2026-07-23 06:12:45

Darshan | ಜೈಲಿನಲ್ಲಿ ಕದ್ದು ಮುಚ್ಚಿ ಬೇಟಿಯಾದ ದರ್ಶನ್.? | Speed News Kannada

Darshan | ಜೈಲಿನಲ್ಲಿ ಕದ್ದು ಮುಚ್ಚಿ ಬೇಟಿಯಾದ ದರ್ಶನ್.? | Speed News Kannada

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಜೈಲು ಪಾಲಾಗಿದ್ದಾರೆ. ದರ್ಶನ್ ನೋಡಲು ಕೈದಿಗಳಷ್ಟೇ ಅಲ್ಲ ಪೊಲೀಸ್ ಸಿಬ್ಬಂದಿಗಳು ಕೂಡ ಹರಸಾಹಸಪಟ್ಟಿದ್ದಾರೆ. ಸಿಸಿಟಿವಿ ಕ್ಯಾಮೆರಾ ಕಣ್ತಪ್ಪಿಸಿ. ದರ್ಶನ್ ಅವರನ್ನ ನೋಡಲು ಅನುವು ಮಾಡಿಕೊಟ್ಟಿದ್ದರೆ.
ಆರೋಪಿಯನ್ನು ಜೈಲಿಗೆ ಬಿಡಲು ಯಲಹಂಕ ಕಾನ್ಸ್ಟೇಬಲ್ ಗಣೇಶ್ ಎಂಬುವವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರಂತೆ. ಈ ವೇಳೆ ನಟ ದರ್ಶನ್ ಅವರನ್ನು ಭೇಟಿ ಮಾಡ್ಬೇಕು ಎಂದು ಗಣೇಶ್ ಕೇಳಿಕೊಂಡಿದ್ದಾರೆ. ಸ್ನೇಹಿತನ ಆಸೆ ಈಡೇರಿಸಲು ನಟ ದರ್ಶನ್ ಬ್ಯಾರಕ್ಗೆ ಪೇದೆ ಗಣೇಶ್ ಅವರನ್ನ ಪ್ರಭು ಶಂಕರ್ ಕರೆದುಕೊಂಡು ಹೋಗಿದ್ದರೆ ಎಂದು ಆರೋಪ ಇದೆ. ನಟ ದರ್ಶನ್ ಅವರನ್ನ ತೋರಿಸಿದ್ದ ಜೈಲು ಸಿಬ್ಬಂದಿಯನ್ನ ಚಾಮರಾಜನಗರ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಇತ್ತ ಕದ್ದು ಮುಚ್ಚಿ ಆರೋಪಿ ದರ್ಶನ್ ಅವರನ್ನ ಮಾತಾಡಿಸಿ ಬಂದಿದ್ದ ಯಲಹಂಕ ಕಾನ್ಸ್ಟೇಬಲ್ ಗಣೇಶ್ ವಿರುದ್ಧವೂ ಕ್ರಮಕ್ಕೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.