2026-03-07 02:07:36

Former ruler Jeevaraj alleges | ಶೃಂಗೇರಿ ಕ್ಷೇತ್ರ ಜೆಜೆಎಂ ಯೋಜನೆಯಲ್ಲಿ ಶೇ 100rರಷ್ಟು ಭ್ರಷ್ಟಾಚಾರ ಮಾಜಿ ಶಾಶಕ ಜೀವರಾಜ್‌ ಆರೋಪ | Speed News Kannada

Former ruler Jeevaraj alleges | ಶೃಂಗೇರಿ ಕ್ಷೇತ್ರ ಜೆಜೆಎಂ ಯೋಜನೆಯಲ್ಲಿ ಶೇ 100rರಷ್ಟು ಭ್ರಷ್ಟಾಚಾರ ಮಾಜಿ ಶಾಶಕ ಜೀವರಾಜ್‌ ಆರೋಪ | Speed News Kannada

ಬೆಂಗಳೂರು: ಶೃಂಗೇರಿ ಕ್ಷೇತ್ರದಲ್ಲಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಸಿಬಿಐ ತನಿಖೆ ನಡೆಸುವಂತೆ ಸರ್ಕಾರವನ್ನು ಮಾಜಿ ಸಚಿವ ಡಿ.ಎನ್.ಜೀವರಾಜ್ ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. 
ಶೃಂಗೇರಿ ಕ್ಷೇತ್ರದಲ್ಲಿ ಜೆಜೆಎಂ ಎಂಬುದು ಜಲಜೀವನ್ ಕಮಿಷನ್ ಆಗಿದೆ.150 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕೇಂದ್ರ ಸರಕಾರ ಕೊಟ್ಟಿದ್ದು, ಒಂದೇ ಒಂದು ಮನೆಗೆ ನೀರು ಲಭಿಸಿಲ್ಲ ಎಂದು ದೂರಿದರು.
ಜಿಲ್ಲಾ ಪಂಚಾಯಿತಿ ಜೊತೆ ಆದ ಒಪ್ಪಂದದ ಸ್ಟಾಂಪ್ ಪೇಪರನ್ನು ಪ್ರದರ್ಶಿಸಿದರು. ‘ಐಎನ್‍ಕೆಎ 76845429815984 ನಂಬರಿನಲ್ಲಿ 2024ರಲ್ಲಿ ಒಂದೇ ದಿನ ಒಂದೇ ಸಮಯಕ್ಕೆ ಸ್ಟಾಂಪ್ ಪೇಪರ್ ಪಡೆದಂತೆ ಕಾಣುತ್ತಿದ್ದು, ಎನ್.ಆರ್.ಪುರ, ಕೊಪ್ಪ ತಾಲ್ಲೂಕಿನಲ್ಲಿ 9 ಒಪ್ಪಂದಗಳು ಆಗಿವೆ. ಇನ್ನೊಂದು ಸಂಖ್ಯೆಯ ಸ್ಟಾಂಪ್ ಪೇಪರಿನಲ್ಲಿ ಬೋರ್‌ ವೆಲ್ ಕೊರೆಸಲು 11 ಒಪ್ಪಂದಗಳಾಗಿವೆ. ಇದು ಸರಕಾರದ ಜೊತೆಗಿನ ಒಪ್ಪಂದ. ಪ್ರಿಯಾಂಕ್ ಖರ್ಗೆಯವರ ಖಾತೆಯ ಕೆಳಗೆ ಬರುವ ಇಲಾಖೆ ಇದು ಎಂದು ವಿವರ ನೀಡಿದರು.
ನಾವು ಪಡೆದ 30 ಒಪ್ಪಂದಗಳಲ್ಲಿ ಇಷ್ಟು ಹಗರಣಗಳು ಪತ್ತೆಯಾಗಿದೆ. ಸ್ಟಾಂಪ್ ಪೇಪರ್ ನಕಲಿ ಆಗಿದೆ. ಸರಕಾರದ ಬೊಕ್ಕಸಕ್ಕೆ ಮೋಸ ಎನ್ನುವುದಕ್ಕಿಂತ ಇದು ಶೇ. 100ರಷ್ಟು ಕ್ರಿಮಿನಲ್ ಚಟುವಟಿಕೆ ಎಂದು ಆರೋಪಿಸಿದರು. ಇದರ ಹಿಂದೆ ಶೃಂಗೇರಿ ಶಾಸಕರ ಎಡ- ಬಲ- ಹಾರ್ಟ್ ಎಲ್ಲರೂ ಇದ್ದಾರೆ. ಇದರಲ್ಲಿ ಶಾಸಕರ ಕೃಪಾಶೀರ್ವಾದದೊಂದಿಗೆ ಇಂಥ ಘಟನೆ ನಡೆದಿದೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದು ದೂರಿದರು.
ಇನ್ನೊಂದು ಸ್ಟಾಂಪ್ ಪೇಪರ್ ಸ್ಕ್ಯಾನ್ ಮಾಡಿದರೆ ಇದು ಅಸಲಿ ಅಲ್ಲ ಎಂಬ ಅರ್ಥದ ಮಾಹಿತಿ ಬರುತ್ತಿದೆ. ಇದು ನಕಲಿಯೇ ಅಥವಾ ಅಸಲಿಯೇ ಎಂದು ತಿಳಿದಿಲ್ಲ ಎಂದು ಗಮನ ಸೆಳೆದರು. 
ಕೊರೆಸಿದ ಬೋರ್‌ ವೆಲ್ ಆಳದ ಕುರಿತು ತಿಳಿಯಲು ಮುಂದಾಗಿದ್ದೆ. ಸ್ವಂತ ಖರ್ಚಿನಲ್ಲಿ 10 ಕೊಳವೆಬಾವಿ ಪರಿಶೀಲಿಸಿದ್ದು, ಕೊಪ್ಪ ತಾಲ್ಲೂಕು ಕಡೇಗದ್ದೆ ತಳಮಕ್ಕಿಯಲ್ಲಿ 228 ಅಡಿಯ ಆಳವಿರುವ ಕೊಳವೆಬಾವಿಗೆ 587 ಅಡಿಗೆ ಬಿಲ್ ಮಾಡಿದ್ದಾರೆ. ಮತ್ತೊಂದರಲ್ಲಿ 260 ಅಡಿಯ ಕೊಳವೆಬಾವಿಗೆ 587 ಅಡಿಗೆ ಬಿಲ್ ಮಾಡಿದ್ದಾಗಿ ವಿವರಿಸಿದರು. ಇವುಗಳ ಹಣ ಪಾವತಿ ಆಗಿದೆ ಎಂದರು.
ಬಲಗಾರು ಗ್ರಾಮ ಪಂಚಾಯಿತಿಯಲ್ಲಿ 1.49 ಲಕ್ಷ ರೂ. ಬಿಲ್ ಆಗಿದೆ. ಆದರೆ ಬೋರ್‌ ವೆಲ್ ಇಲ್ಲ. ಗೌರಿಹಳ್ಳದಲ್ಲಿ ಬೋರ್‌ ವೆಲ್ ಇಲ್ಲ; 1.38 ಲಕ್ಷ ಬಿಲ್ ಮಾಡಿದ್ದಾರೆ ಎಂದು ವಿವರ ನೀಡಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.