ಬೆಂಗಳೂರು: ಇಂದು ಸಂಜೆ 4.05ಕ್ಕೆ ಡಿಕೆ ಶಿವಕುಮಾರ್ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಎಐಸಿಸಿ ವರಿಷ್ಠರ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ಮುಖ್ಯಮಂತ್ರಿ ವಿಡಿ ಸತೀಶನ್ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಗವಹಿಸಲಿದ್ದಾರೆ.
ಇವರಲ್ಲದೆ ಪೌರ, ಕೂಲಿ ಕಾರ್ಮಿಕರು ಹಾಗೂ ರೈತ ಮುಖಂಡರನ್ನು ಆಹ್ವಾನಿಸಿರುವುದು ಮತ್ತೊಂದು ವಿಶೇಷ. ಕೆಸಿ ವೇಣುಗೋಪಾಲ್, ರಣ್ ದೀಪ್ ಸುರ್ಜೇವಾಲ, ಸರ್ವಧರ್ಮ ಗುರುಗಳು, ಡಿಎಕ ಶಿವಕುಮಾರ್ ಅವರ ಊರಿನ ಮುಖಂಡರು ಶಾಲಾ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ, ದಲಿತ ಸಂಘಟನೆಗಳ ಮುಖಂಡರು, ಹಿಂದುಳಿದ ವರ್ಗಗಳ ಪ್ರಮುಖರು, ಸ್ತ್ರೀಶಕ್ತಿ ಸಂಘದ ನಾಯಕಿಯರು, ಮಹಿಳಾ ಮುಖಂಡರು, ಸಿನಿಮಾ, ಕ್ರೀಡೆ, ನ್ಯಾಯಾಂಗ, ಕೈಗಾರಿಕೋದ್ಯಮಿಗಳು, ಹೋಟೆಲ್ ಉದ್ಯಮಿಗಳು, ನಾಟಕ, ಸಾಹಿತಿಗಳು ಕಲಾವಿದರಿಗೂ ಆಹ್ವಾನ ನೀಡಲಾಗಿದೆ.
ಸಿಹಿ ವಿತರಣೆ:
ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುವ ಐತಿಹಾಸಿಕ ಕ್ಷಣವನ್ನು ನೆನಪಿನಲ್ಲುಳಿಯುವಂತೆ ಮಾಡಲು ನೆಲಮಂಗಲ ಶಾಸಕ ಶ್ರೀನಿವಾಸ್ ಅವರು ಕ್ಷೇತ್ರದ 85,000 ರಿಂದ 90,000 ಮನೆಗಳಿಗೆ ತಲಾ ಒಂದು ಸ್ವೀಟ್ ಬಾಕ್ಸ್ ವಿತರಿಸಲಿದ್ದಾರೆ.