ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ, ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಎರಡು ಡೋನ್ ಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಈ ವೇಳೆ ಸಂಭವಿಸಿದ ಘಟನೆದಲ್ಲಿ ಭಾರತೀಯ ನಾಗರಿಕ ಸೇರಿ ನಾಲ್ವರು ಗಾಯಗೊಂಡಿದ್ದಾರೆ ಎಂದು ದುಬೈ ಮಾಧ್ಯಮ ಕಚೇರಿ ಮಾಹಿತಿ ನೀಡಿದೆ. ದಾಳಿಯಲ್ಲಿ 'ಇಬ್ಬರು ಘಾನಾ ಪ್ರಜೆಗಳು ಮತ್ತು ಒಬ್ಬ ಬಾಂಗ್ಲಾದೇಶಿ ಪ್ರಜೆಗೆ ಸಣ್ಣಪುಟ್ಟ ಗಾಯಗಳಾಗಿವೆ ಮತ್ತು ಒಬ್ಬ ಭಾರತೀಯ ಪ್ರಜೆಗೆ ಗಂಭೀರ ಗಾಯಗಳಾಗಿವೆ' ಎಂದು ಕಚೇರಿ ತಿಳಿಸಿದೆ. ಡೋನ್‌ಗಳನ್ನು ತಡೆದ ನಂತರ ಕೂಡ ವಿಮಾನ ಸಂಚಾರ ಸಾಮಾನ್ಯವಾಗಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ತನ್ನ ಭೂಭಾಗದ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರನ್, ಕತಾರ್ ಸೇರಿದಂತೆ ಹಲವು ಗಲ್ಸ್ ದೇಶಗಳ ಮೇಲೆ ಕ್ಷಿಪಣಿ ಹಾಗೂ ಡೋನ್ ದಾಳಿಗಳನ್ನು ನಡೆಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ಹಲವು ಪ್ರದೇಶಗಳಲ್ಲಿ ಮೂಲಸೌಕರ್ಯಕ್ಕೆ ಹಾನಿ ಉಂಟಾಗಿ, ತೈಲ ಉತ್ಪಾದನೆಗೂ ವ್ಯತ್ಯಯ ಉಂಟಾಗಿದೆ.
ವಿಶ್ವದ ದೊಡ್ಡ ತೈಲ ಶುದ್ದೀಕರಣ ಘಟಕ ಬಂದ್!
ಡೋನ್ ದಾಳಿಯ ಹಿನ್ನೆಲೆಯಲ್ಲಿ ಯುಎಇಯಲ್ಲಿರುವ ವಿಶ್ವದ ಅತಿದೊಡ್ಡ ತೈಲ ಶುದ್ದೀಕರಣ ಘಟಕಗಳಲ್ಲಿ ಒಂದನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಬುಧಾಬಿ ಎಮಿರೇಟ್‌ನ ರುವೈಸ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ಡೋನ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿತ್ತು. ಈ ಕಾರಣದಿಂದ ರುವೈಸ್ ತೈಲ ಶುದ್ದೀಕರಣ ಘಟಕದಲ್ಲಿ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟಕವನ್ನು ವಿಶ್ವದ ನಾಲ್ಕನೇ ಅತಿದೊಡ್ಡ ಏಕೈಕ ತೈಲ ಶುದ್ದೀಕರಣ ಕೇಂದ್ರವೆಂದು ಹೇಳಲಾಗುತ್ತದೆ.
ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಮಧ್ಯಪೂರ್ವದ ಸಂಘರ್ಷ ಮುಂದುವರಿದರೆ ಜಾಗತಿಕ ತೈಲ ಪೂರೈಕೆಗೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಸೌದಿ ಅರೇಬಿಯಾದ ತೈಲ ಕಂಪನಿಯು ಎಚ್ಚರಿಕೆ ನೀಡಿದೆ. ಅಗತ್ಯ ವಸ್ತುಗಳ ಆರು ತಿಂಗಳ ಸಂಗ್ರಹ ಇನ್ನೊಂದೆಡೆ ಯುಎಇ ಸರ್ಕಾರ ದೇಶದಲ್ಲಿ ಅಗತ್ಯ ವಸ್ತುಗಳ ಆರು ತಿಂಗಳ ತಂತ್ರಾತ್ಮಕ ಸಂಗ್ರಹವಿದೆ ಎಂದು ತಿಳಿಸಿದೆ. ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳಲು ವ್ಯಾಪಾರ ಕೇಂದ್ರಗಳ ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗಿದೆ. ಬೆಲೆ ಏರಿಕೆ ಕಂಡ ಕೆಲವು ವಸ್ತುಗಳನ್ನು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆ ಮಾಡಲಾಗಿದ್ದು, ಜನರಿಗೆ ಅಗತ್ಯ ವಸ್ತುಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.