2026-03-07 06:45:43

Funeral of Iranian schoolgirls killed in US Israeli attack | ಅಮೆರಿಕ ಇಸ್ರೇಲ್ ದಾಳಿಗೆ ಇರಾನ್ ಶಾಲಾ ಬಾಲಕಿಯರು ಬಲಿ ಸ್ಮಶಾನದಲ್ಲಿ ನಡೆಯಿತು ಸಾಮೂಹಿಕ ಅಂತ್ಯಕ್ರಿಯೆ | Speed News Kannada

Funeral of Iranian schoolgirls killed in US Israeli attack | ಅಮೆರಿಕ ಇಸ್ರೇಲ್ ದಾಳಿಗೆ ಇರಾನ್ ಶಾಲಾ ಬಾಲಕಿಯರು ಬಲಿ ಸ್ಮಶಾನದಲ್ಲಿ ನಡೆಯಿತು ಸಾಮೂಹಿಕ ಅಂತ್ಯಕ್ರಿಯೆ | Speed News Kannada

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇರಾನ್ ವಿರುದ್ಧದ ಅಮೆರಿಕ- ಇಸ್ರೇಲ್ ದಾಳಿಯಿಂದಾಗಿ 160 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ತಮ್ಮ ಮಕ್ಕಳ ಅಂತ್ಯಕ್ರಿಯೆನ್ನು ಸಾಮೂಹಿಕವಾಗಿ ನೆರವೇರಿಸಿದ್ದಾರೆ. ಅಂತ್ಯಕ್ರಿಯೆ ಮೊದಲು ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೆರವಣಿಗೆ ಇಂದು ನಡೆಯಿತು. ಜನಸಾಗರವೇ ಹರಿದುಬಂದಿತ್ತು. ಬಳಿಕ ಸ್ಮಶಾನದಲ್ಲಿ ಜೆಸಿಬಿಯಿಂದ ನೂರಾರು ಸ್ಮಶಾನ ಗುಂಡಿಗಳನ್ನು ತೆರೆಯಾಗಿತ್ತು. ಗುಂಡಿ ಮುಂದೆ ಮೃತದೇಹ ಇಟ್ಟುಕೊಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಬಳಿಕ ಸಾಮೂಹಿಕ ಅಂತ್ಯಕ್ರಿಯೆ ನಡೆಸಿದ್ದಾರೆ.
ಇರಾನ್ 131 ನಗರಗಳ ಮೇಲೆ ದಾಳಿ, ಮಕ್ಕಳು ಸೇರಿ 742 ನಾಗರಿಕರ ಸಾ*ವು ದಕ್ಷಿಣ ಇರಾನ್‌ ಮಿನಾಬ್ ಪಟ್ಟಣದ ಶಜರೆಹ್ ತಯೆಬೆಹ್ ಬಾಲಕಿಯರ ಪ್ರಾಥಮಿಕ ಶಾಲೆ ಮೇಲೆ ಫೆ.28 ರಂದು ದಾಳಿ ನಡೆಸಲಾಗಿತ್ತು. ಅಮೆರಿಕ, ಇಸ್ರೇಲ್ ನ ಈ ಮಿಲಿಟರಿ ದಾಳಿ ಬಗ್ಗೆ UNESCO ತೀವ್ರ ಕಳವಳ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ವಿದ್ಯಾರ್ಥಿಗಳನ್ನು ರಕ್ಷಿಸಬೇಕಾಗಿದೆ. ಶಿಕ್ಷಣ ಸಂಸ್ಥೆಗಳ ವಿರುದ್ಧದ ದಾಳಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಪಾಯವನ್ನುಂಟುಮಾಡುತ್ತವೆ ಮತ್ತು ಶಿಕ್ಷಣದ ಹಕ್ಕನ್ನು ಹಾಳುಮಾಡುತ್ತವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುನೆಸ್ಕೋ ಹೇಳಿಕೆ ಬಿಡುಗಡೆ ಮಾಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.