2026-06-08 01:25:31

George Resigns For IAS Officer | IAS ಅಧಿಕಾರಿಗಾಗಿ ಜಾರ್ಜ್‌ ರಾಜೀನಾಮೆ? | Speed News Kannada

George Resigns For IAS Officer | IAS ಅಧಿಕಾರಿಗಾಗಿ ಜಾರ್ಜ್‌ ರಾಜೀನಾಮೆ? | Speed News Kannada

ಬೆಂಗಳೂರು, ಜನವರಿ 29: ಸಚಿವ ಕೆ.ಜೆ.ಜಾರ್ಜ್ ಅವರು ಐಎಎಸ್ ಅಧಿಕಾರಿ ಪರ ನಿಂತು ರಾಜೀನಾಮೆ ಕೊಡಲು ಮುಂದಾಗಿದ್ದರು ಎನ್ನುವ ಸುದ್ದಿ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿದೆ. ಜಾರ್ಜ್ ರಾಜೀನಾಮೆ ಇಂದಿನ ಅಸಲಿ ಕಾರಣ ಏನು ಗೊತ್ತಾ? ಪವರ್ ಶೇರಿಂಗ್ ಬಡಿದಾಟದ ನಡುವೆಯೇ ಸಿಎಂ ಸಿದ್ದರಾಮಯ್ಯ ಪರಮ ಆಪ್ತ ಹಾಗೂ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಯ ಬಿಗ್ ಶಾಕ್ ಕೊಡಲು ಮುಂದಾಗಿದ್ದರು ಎನ್ನುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 
ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಅವರು ಇಂಧನ ಇಲಾಖೆಯ ಟೆಂಡರ್‌ಗಳನ್ನ ಉತ್ತರ ಭಾರತೀಯರಿಗೆ ನೀಡ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಕರ್ನಾಟಕದ ಕೆಲ ಕಂಟ್ರಾಕ್ಟರ್ ಗಳು ಪಾಂಡೆ ವಿರುದ್ಧ ಸಿಎಂಗೆ ದೂರು ಸಹ ನೀಡಿದ್ರು. ದೂರು ಬಂದ ಹಿನ್ನೆಲೆಯಲ್ಲಿ ಸಿಎಂ ಕಚೇರಿಯಿಂದ ಪಾಂಡೆಗೆ ನೋಟಿಸ್ ನೀಡಲಾಗಿತ್ತು. ಆದ್ರೆ ನೋಟಿಸ್ ಕೊಟ್ರು ಕೆಪಿಟಿಸಿಎಲ್ ಎಂಡಿ ಪಾಂಡೆ ಅವರು ಸಿದ್ದರಾಮಯ್ಯ ಅವರನ್ನ ಭೇಟಿಯಾಗಿಲ್ಲ.
ಸಿಎಂ ಸಿದ್ದರಾಮಯ್ಯ ಅವರು 8 ಬಾರಿ ಭೇಟಿಯಾಗುವಂತೆ ಪಾಂಡೆ ಅವರಿಗೆ ಕಚೇರಿಯಿಂದ ಕಾಲ್ ಮಾಡಿದ್ರು ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಪಾಂಡೆ ನಡೆಗೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಅವರು ಪಂಕಜ್ ಕುಮಾರ್ ಪಾಂಡೆಯನ್ನ ಸಸ್ಪೆಂಡ್ ಮಾಡುವಂತೆ ಪಾಂಡೆಗೆ ಸಿಎಸ್ ನೋಟೀಸ್ ಆದೇಶಿಸಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.