ಉದಯಪುರ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ರಾಜಸ್ಥಾನದ ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ನಡೆಯಲಿದೆ. ಈಗಾಗಲೇ ಮದುವೆ ಸಂಭ್ರಮ ಬಿರುಸಿನಿಂದ ನಡೆಯುತ್ತಿದ್ದು, ನವ ಜೋಡಿ ಉದಯಪುರ ತಲುಪಿದ್ದಾರೆ. ಫೆಬ್ರುವರಿ 26ರಂದು ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ
ಅರಾವಳಿ ಬೆಟ್ಟಗಳ ನಡುವೆ 50 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿರುವ ಈ ಐಷಾರಾಮಿ ರೆಸಾರ್ಟ್ ನಲ್ಲಿ ಒಂದು ದಿನ ಕಳೆಯಬೇಕಾದರೆ ಒಂದು ಲಕ್ಷ ರೂ.ಗಳವರೆಗೆ ಖರ್ಚು ಮಾಡಬೇಕು ಎಂದು ಹೇಳಲಾಗುತ್ತಿದೆ.
ರಶ್ಮಿಕಾ ಮತ್ತು ವಿಜಯ್ ಐಟಿಸಿ ಮೆಮೆಂಟೋ ಹೋಟೆಲ್ ಆಯ್ಕೆ ಮಾಡಲು ಮುಖ್ಯ ಕಾರಣ ಗೌಪ್ಯತೆ ಮತ್ತು ಸುರಕ್ಷತೆ. ಇದು ಅರಾವಳಿ ಪರ್ವತ ಶ್ರೇಣಿಗಳ ನಡುವೆ 50 ಎಕರೆ ವಿಸ್ತೀರ್ಣದ ಏಕಾಂತ ಸ್ಥಳದಲ್ಲಿದ್ದು, ಯಾವುದೇ ಸಾರ್ವಜನಿಕ ಅಡಚಣೆಯಿಲ್ಲದೆ ಸಮಾರಂಭಗಳನ್ನು ನಡೆಸಬಹುದು.
ಈ ಹೋಟೆಲ್ ನಲ್ಲಿ 117 ಖಾಸಗಿ ವಿಲ್ಲಾಗಳಿವೆ. ಈ ಎಸ್ಟೇಟ್ ನಲ್ಲಿ ನದಿ ಹರಿಯುವುದು ಮತ್ತೊಂದು ವಿಶೇಷ.
ಸಮಾರಂಭಕ್ಕೆ ನೂರಕ್ಕೂ ಹೆಚ್ಚು ಅತಿಥಿಗಳು ಆಗಮಿಸುವ ನಿರೀಕ್ಷೆ ಇದೆ. ಎಲ್ಲ ಅತಿಥಿಗಳು ವಾಣಿಜ್ಯ ವಿಮಾಗಳಲ್ಲಿ ಆಗಮಿಸಲಿದ್ದಾರೆ. ಮೂರು ದಿನ ವಿವಾಹ ಕಾರ್ಯಕ್ರಮಗಳು ನಡೆಯಲಿವೆ. ಸಿನಿಲೋಕದ ಗಣ್ಯರ ಜತೆಗೆ ತೆಲಂಗಾಣದ ಕೆಲವು ಪ್ರಮುಖ ರಾಜಕಾರಣಿಗಳು ಭಾಗವಹಿಸಲಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹೆಸರು ಸೇರಿಸಿ ಅಭಿಮಾನಿಗಳು ಇಬ್ಬರನ್ನೂ ವಿರೋಶ್ ಎಂದು ಕರೆದಿದ್ದರು. ಇದೀಗ ನಮ್ಮ ಮದುವೆಯನ್ನು “ವಿರೋಶ್” ಎಂದು ಕರೆದುಕೊಳ್ಳುವುದಾಗಿ ರಶ್ಮಿಕಾ ಮತ್ತು ವಿಜಯ್ ಖಚಿತಪಡಿಸಿದ್ದಾರೆ.