ಬೆಂಗಳೂರು: "ಡಿ-ಬಾಸ್ ದರ್ಶನ್” ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಹೊರಬರುತ್ತಾರೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯ ನಿಜವಾದಲ್ಲಿ ಛಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲರಿಗೂ ದರ್ಶನ ನೀಡಲಿದ್ದಾರೆ.
ಇತ್ತೀಚೆಗೆ ಕುಣಿಗಲ್‌ನಲ್ಲಿ ನಡೆದ ಶಿವರಾತ್ರಿ ಸ್ವರಾಭಿಷೇಕ ಕಾರ್ಯಕ್ರಮದಲ್ಲಿ ರವಿಚಂದ್ರನ್ ಈ ಭವಿಷ್ಯ ನುಡಿದಿದ್ದಾರೆ.
ಕಾರ್ಯಕ್ರಮ ಆರಂಭವಾಗಿ ರವಿಚಂದ್ರನ್ ಮಾತನಾಡಲು ಆಗಮಿಸುತ್ತಿದ್ದಂತೆ ಅಭಿಮಾನಿಗಳು 'ಡಿ-ಬಾಸ್.. ಡಿ-ಬಾಸ್' ಎಂದು ಕೂಗಲು ಆರಂಭಿಸಿದರು. ಆಗ ರವಿಮಾಮ ಭಾವುಕರಾಗಿ ಪ್ರತಿಕ್ರಿಯಿಸಿದರು.
ʼನಾನು ಈ ಬಾಯಲ್ಲಿ ಹೇಳಿದ್ದೀನಿ, ಬರ್ತಾರೆ ನೆನಪಿಟ್ಟುಕೊ. ನಿನಗವನು ಡಿ-ಬಾಸ್ ಇರಬಹುದು, ಆದರೆ ಆ ಡಿ-ಬಾಸ್ ನನಗೆ ಮಗ ಇದ್ದಂತೆ. ಒಂದು ಕೆಟ್ಟ ಘಳಿಗೆ ಮನುಷ್ಯನನ್ನು ಕುಗ್ಗಿಸುತ್ತದೆ. ಆದರೆ ದೇವರಿಗೆ ಪೂಜೆ ಮಾಡಿ, ಅವನು ಖಂಡಿತ ಮೇಲೆದ್ದು ಬರ್ತಾನೆ" ಎಂದರು.
ರವಿಚಂದ್ರನ್ ಅವರ ಈ ಮಾತುಗಳು ದರ್ಶನ್ ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿರುವುದಂತೂ ಸುಳ್ಳಲ್ಲ.
ಅಂದಹಾಗೆ ಇಂದು ದರ್ಶನ್ ಹುಟ್ಟುಹಬ್ಬ ಆಚರಿಸಲಾಗಿದೆ. ಸಡಗರ ಸಂಭ್ರಮ ಮನ ಮಾಡಿದ್ದರೂ ದೈಹಿಕವಾಗಿ ಅವರು ನಮ್ಮೊಂದಿಗಿಲ್ಲ, ಜೈಲಿನಲ್ಲಿದ್ದಾರೆ ಎಂಬ ನೋವು ಕಾಡಿದ್ದಂತೂ ನಿಜ!