2026-03-07 04:58:10

Gilli Nata | Malavalli Celebration | ದೊಡ್ಮನೆ ದೊರೆ ಗಿಲ್ಲಿ ಗೆಲುವು.. ಮಳವಳ್ಳಿಯಲ್ಲಿ ಹಬ್ಬ..! | Speed News Kannada

Gilli Nata | Malavalli Celebration | ದೊಡ್ಮನೆ ದೊರೆ ಗಿಲ್ಲಿ ಗೆಲುವು.. ಮಳವಳ್ಳಿಯಲ್ಲಿ ಹಬ್ಬ..! | Speed News Kannada

ಮಳವಳ್ಳಿಯ ಹಳ್ಳಿಹೈದ ಗಿಲ್ಲಿ ಈಗ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಗೆದ್ದಾಯ್ತು..ಗಿಲ್ಲಿ ಗೆದ್ದಿದ್ದು ಇಡೀ ರಾಜ್ಯದಲ್ಲೇ ಒಂದು ಸಂಭ್ರಮ ತುಂಬಿದೆ ಅಂದ್ರೆ ತಪ್ಪಾಗೊಲ್ಲ.ಕೊನೆಗೂ ಗಿಲ್ಲಿ ದೊಡ್ಮನೆ ದೊರೆಯಾಗಿ ಆಚೆ ಬಂದಾಯ್ತು , ಬರೀ ಬಿಗ್‌ ಬಾಸ್‌ ಆಟದ ವಿನ್ನರ್ ಆಗಿ ಮಾತ್ರ ಆಚೆ ಬಂದಿಲ್ಲ , ಮನೆಮಗನಾಗಿ ಕರುನಾಡ ಜನಮನ ಗೆದ್ದಿದ್ದಾರೆ ಗಿಲ್ಲಿ ಅಂತ್ಲೇ ಹೇಳಬಹುದು . ಬಿಗ್ ಬಾಸ್ ಸ್ಟಾರ್ಟ್‌ ಆದ ದಿನದಿಂದಲೇ 'ಗಿಲ್ಲಿಯೇ ವಿನ್ನರ್' ಎಂಬ ಮಾತು ಕೇಳಿಬರುತ್ತಲೇ ಇತ್ತು. ಗಲ್ಲಿ ಗಲ್ಲಿಯಲ್ಲೂ ಗಿಲ್ಲಿಯ ಹವಾ ಜೋರಾಗಿತ್ತು. ಕಾಮಿಡಿ ಟೈಮಿಂಗ್, ಪಂಚಿಂಗ್ ಲೈನ್ಸ್ ಹಾಗೆ ಗಿಲಿ ಬೇರೆಯವರಿಗೆ ಕಾಲೆಳೆಯೋ ರೀತಿ ಸೇರಿ ಗಿಲ್ಲಿಯ ಆಟ ನೋಡೋರಿಗೆ ಮನಸ್ಸಿಗೆ ನೇರವಾಗಿ ತಲುಪಿತು. ಮುಖ್ಯವಾಗಿ, ಗಿಲ್ಲಿ ಮಾಡೋ ಕಾಮಿಡಿ ಹೆಂಗಿರುತ್ತೆ ಅಂದ್ರೆ ಪ್ಯೂರ್‌ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಆಗಿರುತ್ತೆ, ಅವ್ರು ಮಾಡೋ ಡಬಲ್ ಮೀನಿಂಗ್ ಅಥವಾ ಅಶ್ಲೀಲತೆ ಇಲ್ಲದಂತಹ ಕಾಮಿಡಿಯೇ ಜನರನ್ನು ಹೆಚ್ಚು ಸೆಳೆದಿತು.ಇಡೀ ಕುಟುಂಬ ಕೂತು ನೋಡಬಹುದಾದಂತಹ ಕಾಮಿಡಿ ಅನ್ನುವಂತಹ ಹೆಗ್ಗಳಿಕೆಯನ್ನು ಗಿಲ್ಲಿ ಪಡೆದಿದ್ದಾರೆ. ಗಿಲ್ಲಿ ಗೆದ್ದಿರೋದಕ್ಕೆ ಇಡೀ ರಾಜ್ಯಾದ್ಯಂತ ಪಟಾಕಿ, ಶಿಳ್ಳೆ, ಚಪ್ಪಾಳೆ, ಸಂಭ್ರಮಾಚರಣೆ ಜೋರಾಗಿದೆ. ಹುಟ್ಟೂರು ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದಲ್ಲಿ ವಿಶೇಷ ಸಂಭ್ರಮ ಕಂಡುಬಂದಿದ್ದು, ಗ್ರಾಮಸ್ಥರು ಕಟೌಟ್ ಹಿಡಿದು ಪಟಾಕಿ ಸಿಡಿಸಿ ಸಂಭ್ರಮಿಸಿದರು. "ಗಿಲ್ಲಿ ನಮ್ಮೂರಿಗೆ ಹೆಮ್ಮೆ ತಂದಿದ್ದಾನೆ" ಎಂದು ಗ್ರಾಮಸ್ಥರು ಹೆಮ್ಮೆಯಿಂದ ಹೇಳಿದರು.ಇನ್ನು ಗಿಲ್ಲಿಗೆ ಭವ್ಯ ಸ್ವಾಗತ ನೀಡಲು ಗ್ರಾಮಸ್ಥರು ಸಜ್ಜಾಗಿದ್ದು, ಮದ್ದೂರಿನಿಂದ ದಡದಪುರವರೆಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸುವ ಯೋಜನೆ ಕೂಡ ಇದೆ. ಮುಂದಿನ ವಾರ ಮಳವಳ್ಳಿಲಿ ಸಿಡಿ ಹಬ್ಬ ಅಂತ ನಡೆಯುತ್ತಂತೆ ಆ ಹಬ್ಬವನ್ನ ಗಿಲ್ಲಿ ಸ್ವಾಗತಕ್ಕೆ ಸಮರ್ಪಿಸುವ ನಿರ್ಧಾರವೂ ತೆಗೆದುಕೊಳ್ಳಲಾಗಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಗಿಲ್ಲಿ ಬಳಸುತ್ತಿದ್ದ "ಡಮಾಲ್ ಡಿಮಿಲ್ ಡಕ್ಕ… ಗಿಲ್ಲಿ ಗೆಲ್ಲೋದು ಪಕ್ಕಾ" ಡೈಲಾಗ್ ಇದೀಗ ನಿಜವಾಗಿದೆ. ಗಿಲ್ಲಿ ಅತೀ ಹೆಚ್ಚು ಮತಗಳೊಂದಿಗೆ ವಿನ್ನರ್ ಆಗಿದ್ದು, 50 ಲಕ್ಷ ಕ್ಯಾಷ್, ಮಾರುತಿ ಸುಜುಕಿ ಕಾರು ಸೇರಿದಂತೆ ಹಲವು ಬಹುಮಾನಗಳನ್ನು ಪಡೆದಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರಿಂದ 10 ಲಕ್ಷ ರೂ. ಪ್ರೀತಿಯ ಉಡುಗೊರೆಯಾಗಿ ಲಭಿಸಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12'ರ ವಿನ್ನರ್ ಆಗಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ. ಅವರಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. 24 ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವನ್ನು ಕಂಡರು. ರನ್ನರ್ ಅಪ್ ಸ್ಥಾನಕ್ಕೆ ರಕ್ಷಿತಾ ಶೆಟ್ಟಿ ಖುಷಿಪಟ್ಟಿದ್ದಾರೆ.ಇದು ಅವರಿಗೆ ವೋಟ್ ಆಗಿಯೂ ಬದಲಾಗಿದೆ. 40 ಕೋಟಿಗೂ ಅಧಿಕ ವೋಟ್ ಅವರು ಪಡೆದಿದ್ದಾರೆ ಎಂಬುದೇ ಇದಕ್ಕೆ ಸಾಕ್ಷಿ.ಗಿಲ್ಲಿ ನಟಗೆ ವಿನ್ನಿಂಗ್ ಅಮೌಂಟ್ ಆಗಿ 50 ಲಕ್ಷ ರೂಪಾಯಿ ಸಿಕ್ಕಿದೆ. ಇದು ಪ್ರತಿ ಬಾರಿ ವಿನ್ನರ್ಗೂ ಸಿಗುತ್ತಿದ್ದ ಮೊತ್ತ. ಈ ಬಾರಿ ಗಿಲ್ಲಿಗೆ ಬಂಪರ್ ಲಾಟರಿ ಹೊಡೆದಿದೆ. ಏಕೆಂದರೆ ಒಂದು ಕಾರು ಕೂಡ ಸಿಗುತ್ತಿದೆ.ವಿನ್ನರ್ ಗಿಲ್ಲಿಗೆ ಸುಮಾರು 20 ಲಕ್ಷ ರೂಪಾಯಿಯ ಕಾರು ಉಡುಗೊರೆಯಾಗಿ ಸಿಗುತ್ತಿದೆ. ಈ ಬಾರಿಯ ಬಿಗ್ ಬಾಸ್ಗೆ ಮಾರುತಿ ಸುಜುಕಿ ಕೂಡ ಸ್ಪಾನ್ಸರ್ ಆಗಿತ್ತು. ಅವರ ಕಡೆಯಿಂದ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ವಿಜೇತರಿಗೆ ಸಿಕ್ಕಿದೆ.ಮಾರುತಿ ವಿಕ್ಟೋರಿಸ್ ಕಳೆದ ವರ್ಷ ಪರಿಚಯಿಸಲಾಗಿದೆ. ಈ ಕಾರು 1490 ಸಿಸಿ ಇಂಜಿನ್ ಹೊಂದಿದೆ. ಗ್ಲೋಬಲ್ ನ್ಕ್ಯಾಪ್ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಕಾರು ಗಿಲ್ಲಿಗೆ ಸಿಕ್ಕಿರೋದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.ಸುದೀಪ್ ಕಡೆಯಿಂದ ಗಿಲ್ಲಿಗೆ 10 ಲಕ್ಷ ರೂಪಾಯಿ ಸಿಗುತ್ತಿದೆ. ಈ ಬಗ್ಗೆ ಅವರು ಘೋಷಣೆ ಮಾಡಿದರು. ಮುಂದಿನ ದಿನಗಳಲ್ಲಿ ಅವರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಕೂಡ ಬರುವ ಸಾಧ್ಯತೆ ಇದೆ. ಗಿಲ್ಲಿ ಅವರನ್ನು ನೋಡಲು ಜಾಲಿವುಡ್ ಸ್ಟುಡಿಯೋ ಹೊರಗೆ ಸಾಕಷ್ಟು ಜನರು ಸೇರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.