ಬೆಂಗಳೂರು: ಚಳಿ..ಚಳಿ.. ರಾಜಧಾನಿ ಬೆಂಗಳೂರು ಚಳಿಯಿಂದ ಈಗಾಗ್ಲೆ ತತ್ತರಿಸಿ ಹೋಗಿದೆ. ಇನ್ನೇನು ಚಳಿ ಕಡಿಮೆಯಾಯ್ತು ಅನ್ನೋ ಅಷ್ಟರಲ್ಲೇ ಮತ್ತೆ ಗಢ ಗಢ ಅನಿಸುತ್ತೆ ಬೆಂಗಳೂರಿನ ವಾತಾವರಣ. ದಿನೇ ದಿನೆ ಹವಾಮಾನದಲ್ಲಿ ಬದಲಾವಣೆ ಕಂಡುಬರುತ್ತಿದೆ. ಇನ್ನು ಇಂದಿನ ವಾತಾವರಣ ನೋಡೋದಾದ್ರೆ, ಬೆಂಗಳೂರು ಸೇರಿ ಹಲವು ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ ಮಂಜು ಮುಸುಕಿದ ವಾತಾವರಣ ಇದೆ.ಇದರ ಜೊತೆಗೆ ಮೈಕೊರೆಯುವಂತ ಚಳಿ ಕೂಡ ಇದೆ. ಒಂದೆಡೆ ಚಂಡಮಾರುತ ಪ್ರಸರಣ ಕೂಡ ಉಂಟಾಗಿದ್ದು, ಮುಂಬರುವ 5 ದಿನಗಳ ಕಾಲ ಇದೇ ವಾತಾವರಣ ಇರಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಹೌದು, ಆಗ್ನೆಯ ಅರಬ್ಬಿ ಸಮುದ್ರದ ಮೇಲೆ ಸಮುದ್ರಮಟ್ಟದಿಂದ 0.9ನ ಕಿಮೀ ಎಚ್ಚರದಲ್ಲಿ ವಾಯು ಚಂಡಮಾರುತ ಪರಿಚಲನೆ ಉಂಟಾಗಿರುವ ಬಗ್ಗೆ ತಿಳಿದುಬಂದಿದೆ. ಅಲ್ಲದೇ ಕೊಮೋರಿಯನ್ ಪ್ರದೇಶ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸಮುದ್ರಮಟ್ಟದಿಂದ 1.5 ಕಿಮೀವರೆಗೆ ಇನ್ನೊಂದು ವಾಯು ಚಂಡಮಾರುತ ಪರಿಚಲನೆ ಮುಂದುವರಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದ ಒಳನಾಡಿನ ಕೆಲ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚು ಇಳಿಕೆಯಾಗಿದೆ. ಕೆಲವು ಸ್ಥಳಗಳಲ್ಲಿ ತಾಪಮಾನವು 3 ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆಯಾಗಿದೆ. ದಕ್ಷಿಣ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಮಂಜಿನ ವಾತಾವರಣವೂ ಕಂಡುಬಂದಿದ್ದು, ಅಲ್ಲಿನ ಜನರಿಗೆ ಚಳಿ ಹೆಚ್ಚು ಕಾಡುತ್ತಿದೆ. ಈ ಚಳಿಯ ವಾತಾವರಣ ಮುಂದಿನ ಮೂರುರಿಂದ ಐದು ದಿನಗಳವರೆಗೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.
ಇನ್ನೊಂದೆಡೆ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳು ಹಾಗೂ ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ವಿಜಯನಗರ, ತುಮಕೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಮಂಡ್ಯ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಒಣಹವೆ ವಾತಾವರಣ ಇದೆ. ಈ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.ರಾಜ್ಯದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗಿದೆ. ಕಾರವಾರದಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಹೊನ್ನಾವರದಲ್ಲಿ 36 ಡಿಗ್ರಿ ಸೆಲ್ಸಿಯಸ್ ಕಂಡುಬಂದಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುಮಾರು 34 ಡಿಗ್ರಿ ಸೆಲ್ಸಿಯಸ್, ಕೊಪ್ಪಳದಲ್ಲಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಲಬುರಗಿ, ಬೀದರ್, ವಿಜಯಪುರ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಷ್ಣತೆ ಹೆಚ್ಚಾಗಿದೆ. ಈ ತಾಪಮಾನ ಏರಿಕೆಯು ಮುಂದಿನ ದಿನಗಳಲ್ಲಿ ಸೆಕೆ ಮತ್ತು ಬಿಸಿಲಿನ ತೀವ್ರತೆ ಹೆಚ್ಚುವ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.