2026-03-07 08:35:11

Drunk driving | ಕೃಷ್ಣಗಿರಿ ಮದ್ಯದ ಅಮಲಿನಲ್ಲಿ ಕಾರುಚಾಲನೆ ಓರ್ವನ ಸಾವಿಗೆ ಕಾರಣನಾದ ಡಿಎಂಕೆ ನಾಯಕನ ಪುತ್ರ | Speed News Kannada

Drunk driving | ಕೃಷ್ಣಗಿರಿ ಮದ್ಯದ ಅಮಲಿನಲ್ಲಿ ಕಾರುಚಾಲನೆ ಓರ್ವನ ಸಾವಿಗೆ ಕಾರಣನಾದ ಡಿಎಂಕೆ ನಾಯಕನ ಪುತ್ರ | Speed News Kannada

ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಆಡಳಿತಾರೂಢ ಡಿಎಂಕೆ ಮುಖಂಡನ ಪುತ್ರನೊಬ್ಬ ಕುಡಿದು ಕಾರು ಚಲಾಯಿಸಿ ದಾಂಧಲೆ ಎಬ್ಬಿಸಿ ಓರ್ವ ಸಹಾಯಕ ಕಾರ್ಮಿಕ ನಿರೀಕ್ಷಕರ ಸಾವಿಗೆ ಕಾರಣನಾಗಿದ್ದಾನೆ. 
ಡಿಎಂಕೆ ನಾಯಕನ ಪುತ್ರ ಆದಿತ್ಯ ತನ್ನ ಇಬ್ಬರು ಸ್ನೇಹಿತರೊಂದಿಗೆ ಈ ದುರಂತಕ್ಕೆ ಕಾರಣನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಿತ್ಯ ಮತ್ತು ಆತನ ಸ್ನೇಹಿತರಾದ ರಿತಿಕ್ ಕುಮಾರ್ ಮತ್ತು ಹರೀಶ್ ಅವರನ್ನು ಬಂಧಿಸಲಾಗಿದೆ.
ಕೃಷ್ಣಗಿರಿ ಜಿಲ್ಲೆಯ ಸಹಾಯಕ ಕಾರ್ಮಿಕ ನಿರೀಕ್ಷಕ ಶಿವಮೂರ್ತಿ ಮೃತ ದುರ್ದೈವಿ.
ಎಂದು ಗುರುತಿಸಲಾಗಿದ್ದು, ಡಿಎಂಕೆ ನಾಯಕನ ಪುತ್ರ ಆದಿತ್ಯ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಡಿಎಂಕೆ ನಾಯಕನ ಪುತ್ರನ ಕಾರು ಡಿಕ್ಕಿ: ಓರ್ವ ಬಲಿ
ಶಿವಮೂರ್ತಿ ತಮ್ಮ  ಮನೆಯ ಹೊರಗೆ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಆದಿತ್ಯ ಕಾರು ಚಲಾಯಿಸುತ್ತಾ ಬಂದು ದಾರಿಗಾಗಿ ಹಾರ್ನ್ ಮಾಡಿದ್ದಾನೆ. ಆಗ ಶಿವಮೂರ್ತಿ ಅವರ ಜತೆ ಜಗಳ ಆರಂಭಿಸಿದ್ದಾನೆ. ಇದರಿಂದ ಕೆರಳಿದ ಆದಿತ್ಯ ಕಾರನ್ನು ಶಿವಮೂರ್ತಿ ಅವರಿಗೆ ಡಿಕ್ಕಿ ಹೊಡೆಸಿದ್ದಾನೆ. ಆಗ ಅವರು ಅಸು ನೀಗಿದ್ದಾರೆ. ಅವರ ಪುತ್ರ ಕಿರುಬಾಕರನ್, ಸೊಸೆ ಅಂಶವಲ್ಲಿ ಮತ್ತು ಮೊಮ್ಮಗಳು ನಿಲಾನಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದಿತ್ಯನ ತಂದೆ ಕೃಷ್ಣಗಿರಿ ಜಿಲ್ಲೆಯ ಡಿಎಂಕೆ ನಾಯಕರಾಗಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.