2026-06-08 02:43:07

give the appointment list of your tenure joshi demandsSpeedNewsKannada

give the appointment list of your tenure joshi demandsSpeedNewsKannada

ನವದೆಹಲಿ: ರಾಜ್ಯದಲ್ಲಿ 40 ಸಾವಿರ ನೇಮಕಾತಿಗಳಾಗಿವೆ ಎನ್ನುವ ಕಾಂಗ್ರೆಸ್ ಸರ್ಕಾರ ಅದರ ವಿವರವನ್ನೇಕೆ ನೀಡುತ್ತಿಲ್ಲ? ಮೊದಲು ಅದನ್ನು ಜನರ ಎದುರಿಡಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ. 
ದೆಹಲಿಯಿಂದ ಪ್ರಕಟಣೆ ನೀಡಿರುವ ಅವರು, ಈ ಸರ್ಕಾರ ಅದೆಷ್ಟು ಜನರಿಗೆ ನೇಮಕಾತಿ ಪತ್ರ ನೀಡಿದೆ? ಕಾನೂನು ಅಡೆತಡೆ ಮತ್ತು ಹಿಂದಿನ ಸರ್ಕಾರದ ನೆಪ ಹೇಳಿ ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ತರಾಟೆಗೆ ತೆಗೆದುಕೊಂಡಿರುವ ಸಚಿವರು, ಸರ್ಕಾರ ಇಲ್ಲಸಲ್ಲದ ಸಬೂಬು ಹೇಳೋದನ್ನು ಬಿಟ್ಟು ಪ್ರಸ್ತುತ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ವಾಗ್ದಾನ ಅಲ್ಲ; ನೇಮಕಾತಿ ಆದೇಶ ಬೇಕು:
ಕಾಂಗ್ರೆಸ್ ಸರ್ಕಾರದಿಂದ ಯುವಕರಿಗೆ ಬೇಕಿರುವುದು ಉದ್ಯೋಗದ 'ವಾಗ್ದಾನ'ವಲ್ಲ, ನೇಮಕಾತಿ ಆದೇಶ. ರಾಜ್ಯ ಸರ್ಕಾರ ಮೊದಲು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ. ಯುವ ಜನರ ಬೇಡಿಕೆಗಳನ್ನು ಆಲಿಸಬೇಕು. ಯುವ ಜನರ ಉದ್ಯೋಗ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರದ ಬಳಿ ಹಣಕಾಸಿನ ಕೊರತೆಯಿದೆ. ಇದು ಸರ್ಕಾರದ ಆಡಳಿತಾತ್ಮಕ ವೈಫಲ್ಯವಲ್ಲವೇ? ಎಂದು ಪ್ರಶ್ನಿಸಿರುವ ಪ್ರಹ್ಲಾದ ಜೋಶಿ, ಕಳೆದ ಮೂರು ವರ್ಷದಲ್ಲಿ ಸರ್ಕಾರ ಯುವಕರಿಗಾಗಿ ಕೈಗೊಂಡ ಕ್ರಮಗಳನ್ನು ಜನರ ಮುಂದಿಡಲಿ ಎಂದು ಹೇಳಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.