ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ವಿಶ್ವಕಪ್ ಬಳಿಕ ಗುಡ್ ಬೈ ಹೇಳುವ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣವೂ ಇದೆ. ರಾಹುಲ್ ದ್ರಾವಿಡ್ ಬಳಿಕ ಟೀಂ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದರು.ಕಳೆದ ಟಿ20 ವಿಶ್ವಕಪ್ ಬಳಿಕ ಅವರು ತಂಡ ಸೇರಿಕೊಂಡಿದ್ದರು. ಆದರೆ ಈಗ ಈ ಟಿ20 ವಿಶ್ವಕಪ್ ಬಳಿಕ ಅವರು ಕೋಚ್ ಹುದ್ದೆಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಕಮ್ ಪಾರ್ಟನರ್ ಆಗಿ ಸೇರಿಕೊಳ್ಳುವಂತೆ ಗಂಭೀರ್ ಗೆ ಭಾರೀ ಮೊತ್ತದ ಆಫರ್ ಬಂದಿದೆ. ಹೀಗಾಗಿ ಅವರು ರಾಷ್ಟ್ರೀಯ ತಂಡವನ್ನು ತ್ಯಜಿಸಿ ಐಪಿಎಲ್ ಫ್ರಾಂಚೈಸಿಗೆ ಮತ್ತೆ ಸೇರಿಕೊಳ್ಳಲಿದ್ದಾರೆ ಎಂದು ದೈನಿಕ್ ಜಾಗರಣ್ ಪತ್ರಿಕೆ ವರದಿ ಮಾಡಿದೆ.
ಈ ಹಿಂದೆ ಲಕ್ಕೆ ಫ್ರಾಂಚೈಸಿ ಮೆಂಟರ್ ಆಗಿದ್ದ ಗಂಭೀರ್ ಬಳಿಕ ಕೆಕೆಆರ್ ತಂಡದ ಮೆಂಟರ್ ಆಗಿದ್ದರು. ಅವರು ಮೆಂಟರ್ ಆಗಿದ್ದಾಗ ಕೆಕೆಆರ್ ಐಪಿಎಲ್ ಚಾಂಪಿಯನ್ ಆಗಿತ್ತು. ಸೀಮಿತ ಓವರ್ ಗಳಲ್ಲಿ ಅವರ ಯಶಸ್ಸು ಗಮನಿಸಿ ಟೀಂ ಇಂಡಿಯಾ ಕೋಚ್ ಆಗಿ ನೇಮಿಸಲಾಗಿತ್ತು. ಇದೀಗ ಟೀಂ ಇಂಡಿಯಾ ಕೋಚ್ ಆಗಿ ಅವರ ಕಾರ್ಯವೈಖರಿ ಬಗ್ಗೆ ಅಭಿಮಾನಿಗಳಲ್ಲಿ ಅಸಮಾಧಾನವೂ ಇದೆ. ಇದರ ನಡುವೆ ಈಗ ಅವರು ಕೋಚ್ ಹುದ್ದೆ ತ್ಯಜಿಸುವ ರೂಮರ್ ಹರಿದಾಡುತ್ತಿದೆ.