ಬೆಂಗಳೂರು: ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ ಶಿವಕುಮಾರ್ ಅವರ ಕೊಠಡಿಯನ್ನು ವಾಸ್ತು ಪ್ರಕಾರ ಸಿದ್ಧಪಡಿಸಲಾಗಿದೆ. ಖ್ಯಾತ ಜ್ಯೋತಿಷಿಗಳು ಭೇಟಿ ನೀಡಿ ವಾಸ್ತು ಪರಿಶೀಲಿಸಿದ್ದಾರೆ. ಶಿವಕುಮಾರ್ ಕುಳಿತುಕೊಳ್ಳಲಿರುವ ಕುರ್ಚಿಯ ದಿಕ್ಕನ್ನು ಬದಲಿಸಲಾಗಿದೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಅಜ್ಜಯ್ಯನ ಚಿತ್ರ ಅಳವಡಿಸಲಾಗಿರುವುದು ಮತ್ತೊಂದು ವಿಶೇಷ.
ಮೊದಲಿನಿಂದಲೂ ಶಿವಕುಮಾರ್ ಅವರು ಅಜ್ಜಯ್ಯನನ್ನು ಪ್ರಬಲವಾಗಿ ನಂಬುತ್ತಾ ಬಂದಿದ್ದಾರೆ. ನಾನು ರಾಜನಾಗುವೆ ಎಂದು ನೊಣವಿನಕೆರೆ ಅಜ್ಜಯ್ಯ ಬಹಳ ಹಿಂದೆಯೇ ಹೇಳಿದ್ದರು. ಹಾಗಾಗಿ ಅಜ್ಜಯ್ಯನ ಅನುಗ್ರಹದಿಂದ ನಾನು ಮುಖ್ಯಮಂತ್ರಿ ಆಗುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದ್ದರು.