2026-03-07 07:32:09

Four arrested for selling drugs in Mysore | ಮೈಸೂರಲ್ಲಿ ಡ್ರಗ್ಸ್ ಮಾರುತ್ತಿದ್ದ ನಾಲ್ವರ ಸೆರೆ | Speed News Kannada

Four arrested for selling drugs in Mysore | ಮೈಸೂರಲ್ಲಿ ಡ್ರಗ್ಸ್ ಮಾರುತ್ತಿದ್ದ ನಾಲ್ವರ ಸೆರೆ | Speed News Kannada

ಮೈಸೂರು, ಫೆ.24- ನಗರದಲ್ಲಿ ಅಕ್ರಮ ಮಾದಕವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಸಿ.ಸಿ.ಬಿ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಧಿಸಿ 10,30,800 ರೂ. ಬೆಲೆಯ ನಿಷೇಧಿತ ಮಾದಕವಸ್ತು ಎಂ.ಡಿ.ಎಂ.ಎ ಮತ್ತು 8 ಲಕ್ಷ ಮೌಲ್ಯದ ಇನೋವಾ ಕಾರ್ ಅನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಗೌಸಿಯಾನಗರದ ಝಿಯಾವುಲ್ಲ (28), ಲಷ್ಕರ್ ಮೊಹಲ್ಲಾದ ಜಾವೀದ್ ಅಹಮದ್(46), ಗೌಸಿಯಾನಗರದ ಸುಹೇಲ್ ಪಾಷ(19), ಬೆಂಗಳೂರಿನ ಪಾದರಾಯನಪುರದ ನುಹೇದ್ ಖಾನ್(23) ಬಂಧಿತ ಆರೋಪಿಗಳು..
ಪೊಲೀಸ್‌ ಆಯುಕ್ತರು, ಉಪಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೂ ಸಿಸಿಬಿ ಘಟಕದ ಎಸಿಪಿ ಮಹಮದ್ ಶರೀಪ್ ರಾವುತರ್ ಅವರ ಮಾಹಿತಿಯ ಮೇರೆಗೆ ಪಿಐ ಶಬ್ಬಿರ್ ಹುಸೇನ್ ನೇತೃತ್ವದಲ್ಲಿ ಲೇಪಾಕ್ಷ.ಕೆ. ಜೋತ್ಸಾರಾಜ್.ಆರ್. ರೇವಣಸಿದ್ದಪ್ಪ ಹಾಗೂ ಸಿಬ್ಬಂದಿಗಳಾದ ಮಧುಕುಮಾ‌ರ್, ಚೇತನ್, ಅಧಾಮ್. ಕಿರಣ್ ರಾಥೋಡ್, ಸಂತೋಷ್ ಪವಾರ್, ಹಜ್ರತ್ ಅಲಿ, ರಾಜಾಸಾಬ್, ಸಮೀರ್, ಯಶ್ವಂತ್, ದೇವರಾಜು, ಮಮತ.ಎನ್.ಜಿ. ಹಾಗೂ ಸಿದ್ದರಾಜು, ಸುರೇಶ್ರವರು ಉಮರ್ ಖಾಯಂ ರಸ್ತೆಯಲ್ಲಿ ಇನ್ನೊವಾ ಕಾರನ್ನು ತಪಾಸಣೆ ಮಾಡಿದ್ದಾರೆ.
ತಪಾಸಣೆ ವೇಳೆ ಕಾರಿನಲ್ಲಿದ್ದ 4 ಮಂದಿಯನ್ನು ವಶಕ್ಕೆ ಪಡೆದು ಬೆಂಗಳೂರು ವಾಸಿ ನುಹೇದ್ ಬಾನ್ ಬಳಿ ಎಂ.ಡಿ.ಎಂ.ಎ ಪೆಡ್ಲರ್ ಜಾವೀದ್ಯೆ ಸೇರಿದ 10.40,000 ರೂ ಮೌಲ್ಯದ ನಿಷೇಧಿತ ಮಾದಕವಸ್ತು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 8,00,000 ರೂ ಮೌಲ್ಯದ ಇನೋವಾ ಕಾರು ಹಾಗೂ 5 ಮೊಬೈಲ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ಸಮೇತ ವಶಪಡಿಸಿಕೊಂಡ ಮಾಲನ್ನು ಮಂಡಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವಶಕ್ಕೆ ನೀಡಿದ್ದು, ತನಿಖೆ ಮುಂದುವರೆದಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.