2026-06-25 03:50:51

davanagere; bus axel cut, one died, 20 serious| ದಾವಣಗೆರೆ: ಆ್ಯಕ್ಸಲ್ ಕಟ್‌, ಬಸ್ ಪಲ್ಟಿಯಾಗಿ ಓರ್ವ ಸಾವು, 20 ಮಂದಿ ಗಂಭೀರ| Speed News Kannada

davanagere; bus axel cut, one died, 20 serious| ದಾವಣಗೆರೆ: ಆ್ಯಕ್ಸಲ್  ಕಟ್‌, ಬಸ್ ಪಲ್ಟಿಯಾಗಿ ಓರ್ವ ಸಾವು, 20 ಮಂದಿ ಗಂಭೀರ| Speed News Kannada

ದಾವಣಗೆರೆ: ಸರ್ಕಾರಿ ಬಸ್‌ವೊಂದರ ಆ್ಯಕ್ಸಲ್ ತುಂಡಾದ ಪರಿಣಾಮ, ಬಸ್‌ ಪಲ್ಟಿಯಾಗಿ ಓರ್ವ ಯುವಕ ಮೃತಪಟ್ಟ ಭೀಕರ ಅಪಘಾತ  ದಾವಣೆಗೆರೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, 20 ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ದರ್ಶನ್ (21) ಎಂದು ಗುರುತಿಸಲಾಗಿದೆ.

ಜಿಲ್ಲೆಯ ಚನ್ನಗಿರಿ ತಾಲೂಕಿನ ಮರಬನಹಳ್ಳಿಯಲ್ಲಿ ಸರ್ಕಾರಿ ಬಸ್‌ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆ ಮತ್ತು ಬಸವಾಪಟ್ಟಣ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಲ್ಟಿಯಾದ ಬಸ್‌ ದಾವಣಗೆರೆಯಿಂದ ಬಸವಾಪಟ್ಟಣದತ್ತ ಹೊರಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರುಗಳ ನಡುವೆ ಡಿಕ್ಕಿ;ಇಬ್ಬರು ಸಾವು:
ಮತ್ತೊಂದು ಪ್ರಕರಣದಲ್ಲಿ ದಾವಣಗೆರೆ ನಗರದ ಶಾಮನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಯುವಕರು ಅಸುನೀಗಿದ್ದಾರೆ. ಮೃತರನ್ನು ಗೌತಮ್ ( 29) ಮನೋಜ್ (29) ಎಂದು ಗುರುತಿಸಲಾಗಿದೆ. ಇವರು ಮದುವೆಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಎರಡೂ ಕಾರುಗಳು ಜಖಂಗೊಂಡಿವೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಂಡಿದ್ದಾರೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.