾರದ ಭ್ರಷ್ಟಾಚಾರದ ಪ್ರಮಾಣವನ್ನು ಅಧಿಕಾರಿ ಬಳಿ ಸಿಕ್ಕ ಹಣ ಬಯಲು ಮಾಡಿದೆ ಎಂದು ಕಿಡಿ ಕಾರಿದ್ದಾರೆ.

ಈ ಅಧಿಕಾರಿಯ ಬಳಿ ಎರಡು ಅಂತಸ್ತಿನ ಮನೆ, ಸುಮಾರು 130 ಗ್ರಾಂ ಚಿನ್ನ, 2,400 ಚದರ ಅಡಿಯ ಫ್ಲಾಟ್‌, ಬ್ಯಾಂಕ್‌ ಖಾತೆಯಲ್ಲಿ 10 ಲಕ್ಷ ಹಣ ಸೇರಿ ಅಪಾರ ಸಂಪತ್ತು ಪತ್ತೆಯಾಗಿದೆ. 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.