2026-03-07 01:46:10

Darshan Celebrated His Birthday in Jail | ಜೈಲಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ದರ್ಶನ್; ಅಭಿಮಾನಿಗಳಿಗೆ ಇಲ್ಲ ದಾಸನ ದರ್ಶನ | Speed News Kannada

Darshan Celebrated His Birthday in Jail | ಜೈಲಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ದರ್ಶನ್; ಅಭಿಮಾನಿಗಳಿಗೆ ಇಲ್ಲ ದಾಸನ ದರ್ಶನ | Speed News Kannada

ಬೆಂಗಳೂರು: ಚಿತ್ರನಟ ದರ್ಶನ್ ಹುಟ್ಟುಹಬ್ಬಕ್ಕೆ ಕೇವಲ 12 ದಿನ ಮಾತ್ರ ಬಾಕಿ ಇವೆ. ಈ ಬಾರಿ ಹುಟ್ಟು ಹಬ್ಬದ ವೇಳೆಗಾದರೂ ದರ್ಶನ್ ಹೊರಗೆ ಬರಬಹುದು ಅಂದುಕೊಂಡಿದ್ರು ಡಿ ಫ್ಯಾನ್ಸ್. ಆದ್ರೆ ದರ್ಶನ್ ಕೇಸ್ ನಡೀತಿರೋ ಹಾದಿ ನೋಡಿದ್ರೆ, ಸದ್ಯಕ್ಕಂತೂ ದಾಸನಿಗೆ ಬಿಡುಗಡೆ ಭಾಗ್ಯ ಇಲ್ಲ ಎಂದು ಭಾವಿಸಬಹುದು. ಹಾಗಾಗಿ ದರ್ಶನ್ ತಮ್ಮ 49ನೇ ಹುಟ್ಟುಹಬ್ಬ ಆಚರಿಸುವುದ ನಿಕ್ಕಿ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಅವರು, ಬಿಡುಗಡೆಯಾಗುತ್ತಾರೆಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. 
ದಾಸನಿಗಿಲ್ಲ ಬಿಡುಗಡೆ ಭಾಗ್ಯ
ಎಸ್! ಇದೇ ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬ. ದರ್ಶನ್ ಹೊರಗಿದ್ರೆ  ಹುಟ್ಟುಹಬ್ಬವನ್ನು ಫ್ಯಾನ್ಸ್ ದೊಡ್ಡದಾಗಿ ಸಲೆಬ್ರೇಟ್ ಮಾಡ್ತಾ ಇದ್ರು. ಕಳೆದ ವರ್ಷ ಆಗಸ್ಟ್‌ನಲ್ಲಿ ಬೇಲ್ ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿದ ಮೇಲೆ , ಹೊಸ ವರ್ಷಕ್ಕೆ ಕೊನೆ ಪಕ್ಷ ಹುಟ್ಟುಹಬ್ಬದ ವೇಳೆಗೆ ದರ್ಶನ್ ಹೊರಬರ್ತಾರೆ ಅಂತ ಫ್ಯಾನ್ಸ್ ಭಾವಿಸಿದ್ರು. ಆದ್ರೆ ಆ ನಿರೀಕ್ಷೆ ಸುಳ್ಳಾಗಿದೆ.
ಮುಂದಿನ ವರ್ಷ ಸಿಗೋಣ ಎಂದಿದ್ದ ದಾಸ:
