2026-03-07 05:06:30

Gold Silver prices fall on first day of the week | ವಾರದ ಮೊದಲ ದಿನವೇ ಕುಸಿದ ಚಿನ್ನ ಬೆಳ್ಳಿ ದರಗಳು | Speed News Kannada

Gold Silver prices fall on first day of the week | ವಾರದ ಮೊದಲ ದಿನವೇ ಕುಸಿದ ಚಿನ್ನ ಬೆಳ್ಳಿ ದರಗಳು | Speed News Kannada

ಬೆಂಗಳೂರು, ಫೆ.16- ವಾರಾಂತ್ಯದ ಆರಂಭದಲ್ಲಿ ದುಬಾರಿ ಬೆಲೆಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಂಡಿದ್ದು, ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಫೆ. 13ರಿಂದಲೂ ಸತತ ಇಳಿಕೆಯಲ್ಲಿರುವ ಬೆಳ್ಳಿಯು ವಾರದ ಮೊದಲ ದಿನವೇ ಪ್ರತಿ ಕೆ.ಜಿ.ಗೆ 7 ಸಾವಿರ ರೂ.
ನಷ್ಟು ಕುಸಿತವಾಗಿದೆ. ಹಾಗೆಯೇ ನಿರಂತರ ಎರಡು ದಿನಗಳ ಇಳಿಕೆಯ ನಂತರ ಕಳೆದ ಶನಿವಾರ ಏರಿಕೆಯಾಗಿದ್ದ ಚಿನ್ನದ ದರ ನಿನ್ನೆ ಸ್ಥಿರವಾಗಿತ್ತು. ಆದರೆ, ಇಂದು ಚಿನಿವಾರಪೇಟೆಯಲ್ಲಿ 24 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 131 ರೂ. ನಷ್ಟು ಕುಸಿತವಾಗಿದ್ದು, 15,644ರೂ.ಗೆ ಇಳಿದಿದೆ. ಅದೇ ರೀತಿ 22 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 120 ರೂ. ಕಡಿಮೆಯಾಗಿ 14,340 ರೂ.ಗೆ ಇಳಿಕೆಯಾಗಿದೆ. ಇನ್ನು ಆಭರಣದ 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 98 ರೂ. ಇಳಿಕೆಯಾಗಿದ್ದು, 11,733 ರೂ.ಗೆ ತಲುಪಿದೆ.
ಬೆಳ್ಳಿ ದರವು ಇಂದು ಪ್ರತಿ ಕೆ.ಜಿ.ಗೆ 7 ಸಾವಿರ ರೂ. ನಷ್ಟು ಇಳಿಕೆಯಾಗಿ 2.68 ಲಕ್ಷ ರೂ.ಗೆ ತಲುಪಿದೆ. ನಿನ್ನೆ ಸ್ಥಿರವಾಗಿತ್ತು. ಫೆ. 13ರಂದು 15 ಸಾವಿರ ರೂ., ಫೆ.14ರಂದು ಐದು ಸಾವಿರ ರೂ. ನಷ್ಟು ಇಳಿಕೆಯಾಗಿತ್ತು. ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದ ಬೆಳ್ಳಿಗೆ ಸದ್ಯಕ್ಕೆ ಮಾರುಕಟ್ಟೆಯಲ್ಲಿ ತಡೆಯೊಡ್ಡಿದಂತಾಗಿದೆ. ಮಾರುಕಟ್ಟೆಯಲ್ಲಿ ಏರಿಳಿತವಾದರೂ ದಾಖಲಾರ್ಹ ಪ್ರಮಾಣದಲ್ಲಿ ಸದ್ಯಕ್ಕೆ ಮತ್ತೆ ಏರಿಕೆಯಾಗುವ ಸಾಧ್ಯತೆ ವಿರಳ ಎಂಬುದು ಮಾರಾಟಗಾರರ ಅಭಿಪ್ರಾಯವಾಗಿದೆ. ಫೆ.9 ರಿಂದ ನಿರಂತರ ಮೂರು ದಿನ ಏರುಗತಿಲ್ಲಿದ್ದ ಚಿನ್ನದ ದರವು ಫೆ.12 ಹಾಗೂ 13ರಂದು ಇಳಿಕೆಯಾಗಿ ಫೆ.14ರಂದು ಹೆಚ್ಚಳವಾಗಿತ್ತು. ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಏರಿಳಿತವಾಗಲು ನಾನಾ ಕಾರಣಗಳಿವೆ. ದೇಶೀಯ ಬೇಡಿಕೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ವ್ಯತ್ಯಾಸಗಳಿಂದ ದರದ ಏರಿಳಿತಗಳಾಗುತ್ತಿವೆ.
ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರುಗತಿಯಲ್ಲಿದ್ದರೂ ಬೇಡಿಕೆಯಲ್ಲಿ ಇಳಿಕೆಯಾಗಿಲ್ಲ. ಪ್ರಸಕ್ತ ವರ್ಷದ ಆರಂಭದಲ್ಲೇ ಮದುವೆಯಂತಹ ಶುಭ ಕಾರ್ಯಗಳು ಹೆಚ್ಚಾಗಿರುವುದರಿಂದ ಚಿನ್ನಕ್ಕೆ ಉತ್ತಮ ಬೇಡಿಕೆಯಿದೆ ಎನ್ನುತ್ತಾರೆ ವರ್ತಕರು.ಅಂತಾರಾಷ್ಟ್ರೀಯ ಮಟ್ಟದಲ್ಲಾಗುವ ವಾಣಿಜ್ಯ ಬದಲಾವಣೆಗಳು, ಪ್ರಚಲಿತ ವಿದ್ಯಮಾನಗಳು ಕೂಡ ಚಿನ್ನದ ದರದ ಏರಿಳಿತದ ಮೇಲೆ ಪರೋಕ್ಷ ಪರಿಣಾಮ ಬೀರುತ್ತವೆ ಎನ್ನಲಾಗಿದೆ.
ಬೆಂಗಳೂರು, ಫೆ.16- ವಾರಾಂತ್ಯದ ಆರಂಭದಲ್ಲಿ ದುಬಾರಿ ಬೆಲೆಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಂಡಿದ್ದು, ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಫೆ. 13ರಿಂದಲೂ ಸತತ ಇಳಿಕೆಯಲ್ಲಿರುವ ಬೆಳ್ಳಿಯು ವಾರದ ಮೊದಲ ದಿನವೇ ಪ್ರತಿ ಕೆ.ಜಿ.ಗೆ 7 ಸಾವಿರ ರೂ. ನಷ್ಟು ಕುಸಿತವಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.