2026-05-27 12:10:46

ಡಿ.ಕೆ.ಶಿವಕುಮಾರ್ ಗೆ ಸಿಎಂ ಆಗುವ ಯೋಗ ಇಲ್ಲ: ವಿಪಕ್ಷ ನಾಯಕ ಆರ್. ಅಶೋಕ್| Speed News Kannada

  ಡಿ.ಕೆ.ಶಿವಕುಮಾರ್ ಗೆ ಸಿಎಂ ಆಗುವ ಯೋಗ ಇಲ್ಲ: ವಿಪಕ್ಷ ನಾಯಕ  ಆರ್. ಅಶೋಕ್| Speed News Kannada

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ಹೇಳಿದ್ದೇನೆ. ಆದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂದು ಎಲ್ಲೂ ಹೇಳಿಲ್ಲ. ಅವರಿಗೆ ಸಿಎಂ ಆಗುವ ಯೋಗ ಇದ್ದಂತಿಲ್ಲ ಎಂದರು.

ಹೈಕಮಾಂಡ್‌ ಎಲ್ಲರನ್ನೂ ಕರೆದೊಯ್ದು ಒಂದೊಂದು ರೂಂನಲ್ಲಿ ಕೂಡಿ ಹಾಕಿದ್ದಾರೆ. ಒಬ್ಬರನ್ನೊಬ್ಬರು ಭೇಟಿಯಾಗಲು ಅವಕಾಶವೇ ಕೊಟ್ಟಿಲ್ಲ. ಸಿಎಂ, ಡಿಸಿಎಂ ಒಬ್ಬರ ಮುಖ ಒಬ್ಬರು ನೋಡದಂತೆ ಕೂಡಿ ಹಾಕಿದ್ದಾರೆ. ಯಾರು ಬರಿ ಕೈಲಿ ಬರ್ತಾರೆ ನೋಡೋಣ ಎಂದರು.

ಡಿ.ಕೆ.ಶಿವಕುಮಾರ್ ಗೆ ನೂರಕ್ಕೆ ನೂರರಷ್ಟು ಖಾಲಿ ತಟ್ಟೆ ಸಿಗಲಿದೆ. ಅವರಿಗೆ ಭವಿಷ್ಯ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್ ಕರೆದಿರುವುದು ಸಿದ್ದರಾಮಯ್ಯ ಒಬ್ಬರನ್ನೇ. ಆದರೆ ಶಕ್ತಿ ತೋರಿಸಲು ಸಚಿವರನ್ನು ಕರೆದುಕೊಂಡು ಹೋಗಿದ್ದಾರೆ. ಜೆಡಿಎಸ್ ನಲ್ಲಿ ಇದ್ದಾಗ ಹೇಗೆ ರಾಜಕಾರಣ ಮಾಡಿದ್ದಾರೋ,ಕಾಂಗ್ರೆಸ್ ನಲ್ಲೂ ಸಿದ್ದರಾಮಯ್ಯ ಅದೇ ರಾಜಕಾರಣ ಮಾಡುತ್ತಿದ್ದಾರೆ. ಡಿಕೆ ಸಿವಕುಮಾರ್‌ ಅವರನ್ನು ಯಾವ ಬೋನ್ ಗೆ ಹಾಕಬೇಕೆಂದು ಅವರಿಗೆ ಗೊತ್ತಿದೆ ಎಂದರು.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.