ರಾಜಸ್ಥಾನ : ಮೇಘಾಲಯದಲ್ಲಿ ನಡೆದ ಹನಿಮೂನ್ ಮರ್ಡರ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿತ್ತು. ಈಗ ಅದೇ ರೀತಿಯ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಹೌದು ನವವಿವಾಹಿತೆ ತನ್ನ ಮಾಜಿ ಪ್ರೇಮಿ ಜೊತೆ ಸೇರಿ ಹನಿಮೂನ್‌ನಲ್ಲಿಯೇ ತನ್ನ ಗಂಡನನ್ನೆ ಕೊಲೆ ಮಾಡಿಸಿದ ಘಟನೆ ನಡೆದಿದೆ. ಚಾಲಕಿ ಹೆಂಡತಿ ಅಪಘಾತದಂತೆ ಪ್ರಕರಣವನ್ನು ತಿರುಚಿದ್ದಾಳೆ. ರಸ್ತೆಯಲ್ಲಿ ಗಂಡ ಹೆಂಡತಿ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರಿಗೆ ಗಾಡಿ ಬಂದು ಡಿಕ್ಕಿ ಹೊಡೆದಿದೆ. ಅಶಿಶ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅಂಜು ಅವರ ಚಿನ್ನಾಭರಣಗಳನ್ನು ದೋಚಿಕೊಂಡು ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು.
ಎಂದಿನಂತೆ ಇದೊಂದು ಹಿಟ್-ಅಂಡ್-ರನ್ ಪ್ರಕರಣ ಎಂದು ಪೊಲೀಸರು ನಂಬಿದ್ದರು. ದಂಪತಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಶಿಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ತನಿಖೆಯ ಸಮಯದಲ್ಲಿ ಪೊಲೀಸರು ಅಂಜು ಅವರ ಸಾಕ್ಷ್ಯ ಆಕೆಯ ಹೇಳಿಕೆಯ ನಡುವೆ ವ್ಯತ್ಯಾಸವನ್ನು ಕಂಡುಕೊಂಡಿದ್ದರಿಂದ ಅನುಮಾನ ಮೂಡಿದೆ. ಆಶಿಶ್‌ನ ದೇಹದ ಮೇಲೆ ಗಾಯದ ಗುರುತುಗಳಿದ್ದವು, ಮತ್ತು ವೈದ್ಯಕೀಯ ವರದಿಯ ಪ್ರಕಾರ ಆತನನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ವರದಿ ಬಂದಿದೆ. ಆದರೆ ಅಂಜು ಯಾವುದೇ ಗಾಯಗಳಾಗಿರಲಿಲ್ಲ ಇದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು.
ಹೆಚ್ಚಿನ ತನಿಖೆ ವೇಳೆ ಅಂಜುಗೆ ಬೇರೆ ಸಂಬಂಧವಿತ್ತು ಎಂದು ತಿಳಿದುಬಂದಿದೆ. ಆಕೆಯ ಮದುವೆಯಾಗುದಕ್ಕೆ ಕೂಡಾ ವಿರೋಧ ಮಾಡಿದ್ದಳು. ಆದರೆ ಮನೆಯವರ ಒತ್ತಾಯದ ನಂತರ ಅಂಜು ಮತ್ತು ಆಶಿಶ್ ಮೂರು ತಿಂಗಳ ಹಿಂದೆ. ವಿವಾಹವಾದರು. ಪತ್ನಿ ಹನಿಮೂನ್ ಗೆ ಕರೆದುಕೊಂಡು ಹೋಗುವ ನೆಪದಲ್ಲಿ ಗಂಡನ ಪ್ರಾಣ ತೆಗೆದಿದ್ದಾಳೆ. ಅಂಜು ತನ್ನ ಮಾಜಿ ಗೆಳೆಯ ಸಂಜು ಜೊತೆ ಸೇರಿ ಆಶಿಶ್‌ನ ಕೊಲೆಗೆ ಅನೇಕ ದಿನಗಳ ಹಿಂದೆಯೇ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.