2026-06-08 05:25:13

give oppurtunity if dmk-aiadmk come with majority;governor clarification| ಬಹುಮತದೊಂದಿಗೆ ಡಿಎಂಕೆ – ಎಐಎಡಿಎಂಕೆ ಬಂದರೂ ಅವಕಾಶ ನೀಡುವೆ: ರಾಜ್ಯಪಾಲ ಅರ್ಲೇಕರ್ ಸ್ಪಷ್ಟನೆ | Speed News Kannada

give oppurtunity if dmk-aiadmk come with majority;governor clarification| ಬಹುಮತದೊಂದಿಗೆ ಡಿಎಂಕೆ – ಎಐಎಡಿಎಂಕೆ ಬಂದರೂ ಅವಕಾಶ ನೀಡುವೆ: ರಾಜ್ಯಪಾಲ ಅರ್ಲೇಕರ್  ಸ್ಪಷ್ಟನೆ | Speed News Kannada

ಚೆನ್ನೈ: ಬಹುಮತದೊಂದಿಗೆ ಡಿಎಂಕೆ – ಎಐಎಡಿಎಂಕೆ ಬಂದರೂ ಸರ್ಕಾರ ರಚನೆಗೆ ಅವಕಾಶ ನೀಡಬೇಕಾಗುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗ. ನಾನು ವಿಜಯ್ ತಡೆಯಲು ಪ್ರಯತ್ನಿಸುತ್ತಿಲ್ಲ ಎಂದು ತಮಿಳುನಾಡು ರಾಜೇಂದ್ರ ಅರ್ಲೇಕರ್  ಸ್ಪಷ್ಟಪಡಿಸಿದ್ದಾರೆ.

ಟಿವಿಕೆ ಮುಖ್ಯಸ್ಥ ವಿಜಯ್‌ ಅವರಿಗೆ ಅವಕಾಶ ನೀಡದೆ ಇರುವುದಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಾಜ್ಯಪಾಲರು ಈ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರವನ್ನು ರಚಿಸಲು ಮುಂದೆ ಬರುವ ಪಕ್ಷ ಬಹುಮತ ಇರುವುದನ್ನು ಸಾಬೀತುಪಡಿಸಬೇಕು.ಬಹುಮತ ಇದೆ ಎನ್ನುವುದನ್ನು ನನಗೆ ಮನವರಿಕೆ ಮಾಡಬೇಕು. ಇದಕ್ಕಿಂತ ಹೆಚ್ಚು ನಾನು ಏನ್ನನೂ ಕೇಳುವುದಿಲ್ಲ. ನಾನು ತಲೆ ಎಣಿಕೆಯನ್ನು ಕೇಳುತ್ತಿಲ್ಲ, ಅದು ನನ್ನ ಅಧಿಕಾರ ಅಲ್ಲ ಎಂದೂ ಹೇಳೀದ್ದಾರೆ.

ಡಿಎಂಕೆ ಎಐಎಡಿಎಂಕೆ ಸೇರಿದಂತೆ ಬಹುಮತದ ಜತೆ ಯಾರೇ ಬಂದರೂ  ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗ. ಸಂಖ್ಯೆಗಳಿದ್ದರೇ ನಾನು ನಾಳೆಯೇ ಪ್ರಮಾಣ ವಚನ ಬೋಧಿಸಲು ಸಿದ್ಧವಿದ್ದೇನೆ ಎಂದಿದ್ದಾರೆ.

ಕರ್ನಾಟಕದ ಎಸ್‌.ಆರ್ ಬೊಮ್ಮಾಯಿ ಪ್ರಕರಣ ಹೊಸ ಸರ್ಕಾರ ರಚನೆಗೆ ಸಂಬಂಧಿಸಿದ್ದಲ್ಲ. ಆದರೆ ಇದು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದ ಪ್ರಕರಣ. ಬಹುಮತಕ್ಕೆ ಬೇಕಾದ ಸಂಖ್ಯೆ ಮಾತ್ರ ಕೇಳುತ್ತಿದ್ದೇನೆ. ಬಹುಮತವನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸಲಿ. ಕುದುರೆ ವ್ಯಾಪಾರ ಒಳ್ಳೆಯ ಬೆಳವಣಿಗೆಯಲ್ಲ ಎಂದೂ ಹೇಳಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.