2026-06-01 11:23:09

ಕಾಂಗ್ರೆಸ್‌ ಕೆಟ್ಟು ಹೋಗಿರುವ ಎಂಜಿನ್; ಶಿವಕುಮಾರ್‌ ಹೇಗೆ ಓಡಿಸ್ತಾರೆ?; ಆರ್‌ ಅಶೋಕ್‌ ವ್ಯಂಗ್ಯ|Speed News Kannada

ಕಾಂಗ್ರೆಸ್‌ ಕೆಟ್ಟು ಹೋಗಿರುವ ಎಂಜಿನ್; ಶಿವಕುಮಾರ್‌ ಹೇಗೆ ಓಡಿಸ್ತಾರೆ?; ಆರ್‌ ಅಶೋಕ್‌ ವ್ಯಂಗ್ಯ|Speed News Kannada

ಬೆಂಗಳೂರು: ಬೆಂಗಳೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಬಸ್ ಎಂಜಿನ್ ಕೆಟ್ಟು ಹೋಗಿದೆ, ಡ್ರೈವರ್ ಬದಲಾಗಿದ್ದಾರೆ. ಕೆಟ್ಟು ಹೋಗಿರುವ ಬಸ್‌ ಓಡಲು ಸಾಧ್ಯವೇ? ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಕೆಟ್ಟು ಹೋಗಿರುವ,  ಸಾಲ ಮಾಡಿ ಡಿಸೇಲ್ ಹಾಕಿಸೋ ವಾಹನವನ್ನು ಶಿವಕುಮಾರ್‌ ಅವರಿಗೆ ಕೊಟ್ಟಿದ್ದಾರೆ. ರಾಜ್ಯದ ಸಾಲ ರೂ.7.54 ಲಕ್ಷ ಕೋಟಿಯಷ್ಟಿದೆ. ಆದಾಯದಕ್ಕಿಂತ ಸಾಲವೇ ಹೆಚ್ಚು. ಸಾಲ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರ. ಶಿವಕುಮಾರ್ ಅವರೇ ಈ ಸಾಲ ತೀರಿಸುವವರು ಯಾರು? ನೀವೇ ತೀರಿಸ್ತೀರಾ? ಮುಂದಿನ ಪೀಳಿಗೆ ತೀರಿಸಬೇಕಾ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಇದ್ದಾಗ ಅಭಿವೃದ್ಧಿಗೆ ಎಂದು 86 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿತ್ತು. ಇವರು ಅವೈಜ್ಞಾನಿಕ ಗ್ಯಾರಂಟಿ ತಂದಿದ್ದರಿಂದ ಅಭಿವೃದ್ಧಿಗೆ ಹಣ ಇಲ್ಲವಾಗಿದೆ. ಅವಕಾಶ ಇದ್ದರೂ ಬಿಜೆಪಿ ಸಾಲ ಮಾಡಲಿಲ್ಲ. ನಾವು ಸಮೃದ್ದಿ ಕರ್ನಾಟಕವನ್ನು ಕಾಂಗ್ರೆಸ್‌ಗೆ ಕೈಗೆ ಕೊಟ್ಟಿದ್ದೆವು. ಆದರೆ ಕಾಂಗ್ರೆಸ್ ನವರು ಆರ್ಥಿಕತೆ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರು ದೇಶದಲ್ಲಿ ನಾನೊಬ್ಬನೇ ಅಹಿಂದ ಸಿಎಂ ಎಂದು ಹೇಳುತ್ತಿದ್ದರು. ನನ್ನನ್ನ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಎಂಬ ವಿಶ್ವಾಸ ಅವರಿಗೆ ಇತ್ತು. ರಾಹುಲ್ ಗಾಂಧಿ ಕಿತಾಪತಿಯಿಂದ ಈಗ ಸ್ಥಾನ ಹೋಗಿದೆ‌. ರಾಹುಲ್‌ ಗಾಂಧಿಯವರ ತಂದೆ ರಾಜೀವ್‌ ಗಾಂಧಿ ಅವರು ವೀರೇಂದ್ರ ಪಾಟೀಲ್‌ರನ್ನು ಕಿತ್ತು ಹಾಕಿದರು. ಇಂದಿರಾ ಗಾಂಧಿ ಅವರು  ದೇವರಾಜ್ ಅರಸ್, ಬಂಗಾರಪ್ಪ ಅವರನ್ನು ತೆಗೆದರು. ಇದು ಕಾಂಗ್ರೆಸ್ ಸಂಸ್ಕೃತಿ. ಕಾಂಗ್ರೆಸ್ ದೇಶದಲ್ಲಿ ಹಿಂದುಳಿದ ಸಮುದಾಯಗಳನ್ನ ಗೋ ಬ್ಯಾಕ್ ಮಾಡಿದೆ. ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿರೋಧಿ ಆಗಿದೆ ಎಂದು ಟೀಕಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.