2026-06-08 01:23:29

Congress | Commission | ಕೈ ಸರ್ಕಾರದಲ್ಲೂ ಕಮಿಷನ್ ಸದ್ದು..! | Speed News kannada

Congress | Commission | ಕೈ ಸರ್ಕಾರದಲ್ಲೂ ಕಮಿಷನ್ ಸದ್ದು..! | Speed News kannada

ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಕಮಿಷನ್ ಭೂತ ಈಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮುನ್ನೆಲೆಗೆ ಬಂದದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಮಾಡಿದ್ದ ಆರೋಪ ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ನ ಹೋರಾಟಕ್ಕೆ ಪ್ರಬಲ ಅಸ್ತ್ರವಾಗಿತ್ತು ಕಮಿಷನ್ ಸರ್ಕಾರ ಎಂದು ಆರೋಪಿಸಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಭಿಯಾನವನ್ನು ಕೂಡ ನಡೆಸಿತ್ತು. 

ಈಗ ಮತ್ತೆ ಧನ್ಯತ್ತಿರುವ ಗುತ್ತಿಗೆದಾರರ ಸಂಘ ರಾಜ್ಯದ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ಹೆಚ್ಚಾಗಿದ್ದ ಹಣ ಬಿಡುಗಡೆಗೆ ಕಮಿಷನ್ ನೀಡಬೇಕು ಇದರ ಪ್ರಮಾಣವೂ ಹಿಂದಿನ ಸರ್ಕಾರಕ್ಕಿಂತ ದುಪಟ್ಟ ಆಗಿದೆ ಅಂತ ಆರೋಪಿಸಲಾಗಿದೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಸಭೆ ಕರೆದರೆ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಮಾಹಿತಿಯನ್ನು ಎಲ್ಲಾ ದಾಖಲೆಗಳೊಂದಿಗೆ ಅವರಿಗೆ ನೀಡುತ್ತೇವೆ ಅಂತ ಅವರೇ ಸೂಕ್ತ ಕ್ರಮ ಕೈಗೊಳ್ಳಲಿ ಅಂತ ಇಲ್ಲಿ ಒತ್ತಾಯಿಸಿದ್ದಾರೆ. 

ಇನ್ನು ನಗರಾಭಿವೃದ್ಧಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಮಧ್ಯವರ್ತಿಗಳು ಆರ್ ಟಿ ನಗರ ರಾಜಾಜಿನಗರದಲ್ಲಿ ಕಚೇರಿ ಮಾಡಿಕೊಂಡಿದ್ದು ಇಲಾಖೆಯನ್ನು ನಿಯಂತ್ರಿಸುತ್ತಿದ್ದಾರೆ ಅಂತ ಮಂಜುನಾಥ್ ಆಪಾದಿಸಿದರು. ಇಲಾಖೆಯ ಮುಖ್ಯ ಇಂಜಿನಿಯರ್ಗಳನ್ನು ಅಲ್ಲಿಗೆ ಕರೆಯಿಸಿ ತಮಗೆ ಬೇಕಾದ ರೀತಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸುತ್ತಿದ್ದಾರೆ ಪ್ಯಾಕೇಜ್ ಟೆಂಡರ್ ಪೇಡ ಅಂತ ಮುಖ್ಯಮಂತ್ರಿ ಅವರು ಸೂಚಿಸಿದ್ದರು ಅದನ್ನೇ ನಿರ್ವಹಿಸಲಾಗುತ್ತಿದೆ ಈ ಬಗ್ಗೆ ಸಚಿವ ಭೈರತಿ ಸುರೇಶ್ ಅವರಿಗೆ ಮೂರು ಬಾರಿ ಪತ್ರ ಬರೆದು ಚರ್ಚಿಸುವಂತೆ ಕೋರಿದರು ಅವರು ಪ್ರತಿಕ್ರಿಯಿಸಿಲ್ಲ. 

ಒಟ್ಟಾರೆ ಕೈ ಸರ್ಕಾರದಲ್ಲೂ ಕಮಿಷನ್ ಸತ್ತು ಮತ್ತೆ ಮುನ್ನಡೆಗೆ ಬಂದಿದ್ದು ಬಿಜೆಪಿ ಸರ್ಕಾರದಲ್ಲೂ ಆಗಿರುವಂತಹ ಕಮಿಷನ್ ಹೀಗೂ ಮತ್ತೆ ರಾಜ್ಯ ಸರ್ಕಾರದಲ್ಲಿ ಇರುವಂತಹ ಸಿಎಂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದ ಆದಿಯನ್ನು ತುಳಿತಾ ಇರೋದು ಜನಸಾಮಾನ್ಯರಲ್ಲಿ ಅಚ್ಚರಿ ಮೂಡಿಸಿದ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.