ದರ್ಶನ್ ಬೇಲ್‌ಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ಕೇಸ್ ಈಗಷ್ಟೇ ಹಿಯರಿಂಗ್ ಹಂತಕ್ಕೆ ಬಂದಿದ್ದು, ಅಸಲಿಗೆ ವಕೀಲರು ಹೇಳೋವರೆಗೂ ದರ್ಶನ್ ಬೇಲ್ ಬಗ್ಗೆ ಯೋಚಿಸುವ ಗೋಜಿಗೂ ಹೋಗಿಲ್ಲ. 2024ರಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ಆರೋಪ ಹೊತ್ತು ಜೈಲ್ ಸೇರಿದ್ದ ದರ್ಶನ್‌ಗೆ ಡಿಸೆಂಬರ್‌ನಲ್ಲಿ ಬೇಲ್ ಸಿಕ್ಕಿತ್ತು. ಕಳೆದ ವರ್ಷ ಬರ್ತ್ಡೇ ಹೊತ್ತಿಗೆ ದರ್ಶನ್ ಹೊರಗಡೆ ಇದ್ರೂ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ವಿಡಿಯೋ ಮೂಲಕ ಬೆನ್ನು ನೋವಿನ ಕಾರಣಕ್ಕೆ ಈ ಬಾರಿ ಸಿಕ್ಕಲ್ಲ. ಮುಂದಿನ ವರ್ಷ ಸಿಗೋಣ ಅಂದಿದ್ರು. ಆದ್ರೆ ಈ ವರ್ಷ ಮತ್ತೆ ಜೈಲು ಸೇರಿದ್ದಾರೆ.
ಪ್ರತಿ ವರ್ಷ ದರ್ಶನ್ ಹುಟ್ಟು ಹಬ್ಬದಂದು ಆರ್ ಆರ್ ನಗರದ ಅವರ ನಿವಾಸ ಜಗಮಗಿಸ್ತಾ ಇತ್ತು. ಮನೆಯ ರಸ್ತೆಯುದ್ದಕ್ಕೂ ಕಟೌಟ್ಸ್ , ಪೋಸ್ಟರ್ಸ್ ರಾರಾಜಿಸ್ತಾ ಇದ್ದವು. ಸಾವಿರಾರು ಅಭಿಮಾನಿಗಳು ದೂರ ದೂರದಿಂದ ಹರಿದು ಬರ್ತಾ ಇದ್ರು. ಎಲ್ಲರಿಗೂ ದರ್ಶನ ಕೊಡ್ತಿದ್ದ ದರ್ಶನ್, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಸ್ತಾ ಇದ್ದರು. 2023ರಲ್ಲಿ ಕೈ ನೋವಿದ್ರೂ ಎಲ್ಲಾ ಅಭಿಮಾನಿಗಳನ್ನ ಎದುರುಗೊಂಡು ಶೇಕ್ ಹ್ಯಾಂಡ್ ಕೊಟ್ಟಿದ್ದು ನೆನಪಿನಲ್ಲಿ ಉಳಿದಿದೆ. ಇಂಥಾ ದೃಶ್ಯ ಮತ್ತೆ ಅದ್ಯಾವಾಗ ನೋಡೋದಕ್ಕೆ ಸಿಕ್ಕುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ಅದು ಅಸಾಧ್ಯ. ಸೋ ದರ್ಶನ್ ಫ್ಯಾನ್ಸ್, ದಾಸನಿಲ್ಲದೇ ಬರ್ತ್ಡೇ ಸೆಲೆಬ್ರೇಟ್ ಮಾಡಲಿಕ್ಕೆ ಸಜ್ಜಾಗ್ತಾ ಇದ್ದಾರೆ. ಅನೇಕ ಕಡೆ ಅಭಿಮಾನಿ ಸಂಘದಿಂದಲೂ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಏನೇ ಆದ್ರೂ ಅದೆಷ್ಟೇ ಸೆಲೆಬ್ರೇಟ್ ಮಾಡಿದ್ರೂ ದರ್ಶನ್ ಇಲ್ಲದ ಬರ್ತ್ಡೇ ಸಪ್ಪೆನೇ. ಅದ್ರಲ್ಲೂ ದರ್ಶನ್ ಬರ್ತ್ಡೇನ ಮೊದಲ ಬಾರಿ ಜೈಲಿನಲ್ಲಿ ಸೆಲೆಬ್ರೇಟ್ ಮಾಡಬೇಕಾಗಿ ಬಂದಿರೋದು ದುರಂತವೇ ಸರಿ!

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.