ರಾಜಕೀಯದಲ್ಲಿ ನಡೆದಿರುವ ಪಕ್ಷ-ವಿಪಕ್ಷಗಳ ನಡುವಿನ ಗೂದ್ದಾಟದಲ್ಲಿ ಈ ಒಬ್ಬ ನಾಯಕನಿಗೆ ಡಾಕ್ಟರೇಟ್ ಪದವಿ ಸಿಕ್ಕಿದೆ. ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ರಿ ಮೈಸೂರಿನಲ್ಲಿ ನಡೆದ 21ನೇ ಘಟಕೋತ್ಸವದಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಸುರೇಶ್ ಅವರ ಮಾರ್ಗದರ್ಶನದಲ್ಲಿ ನಾನು ಮಂಡಿಸಿದ "ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು ಅಧ್ಯಯನ" ಪ್ರಬಂಧಕ್ಕೆ ಮಾನ್ಯ ರಾಜ್ಯಪಾಲರ ಕೈಯಿಂದ ಡಾಕ್ಟರೇಟ್ ಪದವಿ ಸ್ವೀಕರಿಸಿದೆನು.
ಕಲಿಕೆ ಒಂದು ನಿರಂತರವಾದ ಕ್ರಿಯೆ. ನಾನೊಬ್ಬ ನಿರಂತರ ಕಲಿಕೆಯ ವಿದ್ಯಾರ್ಥಿ. ಓದುವುದು ನನ್ನ ಪ್ರಮುಖ ಆಸಕ್ತಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ರಿ ಅಡಿಯಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಸುರೇಶ್ ಅವರ ಮಾರ್ಗದರ್ಶನದಲ್ಲಿ "ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು ಅಧ್ಯಯನ" ಎಂಬ ಪ್ರಬಂಧವನ್ನು ನಿರಂತರವಾದ 4 ವರುಷಗಳ ಅಧ್ಯಯನದೊಂದಿಗೆ 2023 ರಲ್ಲಿ ಪೂರ್ಣಗೊಳಿಸಿ, ಮಂಡಿಸಿದ್ದೇನೆ. ಅಧ್ಯಯನ ಸಂದರ್ಭದಲ್ಲಿ ತಿದ್ದಿ ತೀಡಿ ಅತ್ಯುತ್ತಮವಾಗಿ ಮಾರ್ಗದರ್ಶನ ಮಾಡಿದ ಡಾ. ಸುರೇಶ್ ಅವರಿಗೆ ಮನಪೂರ್ವಕ ಕೃತಜ್ಞತೆಗಳು. ಈ ಸಂದರ್ಭದಲ್ಲಿ ಸಹಕರಿಸಿದ ನನ್ನ ಎಲ್ಲಾ ಮಾರ್ಗದರ್ಶಕರಿಗೂ ಮಿತ್ರರಿಗೂ ಹೃತ್ಪೂರ್ವಕ ವಂದನೆಗಳು. ನಿಮ್ಮ ಪ್ರೀತಿ ಬೆಂಬಲಕ್ಕೆ ನಾನೆಂದಿಗೂ ಚಿರಋಣಿ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ರಿ ಮೈಸೂರಿನಲ್ಲಿ ನಡೆದ 21ನೇ ಘಟಕೋತ್ಸವದಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಸುರೇಶ್ ಅವರ ಮಾರ್ಗದರ್ಶನದಲ್ಲಿ ನಾನು ಮಂಡಿಸಿದ "ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು ಅಧ್ಯಯನ" ಪ್ರಬಂಧಕ್ಕೆ ಮಾನ್ಯ ರಾಜ್ಯಪಾಲರ ಕೈಯಿಂದ ಡಾಕ್ಟರೇಟ್ ಪದವಿ ಸ್ವೀಕರಿಸಿದೆನು. ಅಂತ ತಮ್ಮ x ಖಾತಯಲ್ಲಿ ಬರೆದುಕೊಂಡಿದ್ದಾರೆ.