2026-03-07 06:15:15

Congress Outraged Over Suspension Of Eight Opposition MPs | ಲೋಕಸಭೆಯಲ್ಲಿಗದ್ದಲ ಎಬ್ಬಿಸಿದ ವಿಪಕ್ಷಗಳ ಎಂಟು ಸಂಸದರ ಅಮಾನತು: ಕಾಂಗ್ರೆಸ್‌ ಆಕ್ರೋಶ | Speed News Kannada

Congress Outraged Over Suspension Of Eight Opposition MPs  | ಲೋಕಸಭೆಯಲ್ಲಿಗದ್ದಲ ಎಬ್ಬಿಸಿದ ವಿಪಕ್ಷಗಳ ಎಂಟು ಸಂಸದರ ಅಮಾನತು: ಕಾಂಗ್ರೆಸ್‌ ಆಕ್ರೋಶ | Speed News Kannada

ಹೊಸದಿಲ್ಲಿ : ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದೂ ಸಹ ಸದನದಲ್ಲಿ ಇನ್ನೂ ಪ್ರಕಟವಾಗದ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನಾರವಣೆ ಅವರ ಆತ್ಮಕಥೆಯ ಲೇಖನವೊಂದನ್ನು ಪ್ರಸ್ತಾಪಿಸುತ್ತಿದ್ದಂತೆ ಇಂದೂ ಸಹ ಸದನದಲ್ಲಿ ಕೋಲಾಹಲ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಸನದ ನಿಯಮಗಳನ್ನು ಉಲ್ಲಂಘಿಸಿದ ಎಂಟು ಕಾಂಗ್ರೆಸ್‌ ಸದಸ್ಯರನ್ನು ಸ್ಪೀಕರ್‌ ಬಿರ್ಲಾ ಅವರು ಅಮಾನತುಗೊಳಿಸಿದರು. ಹಿಬಿ ಈಡನ್‌, ಅಮರೀಂದರ್‌ ಸಿಂಗ್‌ ರಾಜಾ ವಾರಿಂಗ್‌, ಮಾಣಿಕಂ ಟಾಗೂರ್‌, ಗುರ್ಜೀತ್‌ ಸಿಂಗ್‌ ಔಜಾ, ಕಿರಣ್‌ ಕುಮಾರ್‌ ರೆಡ್ಡಿ, ಪ್ರಶಾಂತ್‌ ಪಡೋಲೆ, ಡೀನ್‌ ಕುರಿಯಾಕೊಸೆ ಮತ್ತು ಸಿಪಿಐಎಂನ ಎಸ್.ವೆಂಕಟೇಶ್ವರನ್‌ ಅಮಾನತ್ತಾದ ಸದಸ್ಯರು.
ವಿಷಯ ಪ್ರಸ್ತಾಪಿಸಿದ ರಾಹುಲ್ ಗಾಂಧಿ ವಿರುದ್ಧ ಆಡಳಿತಾರೂಢ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದರೆ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು.
ಎಸ್‌ಪಿ, ಟಿಎಂಸಿ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಫೀಕರ್ ಪೀಠದತ್ತ ಪೇಪರ್ ಎಸೆದ ಈ 7 ಸಂಸದರನ್ನು ಸ್ಪೀಕರ್ ಬಿರ್ಲಾ ಅಮಾನತುಗೊಳಿಸಿದ್ದಾರೆ.
 ಅವರು ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡುವಾಗ, ಇಂದೂ ಸಹ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನಾರವಣೆ ಅವರ ಪ್ರಕಟವಾಗದ ಪುಸ್ತಕದ ಭಾಗವನ್ನು ಪ್ರಸ್ತಾಪಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಯಾರೇ ಆಗಿದ್ದರೂ ಸಭಾಧ್ಯಕ್ಷರ ಅನುಮತಿಯೊಂದಿಗೆ ಮಾತ್ರ ಮಾತನಾಡಬೇಕು ಎಂದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.