2026-03-07 01:26:43

Cricketers Gavaskar Kapil Dev demand treatment for Imran Khan| ಪಾಕ್‌ ಜೈಲಿನಲ್ಲಿರುವ ಇಮ್ರಾನ್‌ ಖಾನ್‌ ಗೆ ಚಿಕಿತ್ಸೆ ನೀಡಲು ಗವಾಸ್ಕರ್ ಕಪಿಲ್ ದೇವ್ ಸೇರಿ ಕ್ರಿಕೆಟಿಗರ ಆಗ್ರಹ | Speed News Kannada

Cricketers Gavaskar Kapil Dev demand treatment for Imran Khan| ಪಾಕ್‌ ಜೈಲಿನಲ್ಲಿರುವ ಇಮ್ರಾನ್‌ ಖಾನ್‌ ಗೆ ಚಿಕಿತ್ಸೆ ನೀಡಲು ಗವಾಸ್ಕರ್ ಕಪಿಲ್ ದೇವ್ ಸೇರಿ ಕ್ರಿಕೆಟಿಗರ ಆಗ್ರಹ | Speed News Kannada

ನವದೆಹಲಿ: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ರಾಜಕೀಯ ಮತ್ತು ಕ್ರಿಕೆಟ್ ಸಂಬಂಧವೂ ಹಳಸಿದೆ.  ಆದರೆ ದಶಕಗಳ ಹಿಂದಿನ ಉಭಯ ದೇಶಗಳ ಕ್ರಿಕೆಟ್‌ ಆಟಗಾರರ ನಡುವಿನ ಸ್ನೇಹ ಮಾತ್ರ ಇಂದಿಗೂ ಉಳಿದುಕೊಂಡು ಬಂದಿದೆ.  ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ.
ಭಾರತ ತಂಡದ ಮಾಜಿ ನಾಯಕರಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರು ಪಾಕಿಸ್ತಾನ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಜೈಲಿನಲ್ಲಿರುವ ಮಾಜಿ ನಾಯಕ, ಮಾಜಿ ಪ್ರದಾನಿಯೂ ಆದ ಇಮ್ರಾನ್ ಖಾನ್ ಅವರ ಆರೋಗ್ಯದತ್ತ ಗಮನ ಹರಿಸುವಂತೆ ಇವರೂ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಕ್ರಿಕಟ್ ತಂಡಗಳ 14 ಮಾಜಿ ನಾಯಕರು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಅವರಿಗೆ ಪತ್ರ ಬರೆದಿದ್ದಾರೆ.
ಪಾಕಿಸ್ತಾನದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಇಮ್ರಾನ್ ಖಾನ್ ಅವರನ್ನು2023ರಿಂದ ಜೈಲಿನಲ್ಲಿ ಇಡಲಾಗಿದೆ.  ಜೈಲಿನಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಬಲಗಣ್ಣಿನ ದೃಷ್ಟಿಯನ್ನು ಬಹುತೇಕ ಕಳೆದುಕೊಂಡಿದ್ದಾರೆ. ಆದರೂ ಅವರ ಆರೋಗ್ಯ ಕುರಿತು ಕಾಳಜಿ ವಹಿಸುತ್ತಿಲ್ಲ ಎಂಬ ವರದಿಗಳು ಪ್ರಕಟವಾಗುತ್ತಲೇ ಇವೆ. 
ಪಾಕ್‌ ಪ್ರಧಾನಿಗೆ 14 ಮಾಜಿ ನಾಯಕರ ಪತ್ರ:
ಕ್ರಿಕೆಟ್ ಗೆ ಅಪಾರ ಕೊಡುಗೆ ನೀಡಿರುವ ಇಮ್ರಾನ್‌ ಖಾನ್‌ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಜಂಟಿಯಾಗಿ ಮನವಿ ಮಾಡಿದ್ದಾರೆ. ಈ ಪತ್ರಕ್ಕೆ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಗ್ರೆಗ್ ಚಾಪೆಲ್, ಮೈಕೆಲ್ ಅಥರ್ಟನ್, ಅಲನ್ ಬಾರ್ಡರ್, ಮೈಕೆಲ್ ಬ್ರಿಯಾರ್ಲಿ, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಡೇವಿಡ್ ಗೋವರ್, ಕಿಮ್ ಹ್ಯೂಸ್, ನಾಸರ್ ಹುಸೇನ್, ಕ್ಲೈವ್ ಲಾಯ್ಡ್, ಸ್ಟೀವ್ ವಾ ಮತ್ತು ಜಾನ್ ರೈಟ್ ಸಹಿ ಹಾಕಿದ್ದಾರೆ
ಪತ್ರದ ಸಾರಾಂಶ ಹೀಗಿದೆ:
"ಇಮ್ರಾನ್ ಖಾನ್ ಅವರು ಕ್ರೀಡೆಗೆ ನೀಡಿದ ಕೊಡುಗ ಅಪಾರ. 1992 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ನಾಯಕರಾಗಿದ್ದ ಅವರ 1992ರ ಐತಿಹಾಸಿಕ ಕ್ರಿಕೆಟ್ ವಿಶ್ವಕಪ್ ಗೆಲುವಿಗೆ ಕಾರಣರಾಗಿದ್ದಾರೆ. ಈ ವಿಜಯವು ಗಡಿಗಳನ್ನು ಮೀರಿ ಯುವಪೀಳಿಗೆಗೆ ಸ್ಫೂರ್ತಿಯಾಗಿದೆ. ನಮ್ಮಲ್ಲಿ ಅನೇಕರು ಅವರ ವಿರುದ್ಧ ಆಡಿದ್ದೇವೆ, ಮೈದಾನ ಹಂಚಿಕೊಂಡಿದ್ದೇವೆ ಅಥವಾ ಅವರ ಸರ್ವತೋಮುಖ ಪ್ರತಿಭೆ, ವರ್ಚಸ್ಸು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ನೋಡಿ ಇಷ್ಟಪಟ್ಟಿದ್ದೇವೆ ಎಂದಿದ್ದಾರೆ.
ಆದರೆ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿರುವ ಅವರ ಆರೋಗ್ಯ ಕ್ಷೀಣಿಸಿದೆ ಎಂಬ ವರದಿಗಳು ಪ್ರಕಟವಾಗುತ್ತಿವೆ.
ಆದ್ದರಿಂದ ಅವರಿಗೆ ತಜ್ಞ ವೈದ್ಯರಿಂದ ವೈದ್ಯಕೀಯ ಚಿಕಿತ್ಸೆ ನೀಡಬೇಕು.  ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಹತ್ತಿರದ ಕುಟುಂಬ ಸದಸ್ಯ ಭೇಟಿಗೆ ಅವಕಾಶ ನೀಡಬೇಕು ಎಂದೂ ಆಗ್ರಹಪಡಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.