2026-06-08 01:22:50

Free Bus Effect | ಫ್ರೀ ಬಸ್‌ ಎಫೆಕ್ಟ್‌ ಆಧಾರ್‌‌ ಕಾರ್ಡ್‌ ಹಿಡಿದು ಮನೆ ಬಿಟ್ಟ ಮಕ್ಕಳು! | Speed News Kannada

Free Bus Effect | ಫ್ರೀ ಬಸ್‌ ಎಫೆಕ್ಟ್‌ ಆಧಾರ್‌‌ ಕಾರ್ಡ್‌ ಹಿಡಿದು ಮನೆ ಬಿಟ್ಟ ಮಕ್ಕಳು! | Speed News Kannada

ಬೆಂಗಳೂರು : ಕರ್ನಾಟಕ ಸರ್ಕಾರದ ‘ಶಕ್ತಿ’ ಯೋಜನೆ ಹಾಗೂ ಫ್ರೀ ಬಸ್ ಗ್ಯಾರಂಟಿ ಸ್ಕೀಮ್‌ನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಇದೆ. ಇದರಿಂದ ಹಲವು ಮಹಿಳೆಯರಿಗೆ ಉಪಯೋಗ ಪಡೆದುಕೊಂಡಿದ್ದಾರೆ.
ಫೆಬ್ರವರಿ 1ರಂದು ಸಂಜೆ 3 ಗಂಟೆ ಸುಮಾರಿಗೆ 13 ವರ್ಷದ ಬಾಲಕಿ ತನ್ನ ತಮ್ಮನನ್ನು ಕರೆದುಕೊಂಡು ಮನೆಯಿಂದ ಹೊರಟಿದ್ದರು. ಪೋಷಕರು ಟ್ಯೂಷನ್‌ಗೆ ಹೋಗದಿದ್ದಕ್ಕೆ ಮಕ್ಕಳನ್ನು ಬೈದಿದ್ದರು.
13 ವರ್ಷದ ಬಾಲಕಿ ಮತ್ತು ಅವಳ ತಮ್ಮ ಮಾರತ್ತಹಳ್ಳಿಯ ಅಶ್ವತ್ಥನಗರದಲ್ಲಿ ವಾಸವಿದ್ದರು. ಪೋಷಕರು ಟ್ಯೂಷನ್‌ಗೆ ಹೋಗದಿದ್ದಕ್ಕೆ ಮಕ್ಕಳನ್ನು ಬೈದಿದ್ದಕ್ಕೆ  ತನ್ನ ತಮ್ಮನೊಂದಿಗೆ ಆಧಾರ್‌ ಕಾರ್ಡ್‌ ಹಿಡಿದು ಮನೆ ಬಿಟ್ಟು ತೆರಳಿದ್ದಾರೆ. 9 ವರ್ಷದ ತಮ್ಮನಿಗೆ ಟಿಕೆಟ್ ಬೇಕಿಲ್ಲ ಎಂಬ ನಂಬಿಕೆಯೊಂದಿಗೆ ಅವನು ಚಿಕ್ಕವನಾಗಿರುವುದರಿಂದ ಇಬ್ಬರೂ ಮನೆ ಬಿಟ್ಟು ಹೊರಟರು. 
ಪೊಲೀಸರಿಗೆ ಮಕ್ಕಳು ಶಿವಮೊಗ್ಗ ಮತ್ತು ಚಿತ್ರದುರ್ಗ ಕಡೆಗೆ ತೆರಳಿದ್ದರೆ ಎಂದು ಮಹಿತಿ ತಿಳಿದುಬಂದಿದ್ದು. ಚಿತ್ರದುರ್ಗದಿಂದ ಒಬ್ಬ ವ್ಯಕ್ತಿ ಮಕ್ಕಳ ಫೋಟೋ ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಮಕ್ಕಳನ್ನು ಪತ್ತೆ ಮಾಡಿದರು. ನಂತರ ಹೆಚ್‌ಎಎಲ್ ಠಾಣೆಗೆ ಕರೆತಂದು ಪೋಷಕರಿಗೆ ಒಪ್ಪಿಸಿದರು. ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳಿದರು. ಈ ಘಟನೆಯಿಂದ ಪೋಷಕರು ತುಂಬಾ ಸಂತಸಗೊಂಡರು, ಆದರೂ ಮಕ್ಕಳ ಬಗ್ಗೆ ಆತಂಕ ಮೂಡಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.