2026-05-04 03:08:43

Davanager south congress lead ದಾವಣಗೆರೆ ದಕ್ಷಿಣ: ಅಲ್ಪ ಮುನ್ನೆಡೆ ಕಾಯ್ದುಕೊಂಡ ಕೈ ಅಭ್ಯರ್ಥಿ ಸಮರ್ಥ್‌ ಶಾಮನೂರು Speed News Kannada

Davanager south congress lead ದಾವಣಗೆರೆ ದಕ್ಷಿಣ: ಅಲ್ಪ ಮುನ್ನೆಡೆ ಕಾಯ್ದುಕೊಂಡ ಕೈ ಅಭ್ಯರ್ಥಿ ಸಮರ್ಥ್‌ ಶಾಮನೂರು Speed News Kannada

ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ  ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಶಾಮನೂರು ಅಲ್ಪಮತಗಳ  ಮುನ್ನೆಡೆ ಕಾಯ್ದುಕೊಂಡಿದ್ದಾರೆ.  14ನೇ ಸುತ್ತಿನ ಎಣಿಕೆ ಪೂರ್ಣಗೊಂಡ ನಂತರ ಅವರು 7,423 ಮತಗಳಿಂದ ಮುಂದಿದ್ದಾರೆ. ಆರಂಭದಲ್ಲಿ ಮುಂದಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ ಈಗ ಹಿನ್ನೆಡೆ ಅನುಭವಿಸುತ್ತಿದ್ದಾರೆ.

ಏಳು ಸುತ್ತಿನವರೆಗೆ ಬಿಜೆಪಿ ಮುನ್ನೆಡೆ ಕಾಯ್ದುಕೊಂಡಿತ್ತು. ನಂತರ ಕಾಂಗ್ರೆಸ್‌ ಮುನ್ನೆಡೆ ಮುಂದುವರೆಯಿತು. 9 ಸುತ್ತಿನಲ್ಲಿ 3986; 10 ನೇ ಸುತ್ತಿನಲ್ಲಿ 5229 ; 11ನೇ ಸುತ್ತಿನಲ್ಲಿ 7916; 12 ನೇ ಸುತ್ತಿನಲ್ಲಿ  9952; 13 ನೇ ಸುತ್ತಿನಲ್ಲಿ  8813; 14 ನೇ ಸುತ್ತಿನಲ್ಲಿ  7,423 ಮುನ್ನೆಡೆ ಕಾಯ್ದುಕೊಂಡಿದ್ದರು.

16ನೇ ಸುತ್ತಿನ ಎಣಿಕೆ ವರದಿ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿ 49,820 ಮತಗಳನ್ನು (44.3%) ಪಡೆದಿದ್ದು, ಬಿಜೆಪಿ ಅಭ್ಯರ್ಥಿ 41,215 ಮತಗಳನ್ನು (36.6%) ಪಡೆದಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ 16,245 ಮತಗಳು, ಆಮ್ ಆದ್ಮಿ ಪಕ್ಷದ ಕೆ.ಎಸ್. ಶಿವಕುಮಾರಪ್ಪ 285 ಮತಗಳನ್ನು ಪಡೆದಿದ್ದಾರೆ. NOTAಗೆ 372 ಮತಗಳು ದಾಖಲಾಗಿವೆ.

ಒಟ್ಟು 1,10,402 ಮತಗಳು ಎಣಿಕೆಗೊಂಡಿದ್ದು, ಇನ್ನೂ 5 ಸುತ್ತುಗಳ ಎಣಿಕೆ ಬಾಕಿ ಇದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಸ್ತುತ 8,605 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಒಟ್ಟಾರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯ ದಾಖಲಿಸಲಿದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ದಾವಣಗೆರೆಯಲ್ಲಿ ಸ್ವಲ್ಪ ಮುನ್ನಡೆ ಕಡಿಮೆಯಾಗಿದೆ. ಆದರೆ ನಾವು ಗೆಲ್ಲುತ್ತೇವೆ. ನಮ್ಮದೇ ಕಾರಣಗಳಿಂದ ದಾವಣಗೆರೆಯಲ್ಲಿ ಲೀಡ್ ಕಡಿಮೆ ಆಗಿದೆ ಎಂದಿದ್ದಾರೆ.  ಬಾಗಲಕೋಟೆ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್‌ ಜಯ ದಾಖಲಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.