2026-06-08 01:20:43

ಡಿಕೆಶಿ ಸಿಎಂ: ಡಿಸಿಎಂನಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷ ಸ್ಥಾನದವರೆಗೆ ಭರ್ತಿ ಮಾಡಬೇಕಾದ ಹುದ್ದೆಗಳು:| Speed News Kannada

ಡಿಕೆಶಿ ಸಿಎಂ: ಡಿಸಿಎಂನಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷ ಸ್ಥಾನದವರೆಗೆ ಭರ್ತಿ ಮಾಡಬೇಕಾದ ಹುದ್ದೆಗಳು:| Speed News Kannada

ಬೆಂಗಳೂರು; ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ ಉಪಮುಖ್ಯಮಂತ್ರಿ ಹುದ್ದೆಯಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷ ಸ್ಥಾನದವರೆಗೆ ಹಲವು ಹುದ್ದೆಗಳು ತೆರವಾಗಲಿವೆ. ಈ ಎಲ್ಲ ಸ್ಥಾನಗಳಿಗೆ ಜಿಲ್ಲೆ, ಪ್ರಾಂತ, ಮತ್ತು ಜಾತಿ ಆಧಾರದಲ್ಲಿ ಭರ್ತಿ ಮಾಡುವ ಹೊಣೆಗಾರಿಕೆ ಹೈಕಮಾಂಡ್‌ ಜವಬ್ದಾರಿಯಾಗಿದೆ.

 

ಉಪಮುಖ್ಯಮಂತ್ರಿ ಹುದ್ದೆಗಳು:

ಡಿಕೆ ಶಿವಕುಮಾರ್‌ ಸಿಎಂ ಆದರೆ ಉಪ ಮುಖ್ಯಮಂತ್ರಿ ಹುದ್ದೆ ಖಾಲಿಯಾಗುತ್ತದೆ. ಜಾತಿ ಆಧಾರದಲ್ಲಿ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಆದರೆ ಶಿವಕುಮಾರ್‌ ಅವರಿಗೆ ಈ ಹುದ್ದೆಗಳನ್ನು ಸೃಷ್ಡಿ ಮಾಡುವುದರಲ್ಲಿ ಆಸಕ್ತಿ ಇಲ್ಲ. ಜಾತಿ ಆಧಾರದಲ್ಲಿ ನೋಡುವುದಾದರೆ ದಲಿತ, ವೀರಶೈವ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಓಲೈಸಲು ಈ ಸಮುದಾಯಗಳಿಗೆ ಡಿಸಿಎಂ ಹುದ್ದೆ ನೀಡಲು ಚಿಂತನೆ ನಡೆದಿದೆ.

ಗೃಹ ಸಚಿವ ದಲಿತ ಮುಖಂಡ, ಡಾ.ಜಿ ಪರಮೇಶ್ವರ್‌, ವೀರಶೈವ ಲಿಂಗಾಯತ ಮುಖಂಡ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅಥವಾ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅಲ್ಪ ಸಂಖ್ಯಾತ ಸಮುದಾಯದ ಜಮೀರ್‌ ಅಹಮದ್‌ ಖಾನ್‌ ಅವರನ್ನು ನೇಮಿಸಲು ಸಿದ್ದರಾಮಯ್ಯ ಅವರೂ ಆಸಕ್ತಿ ತೋರಿದ್ದಾರೆ.

ಶಿವಕುಮಾರ್‌ ಅವರು ಹಳೇ ಮೈಸೂರು ಭಾಗಕ್ಕೆ ಸೇರಿದವರಾಗಿದ್ದು, ಉಳಿದ ಭಾಗಗಳಿಗೆ ನ್ಯಾಯ ಕೊಡಬೇಕಿದೆ.

 

ಕೆಪಿಸಿಸಿ ಅಧ್ಯಕ್ಷ ಸ್ಥಾನ:

ಕೆಪಿಸಿಸಿ ಅಧ್ಯಕ್ಷ ಸ್ಥಾನ:ಡಿಕೆ ಶಿವಕುಮಾರ್‌ ಅವರೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಆ ಸ್ಥಾನವೂ ಖಾಲಿ ಆಗಲಿದೆ. ಈ ಹುದ್ದೆಗೆ ಹಲವು ಮುಖಂಡರು ಆಕಾಂಕ್ಷಿಗಳಿದ್ದಾರೆ. ಪ್ರಮುಖವಾಗಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಆಸಕ್ತಿ ತೋರಿದ್ದಾರೆ.

ಆದರೆ ಹೈಕಮಾಂಡ್‌ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಇಬ್ಬರಿಗೂ ಸಮ್ಮತಿಯಾಗುವ, ಸಂಘಟನಾ ಸಾಮರ್ಥ್ಯ ಹೊಂದಿರುವ ಮುಖಕ್ಕೆ ಮಣೆ ಹಾಕುವ ಸಾಧ್ಯತೆಗಳಿವೆ.

 

ಸಚಿವ ಸಂಪುಟ ವಿಸ್ತರಣೆ:

ಸಹಜವಾಗಿಯೇ ಸಚಿವ ಸಂಪುಟ ವಿಸ್ತರಣೆಯೂ ಆಗಲಿದೆ. ಯಾರನ್ನು ಕೈ ಬಿಡಲಾಗುತ್ತದೆ ಯಾರನ್ನು ಸೇರ್ಪಡೆ ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲವಾದರೂ ಕನಿಷ್ಠ 40ಕ್ಕೂ ಹೆಚ್ಚು ಶಾಸಕರು ಪ್ರಬಲ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಹಲವು ಬಾರಿ ಗೆದ್ದಿರುವ ಶಾಸಕರೂ ಇದ್ದಾರೆ. ಸಿದ್ದರಾಮಯ್ಯ ಬಣ ಮೈಲುಗೈ ಆದರೂ ಆಗಬಹುದು. ಅವರು ತಮ್ಮ ಅನುಯಾಯಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬಹುದು. ಕೆಲವು ಸಚಿವರಿಗೆ ಮಹತ್ವದ ಖಾತೆಗಳೂ ದೊರೆಯಬಹುದು.

Share:


Tags:

cm dcm kpcc

Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.