2026-06-08 05:51:32

Difficulty before art is secondary Little Champs Selection Secret|ಕಲೆಯ ಮುಂದೆ ಕಷ್ಟ ಗೌಣ ಲಿಟಲ್ ಚಾಂಪ್ಸ್ ಸೆಲೆಕ್ಷನ್ ಸೀಕ್ರೆಟ್|Speed News Kannada

Difficulty before art is secondary Little Champs Selection Secret|ಕಲೆಯ ಮುಂದೆ ಕಷ್ಟ ಗೌಣ ಲಿಟಲ್ ಚಾಂಪ್ಸ್ ಸೆಲೆಕ್ಷನ್ ಸೀಕ್ರೆಟ್|Speed News Kannada

ಈ ಸಲದ ಸರಿಗಮಪ ಲಿಟಲ್ ಚಾಂಪ್ಸ್ ಬೇರೇನೆ ಇದೆ. ಹೌದು ರಾಜೇಶ್ ಕೃಷ್ಣನ್ ಪ್ರೋಮೋ ಬಹಳ ಚೆನ್ನಾಗಿದೆ. ಹಳ್ಳಿ ಹೈದನ ರೂಪದಲ್ಲಿ ಕಾಣಿಸುತ್ತಿದ್ದಾರೆ. ಪ್ರತಿಭಾನ್ವಿತ ಗಾಯಕರನ್ನ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಹುಡುಕಾಟದಲ್ಲಿ ಜನರಲ್ಲಿರೋ ಪ್ರಶ್ನೆಗಳಿಗೆ  ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಲಿಟಲ್ ಚಾಂಪ್ಸ್ ಈ ಸಲ ಸುಮ್ನೆ ಅಲ್ಲ. ಇದು ಸುನಾಮಿನೇ ಅಂತ ಹೇಳಿದ್ದಾರೆ. ಅತಿ ಶೀಘ್ರದಲ್ಲಿ ಈ ಲಿಟಲ್ ಚಾಂಪ್ಸ್ ಬರ್ತಿದೆ. ಜೀ ಕನ್ನಡ ಈ ಸಂಗೀತ ಕಾರ್ಯಕ್ರಮದ ಆಯ್ಕೆ ಬಗ್ಗೆ ಸುಮಾರು ಕಾಮೆಂಟ್‌ಗಳು ಇದೆ. ಕಷ್ಟ ಇದ್ದವರನ್ನೆ ಹುಡುಕಿ ಆಯ್ಕೆ ಮಾಡುತ್ತಾ ಇದ್ದರೆ ಎನ್ನುವ ಮಾತು ಇದೆ. ರಾಜೇಶ್ ಕೃಷ್ಣನ್ ಅವರು ಈ ಒಂದು ಕಾರ್ಯಕ್ರಮಕ್ಕಾಗಿಯೇ ಹಳ್ಳಿ ಹೈದನ ರೀತಿ ಗೆಟಪ್‌ ಹಾಕಿದ್ದಾರೆ. ಹಳ್ಳಿಯೊಂದರ ಮರದ ಮೇಲೆ ಕುಳಿತು ದೂರ್ಬಿನಿ ಹಾಕಿ ಹುಡುಕುತ್ತಿದ್ದಾರೆ ಇರೋ ಪ್ರೋಮೋ ಹಾಕಿದ್ದಾರೆ. ಸಂಗೀತ ಹೇಳಿಕೊಡು ಮೇಷ್ಟ್ರು, ಶಾಲೆಯಲ್ಲಿ ಪ್ರೇಯರ್ ಹೇಳ್ತಿರೋ ಹುಡುಗಿ ಹೀಗೆ ಎಲ್ಲರನ್ನು ಗಮನಿಸುತ್ತಾರೆ. ಆದರೆ, ಕೊನೆಯಲ್ಲಿ ತರಕಾರಿ ಮಾರೋ ಹುಡುಗನನ್ನ ಹುಡುಕಿ ಸೆಲೆಕ್ಟೆಡ್ ಅಂತಾರೆ.

ಆದರೆ, ಕೊನೆಯಲ್ಲಿ ಟ್ವಿಸ್ಟ್ ಕೂಡ ಕೋದುತ್ತರೆ. ಎಲ್ಲರ ಪ್ರೋಮೋ ಮಜವಾಗಿರುತ್ತೆ ಕೆಲವು ಹುಡುಗರ ಆಡಿಷನ್ ಮಾಡ್ತಾರೆ. ತುಂಬಾನೆ ಕಷ್ಟ ಇರೋ ಹುಡುಗನನ್ನೆಆಯ್ಕೆ ಮಾಡ್ತಾ ಇದ್ದರೆ. ಆದರೆ, ಇವರೂ ಕೊನೆಯಲ್ಲಿ ಟ್ವಿಸ್ಟ್ ಕೊಡ್ತಾರೆ. ಅದೇನು ಗೊತ್ತಾ? ನಾವು ಈ ರೀತಿ ಹುಡುಗರನ್ನ ಸೆಲೆಕ್ಟ್ ಮಾಡೋದಿಲ್ಲ. ಪ್ರತಿಭಾವಂತರಿಗೇನೆ ಈ ವೇದಿಕೆ ಅವಕಾಶ ಅನ್ನೋದನ್ನು ಗಾಯಕ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ವಿಶೇಷವಾಗಿಯೇ ಹೇಳಿದ್ದಾರೆ. ಅರ್ಜುನ್ ಜನ್ಯ ಈ ಒಂದು ಪ್ರೋಮೋಗಾಗಿಯೇ ಡಾಕ್ಟರ್ ವೇಷ ಆಕಿದ್ದಾರೆ. ಆಸ್ಪತ್ರೆಗೆ ಹೋಗಿ ಅಲ್ಲಿ ಯಾರಿಗೆಲ್ಲ ಏನೇನು ತೊಂದರೆ ಇದೆ ಅಂತ ಚೆಕ್ ಮಾಡುತ್ತಾರೆ. ಕೊನೆಯಲ್ಲಿ ಮಾತೇ ಬರದ ಹುಡುಗಿಯನ್ನ ಹಾಡಲು ಹೇಳುತ್ತಾರೆ ನಂತರ ಆ ಹುಡುಗಿಯನ್ನ ಸೆಲೆಕ್ಟ್ ಮಾಡ್ತಾರೆ. ಮತ್ತೆ ಎಂಡ್ ನಲ್ಲಿ ಇವರೂ ಒಂದು ಟ್ವಿಸ್ಟ್ ಕೊಡ್ತಾರೆ. ನಾವು ಈ ರೀತಿ ಆಯ್ಕೆ ಮಾಡ್ತೀವಿ ಅಂದುಕೊಂಡ್ರಾ? ಇಲ್ವೇ ಇಲ್ಲ. ಕಷ್ಟ ಇರೋರನ್ನ ನಾವು ಸೆಲೆಕ್ಟ್ ಮಾಡೋದಿಲ್ಲ. ಕಷ್ಟವನ್ನ ಮರೆತು ಹಾಡೋರನ್ನ ಸೆಲೆಕ್ಟ್ ಮಾಡ್ತೀವಿ ಅಂತ  ಹೇಳ್ತಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.