ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಅವರ ಇತ್ತೀಚಿನ ದಿನಗಳ ಸ್ಥಿತಿಯನ್ನು ಕುರಿತು ಖಳನಟ ಕಿಲ್ಲರ್ ವೆಂಕಟೇಶ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಕುರಿತು ಮಾತನಾಡಿದ ವೆಂಕಟೇಶ್ ಹಿಂದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ತನಗೆ ದರ್ಶನ್ ಮಾಡಿದ ಸಹಾಯವನ್ನೂ ನೆನೆಪಿಸಿಕೊಂಡಿದ್ದಾರೆ.
“ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರ ಜತೆ ನನಗೆ ತುಂಬಾ ಹತ್ತಿರದ ನಂಟು ಇತ್ತ. ಆ ಸಂಬಂಧದಿಂದಲೇ ದರ್ಶನ್ ಕೂಡ ನನಗೆ ತುಂಬ ಹತ್ತಿರದರಾಗಿದ್ದರು. ಅವರು ಯಾವಾಗಲೂ ಹಿರಿಯ ಕಲಾವಿದರನ್ನು ಗೌರವದಿಂದ ಮಾತನಾಡಿಸುತ್ತಿದ್ದರು. ಆ ವಿನಯ, ಗೌರವ ನನಗೆ ಇಷ್ಟವಾಗುತ್ತಿತ್ತು” ಎಂದು ಹೇಳಿದ್ದಾರೆ
ಇತ್ತೀಚಿನ ದಿನಗಳಲ್ಲಿ ದರ್ಶನ್ ಎದುರಿಸುತ್ತಿರುವ ಸಂಕಷ್ಟ ಕುರಿತು ವೆಂಕಟೇಶ್ ಅವರು ಬೇಸರ ವ್ಯಕ್ತಪಡಿಸಿದರು. " ದರ್ಶನ್ ಇಂದಿನ ಸ್ಥಿತಿ ನೋಡಿ ನನಗೂ ಬೇಸರವಾಗುತ್ತದೆ. ಇದೆಲ್ಲವೂ ಬೇಕಾಗಿರಲಿಲ್ಲ ಅನಿಸುತ್ತದೆ. ದರ್ಶನ್ ಪಟ್ಟಿದ್ದು ಕಡಿಮೆ ಕಷ್ಟವೇನಲ್ಲ. ಜೀವನದಲ್ಲಿ ಏರಿಳಿತಗಳು ಸಹಜ, ಆದರೆ ಇಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ" ಎಂದು ವೆಂಕಟೇಶ್ ಹೇಳಿದ್ದಾರೆ.
ನನಗೆ ಕಷ್ಟದ ಸಮಯದಲ್ಲಿ ಅನೇಕರು ಸಹಾಯ ಮಾಡಿದ್ದಾರೆ. ದರ್ಶನ್ ಕೂಡ ನನಗೆ ನೆರವಾಗಿದ್ದಾರೆ. ಆ ಉಪಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ. ಈಗ ಅವರ ಸ್ಥಿತಿ ನೋಡೋಕೆ ಮನಸ್ಸಿಗೆ ನೋವಾಗುತ್ತದೆ" ಎಂದು ವೆಂಕಟೇಶ್ ಭಾವುಕರಾಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.