2026-06-08 04:32:29

G. Parameshwara Alleges | ದ್ವೇಷ ಭಾಷಣ ತಡೆ ಬಿಲ್ ಜಾರಿಯಾಗಬಾರದೆಂದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ : ಜಿ.ಪರಮೇಶ್ವರ್ ಆರೋಪ | Speed News Kannada

G. Parameshwara Alleges | ದ್ವೇಷ ಭಾಷಣ ತಡೆ ಬಿಲ್ ಜಾರಿಯಾಗಬಾರದೆಂದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ : ಜಿ.ಪರಮೇಶ್ವರ್ ಆರೋಪ | Speed News Kannada

ಬೆಂಗಳೂರು : ದ್ವೇಷ ಭಾಷಣ ತಡೆ ಬಿಲ್ ಗೆ ರಾಜ್ಯಪಾಲರು ಅಂಕಿತ ಹಾಕದ ವಿಚಾರವಾಗಿ 28 ಅಂಶಗಳನ್ನು ಪ್ರಶ್ನೆ ಮಾಡಿ ಅದನ್ನು ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ರಾಷ್ಟ್ರಪತಿಗಳು ಅಬ್ಬರ್ವೇಷನ್ ಗೆ ವಾಪಸ್ ಕಳುಹಿಸಿದರ ನೋಡಬೇಕು ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.ಬೆಂಗಳೂರಲ್ಲಿ ಮಾತನಾಡಿದ ಅವರು, ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ ಹಾಗಂತ ಏನು ಬೇಕಾದರೂ ಮಾತನಾಡುವುದು ತಪ್ಪು. ಸಮಾಜದ ಮೇಲೆ ಅದು ಯಾವ ರೀತಿಯ ಪರಿಮಾಣ ಬೀರುತ್ತೆ ವ್ಯಕ್ತಿ ಮತ್ತು ಸಮುದಾಯದ ಬಗ್ಗೆ ಮಾತನಾಡುವುದು ಎಷ್ಟು ಪರಿಣಾಮ ಬೀರುತ್ತೆ ಇದೆಲ್ಲಾ ಯೋಚನೆ ಮಾಡಿ ದ್ವೇಷ ಭಾಷಣ ತಡೆ ಬಿಲ್ ಮಾಡಿದ್ದು ಎಂದರು.
ರಾಜ್ಯದ ಹಲವು ಭಾಗಗಳಲ್ಲಿ ಕೆಲವರು ಭಾಷಣವನ್ನು ಮಾಡಿದ್ದರು ಭಾಷಣ ಮಾಡಿದ ಮೇಲೆ ಏನಾಗಿದೆ ಅಂತ ನಾವು ಗಮನಿಸಿದ್ದೇವೆ ಇದಕ್ಕೆ ಕಡಿವಾಣ ಹಾಕುವುದಕ್ಕೆ ಆ ಬಿಲ್ ಅನ್ನು ನಾವು ತಂದಿದ್ದು ನಿಮ್ಮ ಉದ್ದೇಶ ಏನಿದೆ? ಯಾರು ಏನಾದರೂ ಮಾಡಬಹುದಾ? ಎಂದು ಪರಮೇಶ್ವರ್ ಪ್ರಶ್ನೆ ಮಾಡಿದರು. ಉದ್ದೇಶಪೂರ್ವಕವಾಗಿ ಈ ಕಾಯಿದೆ ಜಾರಿಗೆ ಬರಬಾರದು ಅಂತ ನೆನೆಗುದಿಗೆ ಬೀಳಿಸಬೇಕು ಅಂತಾನೆ ರಾಜ್ಯಪಾಲರು ಕಳುಹಿಸಿದ್ದಾರೆ ಮುಂದಿನ ದಿನಗಳಲ್ಲಿ ಯಾವ ರೀತಿ ಆಗುತ್ತೆ ಅಂತ ನೋಡೋಣ ಮುಂದೆ ಸರಿ ಹೋಗಬಹುದು ಎಂಬ ಭಾವನೆ ಇದೆ ಎಂದು ಗೃಹ ಸಚಿವ ಜಿ ಪರಮೇಶ್ವ‌ರ್ ತಿಳಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.