2026-06-08 01:29:00

Darshan gets a release | ದರ್ಶನ್ ಗೆ ಬಿಡುಗಡೆ ಭಾಗ್ಯ ಕ್ರೇಜಿಸ್ಟಾರ್‌ ರವಿಚಂದ್ರನ್‌ ಭವಿಷ್ಯ ಅಭಿಮಾನಿಗಳು ಫುಲ್‌ ಖುಷ್ | Speed News Kannada

Darshan gets a release | ದರ್ಶನ್ ಗೆ ಬಿಡುಗಡೆ ಭಾಗ್ಯ ಕ್ರೇಜಿಸ್ಟಾರ್‌ ರವಿಚಂದ್ರನ್‌ ಭವಿಷ್ಯ ಅಭಿಮಾನಿಗಳು ಫುಲ್‌ ಖುಷ್ | Speed News Kannada

ಬೆಂಗಳೂರು: "ಡಿ-ಬಾಸ್ ದರ್ಶನ್‌” ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಹೊರಬರುತ್ತಾರೆ  ಎಂದು ಕ್ರೇಜಿಸ್ಟಾರ್‌ ರವಿಚಂದ್ರನ್‌ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯ ನಿಜವಾದಲ್ಲಿ ಛಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಎಲ್ಲರಿಗೂ ದರ್ಶನ ನೀಡಲಿದ್ದಾರೆ.
ಇತ್ತೀಚೆಗೆ ಕುಣಿಗಲ್‌ನಲ್ಲಿ ನಡೆದ ಶಿವರಾತ್ರಿ ಸ್ವರಾಭಿಷೇಕ ಕಾರ್ಯಕ್ರಮದಲ್ಲಿ ರವಿಚಂದ್ರನ್ ಈ ಭವಿಷ್ಯ ನುಡಿದಿದ್ದಾರೆ.
ಕಾರ್ಯಕ್ರಮ ಆರಂಭವಾಗಿ ರವಿಚಂದ್ರನ್‌ ಮಾತನಾಡಲು ಆಗಮಿಸುತ್ತಿದ್ದಂತೆ ಅಭಿಮಾನಿಗಳು 'ಡಿ-ಬಾಸ್.. ಡಿ-ಬಾಸ್' ಎಂದು ಕೂಗಲು ಆರಂಭಿಸಿದರು. ಆಗ  ರವಿಮಾಮ ಭಾವುಕರಾಗಿ ಪ್ರತಿಕ್ರಿಯಿಸಿದರು. 
ʼನಾನು ಈ ಬಾಯಲ್ಲಿ ಹೇಳಿದ್ದೀನಿ, ಬರ್ತಾರೆ ನೆನಪಿಟ್ಟುಕೊ. ನಿನಗವನು ಡಿ-ಬಾಸ್ ಇರಬಹುದು, ಆದರೆ ಆ ಡಿ-ಬಾಸ್ ನನಗೆ ಮಗ ಇದ್ದಂತೆ. ಒಂದು ಕೆಟ್ಟ ಘಳಿಗೆ ಮನುಷ್ಯನನ್ನು ಕುಗ್ಗಿಸುತ್ತದೆ. ಆದರೆ ದೇವರಿಗೆ ಪೂಜೆ ಮಾಡಿ, ಅವನು ಖಂಡಿತ ಮೇಲೆದ್ದು ಬರ್ತಾನೆ" ಎಂದರು. 
ರವಿಚಂದ್ರನ್ ಅವರ ಈ ಮಾತುಗಳು ದರ್ಶನ್ ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿರುವುದಂತೂ ಸುಳ್ಳಲ್ಲ.
ಅಂದಹಾಗೆ ಇಂದು ದರ್ಶನ್‌ ಹುಟ್ಟುಹಬ್ಬ ಆಚರಿಸಲಾಗಿದೆ. ಸಡಗರ ಸಂಭ್ರಮ ಮನ ಮಾಡಿದ್ದರೂ ದೈಹಿಕವಾಗಿ ಅವರು ನಮ್ಮೊಂದಿಗಿಲ್ಲ, ಜೈಲಿನಲ್ಲಿದ್ದಾರೆ ಎಂಬ ನೋವು ಕಾಡಿದ್ದಂತೂ ನಿಜ!

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.