ರಾಮನಗರ: ಅದಷ್ಟೂ ಬೇಗ ಎಲ್ಲವೂ ಒಳ್ಳೆಯದೇ ಆಗುತ್ತದೆ, ಸಿಹಿ ಸುದ್ದಿ ಬರಲಿದೆ. ಸ್ವಲ್ಪ ದಿನ ಕಾಯಬೇಕು ಅಷ್ಟೇ ಎಂದು ರಾಮನಗರ ಶಾಸಕ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಅವರು ನಾಯಕತ್ವ ಬದಲಾವಣೆ ಕುರಿತ ವಿಚಾರವಾಗಿ ಮಾತನಾಡಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶೀಘ್ರ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮುನ್ಸೂಚನೆ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ವಿರುದ್ಧ ಕೀಟಕೆಗಳನ್ನು ಮಾಡಿರುವ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರುದ್ಧ ಇಕ್ಬಾಲ್ ಹುಸೇನ್ ಕಿಡಿಕಾರಿದ್ದಾರೆ. ರಾಜಕೀಯದಲ್ಲಿ ಮಾತನಾಡುವಾಗ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಮುಖ್ಯ. ನಿಖಿಲ್ ಇನ್ನೂ ರಾಜಕೀಯವಾಗಿ ಹೆಚ್ಚಿನ ಅನುಭವ ಹೊಂದಿಲ್ಲ. ವಯಸ್ಸಿಗೆ ತಕ್ಕ ಹಾಗೆ ಮಾತನಾಡುವುದು ಒಳ್ಳೆಯದು ಎಂದು ಕಿವಿಮಾತು ಹೇಳಿದ್ದಾರೆ.
ಯುವಕರಿಗೆ ರಾಜಕೀಯದಲ್ಲಿ ಬೆಳೆಯಲು ಅವಕಾಶಗಳಿವೆ. ಆದರೆ ಮಾತುಗಳ ಮೇಲೆ ನಿಯಂತ್ರಣ ಇರಬೇಕು. ಯಾರು ಹರಿದಿದ್ದಾರೋ, ಯಾರು ಹರಿಸಿಕೊಳ್ತಾ ಇದ್ದಾರೋ ಗೊತ್ತಿಲ್ಲ ಎಂಬ ಮಾತುಗಳನ್ನಾಡಿದರೆ ನಿಖಿಲ್ ಬಗ್ಗೆ ಎಂತಹ ಭಾವನೆ ಬರುತ್ತದೆ ಎಂದರು.
ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಬ್ಬರೂ ಒಂದೇ ತಲೆಮಾರಿನ, ಒಂದೇ ವಯಸ್ಸಿನ ನಾಯಕರು. ಇಂತಹ ಹಿರಿಯ ನಾಯಕರ ಬಗ್ಗೆ ಮಾತನಾಡುವಾಗ ಕಿರಿಯರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ. ರಾಜಕೀಯದಲ್ಲಿ ಸ್ಥಾನ, ಅಧಿಕಾರ ತಾತ್ಕಾಲಿಕ, ಆದರೆ ಮಾತುಗಳ ಪರಿಣಾಮ ದೀರ್ಘಕಾಲ ಉಳಿಯುತ್ತದೆ ಎಂದು ಹೇಳಿದ್ದಾರೆ.