2026-06-01 11:22:01

ಆರ್‌ ಸಿಬಿ ಅಭಿನಂದಿಸಿದ ಡಿಕೆ ಶಿವಕುಮಾರ್‌, ಸಿದ್ದರಾಮಯ್ಯ, ಕುಮಾರಸ್ವಾಮಿ |Speed News Kannada

ಆರ್‌ ಸಿಬಿ ಅಭಿನಂದಿಸಿದ ಡಿಕೆ ಶಿವಕುಮಾರ್‌, ಸಿದ್ದರಾಮಯ್ಯ, ಕುಮಾರಸ್ವಾಮಿ |Speed News Kannada

ಬೆಂಗಳೂರು:  ಆರ್‌ಸಿಬಿ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿರುವುದಕ್ಕೆ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಆರ್‌ಸಿಬಿ ಆಟಗಾರರನ್ನು ಅಭಿನಂದಿಸಿದ್ದಾರೆ.

ಡಿಕೆ ಶಿವಕುಮಾರ್‌ ಅವರು ಟ್ವೀಟ್‌ ಮೂಲಕ ಅಭಿನಂದಿಸಿ ಎರಡನೇ ಬಾರಿಗೆ ಆರ್‌ ಸಿಬಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ನಮ್ಮ ಆಟಗಾರರು ಬೆಂಗಳೂರಿಗೆ ಗೌರವ ತಂದುಕೊಟ್ಟಿದ್ದಾರೆ. ಎಲ್ಲ ಆಟಗಾರರು, ಕೋಚ್‌ ಗಳು, ಇಡೀ ತಂಡ ಮತ್ತು ಆರ್‌ ಸಿಬಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಸಿದ್ದರಾಮಯ್ಯ ಅವರು ತಮ್ಮ ಟ್ವೀಟ್‌ ನಲ್ಲಿ  ಪಂದ್ಯಾವಳಿಯುದ್ದಕ್ಕೂ ಆರ್‌ಸಿಬಿ ಹುಡುಗರು ತೋರಿದ ಕೆಚ್ಚೆದೆಯ ಆಟಕ್ಕೆ ಎದುರಾಳಿ ತಂಡಗಳ ಬಳಿ ಉತ್ತರವೇ ಇಲ್ಲವೇನೋ‌ ಎಂಬಂತಿತ್ತು. ಸತತ ಎರಡನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡಿರುವ ನಮ್ಮ ಆರ್‌ಸಿಬಿ‌ಗೆ ಅಭಿನಂದನೆಗಳು.

ಇಂದಿನ ಫೈನಲ್ ಪಂದ್ಯದಲ್ಲಿ ರಸಿಕ್ ಧಾರ್, ಭುವನೇಶ್ವರ್ ಕುಮಾರ್, ವಿರಾಟ್ ಕೋಹ್ಲಿಯ ಆಟ ಬಹುಕಾಲ ನೆನಪಲ್ಲಿ ಉಳಿಯುವಂತದ್ದು. ಸಂಘಟಿತ ಹೋರಾಟಕ್ಕೆ ದೊರೆತ ಈ ಗೆಲುವು ಆರ್‌ಸಿಬಿ ಅಭಿಮಾನಿಗಳೆಲ್ಲರ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ ಎಂದಿದ್ದಾರೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೂ ಆರ್‌ ಸಿಬಿ ಆಟಗಾರರನ್ನು ಅಭಿನಂದಿಸಿದ್ದಾರೆ.

Share:


Tags:

ipl rcb

Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.