2026-06-08 01:26:45

Controversy over Dhurandhara-2 movie rages on|ಧುರಂಧರ್-2 ಸಿನಿಮಾ ಸುತ್ತ ವಿವಾದದ ಕಿಚ್ಚು, ನಮೋ ಗರಂ|Speed News Kannada

Controversy over Dhurandhara-2 movie rages on|ಧುರಂಧರ್-2 ಸಿನಿಮಾ ಸುತ್ತ ವಿವಾದದ ಕಿಚ್ಚು, ನಮೋ ಗರಂ|Speed News Kannada

ಸಿನಿಮಾ ಮತ್ತು ರಾಜಕೀಯ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿರುವ ಘಟನೆ. ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕೇರಳದಲ್ಲಿ ನಡೆದ ಭಾಷಣದಲ್ಲಿ ಪ್ರಧಾನಿ ಮೋದಿ, ಧುರಂಧರ್, ಕೇರಳ ಕಥ ಮತ್ತು ಕಾಶ್ಮೀರ ಫೈಲ್ಸ್ ಸಿನಿಮಾಗಳನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

ಈ ಸಿನಿಮಾಗಳು ಬಿಡುಗಡೆಯಾದಾಗ ಅವುಗಳನ್ನು ಸುಳ್ಳು, ಪ್ರೊಪಗಾಂಡ ಎಂದು ಟೀಕಿಸಲಾಯಿತು. ಇದೇ ರೀತಿ ಎಫ್‌ಸಿಆರ್‌ಎ ಕಾಯ್ದೆ ಮತ್ತು ಯುಸಿಸಿ ವಿಷಯಗಳಲ್ಲೂ ಸುಳ್ಳು ಮಾಹಿತಿ ಹಬ್ಬಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ. ಮೋದಿಯವರ ಭಾಷಣದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಕೆಲವರು ಈ ಸಿನಿಮಾಗಳನ್ನು ಪ್ರಧಾನಿ ಸಮರ್ಥಿಸುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಕೆಲವರು ಇವುಗಳನ್ನು ಪ್ರೊಪಗಾಂಡ ಎಂದು ಟೀಕಿಸಿದ ಕಾರಣ ಈಗ ಸ್ಪಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲವರು, ಪ್ರಧಾನಿ ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿತ್ತು ಎಂದು ಟೀಕಿಸಿದ್ದಾರೆ.ಇದರ ನಡುವೆ, ನಿರ್ದೇಶಕ ಆದಿತ್ಯ ಧರ್ಅವರ ‘ಧುರಂಧರ್’ ಸಿನಿಮಾದ ನೈಜತೆ ಕುರಿತು ಮತ್ತೆ ಚರ್ಚೆ ಜೋರಾಗಿದೆ. ಒಟ್ಟಿನಲ್ಲಿ, ಸಿನಿಮಾ ಮತ್ತು ರಾಜಕೀಯದ ನಡುವಿನ ಈ ಚರ್ಚೆ ಇನ್ನಷ್ಟು ತೀವ್ರಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಹೊಸ ಪ್ರಶ್ನೆಗಳನ್ನು ಎಬ್ಬಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.