2026-06-08 01:25:32

Everyone left but this actor was the only one left with Darshan | ಎಲ್ಲರೂ ಬಿಟ್ಟು ಹೋದರು ಆದ್ರೆ ದರ್ಶನ್‌ ಜೊತೆ ಉಳಿದಿದ್ದು ಈ ನಟ ಮಾತ್ರ | Speed News Kannada

Everyone left but this actor was the only one left with Darshan | ಎಲ್ಲರೂ ಬಿಟ್ಟು ಹೋದರು ಆದ್ರೆ ದರ್ಶನ್‌ ಜೊತೆ ಉಳಿದಿದ್ದು ಈ ನಟ ಮಾತ್ರ | Speed News Kannada

ಬೆಂಗಳೂರು: ನಟ ಧನ್ವೀರ್ ನಟನೆಗಿಂತಲೂ ಹೆಚ್ಚಾಗಿ ದರ್ಶನ್‌ ಜತೆ ಗುರುತಿಸಿಕೊಂಡಿದ್ದೇ ಹೆಚ್ಚು. ಕಡು ಕಷ್ಟದ ಕಾಲದಲ್ಲೂ ಧನ್ವೀರ್ ತನ್ನ ನೆಚ್ಚಿನ ಅಣ್ಣ ದರ್ಶನ್‌ ಅವರನ್ನು ಬಿಟ್ಟುಕೊಟ್ಟಿರಲಿಲ್ಲ.  
ದರ್ಶನ್‌ ಹುಟ್ಟುಹಬ್ಬದ ಅಂಗವಾಗಿ ಧನ್ವೀರ್‌ ನೆಚ್ಚನ ಅಣ್ಣನಿಗೆ ವಿಶೇಷವಾಗಿಯೇ ವಿಷ್‌  ಮಾಡಿದ್ದಾರೆ. ಯಾರು ಏನೇ ಹೇಳಿದರೂ ಅಷ್ಟೇ, ನಾವು ನಿಮ್ಮ ಹಿಂದೆ ಕೊನೆ ಉಸಿರಿರುವವರೆಗೂ ಇರುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಬರ್ತ್ ಡೇ ಸೆಲೆಬ್ರೇಷನ್ ಮಾಡಿರೋ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ ಎಂದೂ ಬರೆದುಕೊಂಡಿದ್ದಾರೆ. 
ದರ್ಶನ್ ಜೊತೆಗಿದ್ದವರೆಲ್ಲಾ ಬಿಟ್ಟು ಹೋದರು. ಆಪ್ತರು ಅನಿಸಿಕೊಂಡವರು ದೂರವೇ ಉಳಿದಿದ್ದಾರೆ. ಇದಕ್ಕೆ ಕಾರಣ ಏನು ಅನ್ನೋದು ಬಹುಶಃ ದರ್ಶನ್ ಅವರಿಗೆ ಮಾತ್ರ ಗೊತ್ತಿದೆ ಎಂದೂ ಹೇಳಿದ್ದಾರೆ.
ದರ್ಶನ್ ಜೊತೆಗೆ ಬೇರೆ ಯಾರೇ ಇಲ್ಲ ಅಂದ್ರೂ ಧನ್ವೀರ್ ಇದ್ದೇ ಇರುತ್ಥಾರೆ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಜೈಲಿಗೆ ಹೋದಾಗಿನಿಂದಲೂ ದರ್ಶನ್ ಜೊತೆಗೆ ಇದ್ದಾರೆ. ಅದಕ್ಕೂ ಮೊದಲೂ ಇದ್ದರು. ಈಗಲೂ ಧನ್ವೀರ್ ಮಾತ್ರ ಇರೋದು. ಈ ಹಿಂದೆ ಜಾಮೀನು ಪಡೆಯಲು ದರ್ಶನ್‌ಗೆ ಶ್ಯೂರಿಟಿ ಕೊಟ್ಟಿದು ಧನ್ವೀರ್.  ಕಷ್ಟದ ದಿನಗಳಲ್ಲಿ ಜೊತೆಗೆ ಇರಬೇಕು ಅನ್ನೋದನ್ನು ಧನ್ವೀರ್ ನಂಬಿದ್ದಾರೆ. ಇದರಿಂದ  ಧನ್ವೀರ್ ಹಾಗೂ ದರ್ಶನ್ ಆತ್ಮೀಯತೆ ಗಟ್ಟಿಯಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.